Advertisement

50 ಲಕ್ಷ ರೂ. ಹಣಕ್ಕಾಗಿ ಬೇಕರಿ ಮಾಲೀಕನ ಅಪಹರಣ: ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರ ಬಂಧನ

11:38 AM Feb 22, 2022 | Team Udayavani |

ವಿಜಯಪುರ: 50 ಲಕ್ಷ ರೂ. ಹಣಕ್ಕಾಗಿ ಬೇಕರಿ ಮಾಲೀಕನನ್ನು ಅಪಹರಿಸಿ, ಮೂವರು ಅಪಹರಣಕಾರರು ಪೊಲೀಸರ ಅತಿಥಿಯಾಗಿರುವ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ.

Advertisement

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ಮಾನಸಿಂಗ್ ಎಂಬ ಬೇಕರಿ ಮಾಲೀಕನನ್ನು ಮೂವರು ಆಗಂತುಕರು ಸೋಮವಾರ ಸಂಜೆ ಇಂಡಿ ಪಟ್ಟಣದಿಂದ ಅಪಹರಿಸಿದ್ದರು.

ಕಾರಿನಲ್ಲಿ ಅಪಹರಣ ಮಾಡಿದ ಬಳಿಕ ಮಾನಸಿಂಗ್ ನ ಕೈ, ಕಾಲುಗಳಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ, ಹಣಕ್ಕೆ ಬೇಡಿಕೆ ಇರಿಸಿದ್ದಾರೆ. 50 ಲಕ್ಷ ರೂ.ಗೆ ಬೇಡಿಕೆ ಇರಿಸಿ ಮಾನಸಿಂಗ್ ನ ಪತ್ನಿ ಹಾಗೂ ಇತರರಿಗೆ ಕರೆ ಮಾಡಿಸಿದ್ದಾರೆ. ಅಂತಿಮವಾಗಿ 20 ಲಕ್ಷ ರೂ. ಕೊಟ್ಟರೆ ಮಾನಸಿಂಗ್ ನನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದರು.

ಇದನ್ನೂ ಓದಿ:ಗಾಂಜಾಕ್ಕಾಗಿಯೇ ಸಿಗರೇಟ್‌ ಸೇದುತ್ತಿರುವ ಯುವಕರು? 1 ತಿಂಗಳಲ್ಲಿ 26 ಗಾಂಜಾ ವ್ಯಸನಿಗಳ ಬಂಧನ!

ವಿಷಯ ತಿಳಿದ ಇಂಡಿ ಪೊಲೀಸರು ಡಿಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯ ಮಾಡಿದ್ದಾರೆ.

Advertisement

ಹಣಕ್ಕೆ ಬೇಡಿಕೆ ಇಟ್ಟು ಮಾನಸಿಂಗ್ ನನ್ನು ಕಾರಿನಲ್ಲಿ ಇರಿಸಿಕೊಂಡು ಓಡಾಡುತ್ತಿದ್ದ ಅಪಹರಣಕಾರ ಆರೋಪಿಗಳು ಝಳಕಿ ಕ್ರಾಸ್‌ನಿಂದ ಲೋಣಿ ಗ್ರಾಮದ ಕಡೆಗೆ ಹೊರಟಿದ್ದಾಗ ಬೆನ್ನಟ್ಟಿದ ಪೊಲೀಸರು ಅಪಹರಣಕಾರರನ್ನು ಸೆರೆ ಹಿಡಿದು, ಮಾನಸಿಂಗ್ ನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಹರಣಕಾರರ ಚಟುವಟಿಕೆ, ಅಪಹರಣ ಮಾಡಿದ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಿಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next