Advertisement
ಈ ವರ್ಷದ 4 ಕೂಟಗಳಲ್ಲಿ ಎದುರಾಳಿಯನ್ನು ಮಣ್ಣುಮುಕ್ಕಿಸಿ ಮೆರೆದಾಡಿದ ಭಜರಂಗ್ ವಿಶ್ವದ ನಂ.1 ರೆಸ್ಲರ್ ಎಂಬ ಹಿರಿಮೆಯೊಂದಿಗೆ 65 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಭಾಗದಲ್ಲಿ ಭಾರತೀಯನಿಗೇ ಆಗ್ರ ಶ್ರೇಯಾಂಕ ಲಭಿಸಿದೆ.
ಈವರೆಗೆ ವಿಶ್ವ ಕುಸ್ತಿಯ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ಏಕೈಕ ಭಾರತೀಯನೆಂದರೆ ಸುಶೀಲ್ . ಈಗ “ಜೀವಮಾನದ ಫಾರ್ಮ್’ನಲ್ಲಿರುವ ಭಜರಂಗ್ ಬಂಗಾರದಿಂದ ಸಿಂಗಾರಗೊಳ್ಳುವುದನ್ನು ಕಾಣಲು ಎಲ್ಲರೂ ಕಾಯುತ್ತಿದ್ದಾರೆ. ಭಜರಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ 2 ಪದಕ ಗೆದ್ದರೂ ಇದರಲ್ಲಿ ಬಂಗಾರದ ಕೊರತೆ ಕಾಡಿದೆ. ಆದರೆ ಈ ಹಾದಿ ಸುಲಭವಲ್ಲ. ರಶ್ಯದ ಗಾಜಿಮುರಾದ್ ರಶಿದೋವ್, ಬಹ್ರೈನ್‌ನ ಹಾಜಿ ಮೊಹಮ್ಮದ್ ಅಲಿ ಮೊದಲಾದವರ ಕಠಿನ ಸವಾಲನ್ನು ಎದುರಿಸಬೇಕಿದೆ.
Related Articles
ಸುಶೀಲ್ ಕುಮಾರ್ 8 ವರ್ಷಗಳ ಸುದೀರ್ಘ ಅವಧಿಯ ಬಳಿಕ ವಿಶ್ವ ಕುಸ್ತಿ ಅಖಾಡಕ್ಕೆ ಇಳಿಯುತ್ತಿರುವುದು ವಿಶೇಷ. ಅವರದು 74 ಕೆಜಿ ವಿಭಾಗದ ಸ್ಪರ್ಧೆಯಾಗಿದೆ. ಗ್ರೀಕೋ-ರೋಮನ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾರತದ ಭರವಸೆಯಾಗಿದ್ದಾರೆ.
Advertisement
ವಿನೇಶ್ ಮೇಲೆ ನಿರೀಕ್ಷೆವನಿತಾ ವಿಭಾಗದಲ್ಲಿ ವಿನೇಶ್ ಪೋಗಟ್ 50 ಕೆಜಿಯಿಂದ 53 ಕೆಜಿಗೆ ತಮ್ಮ ಸ್ಪರ್ಧೆಯನ್ನು ಬದಲಾ ಯಿಸಿದ್ದಾರೆ. ಕಳೆದ 5 ಫೈನಲ್‌ಗಳಲ್ಲಿ 3 ಚಿನ್ನ ಗೆದ್ದ ಹೆಗ್ಗಳಿಕೆ ವಿನೇಶ್ ಪಾಲಿಗಿದೆ. ವಿಶ್ವ ಕುಸ್ತಿಯಲ್ಲಿ ಭಾರತದ ವನಿತಾ ಸ್ಪರ್ಧಿಗಳಾÂರೂ ಈವರೆಗೆ ಚಿನ್ನ ಗೆದ್ದಿಲ್ಲ. ಈ ಬರವನ್ನು ವಿನೇಶ್ ನೀಗುವರೇ ಎಂಬುದೊಂದು ನಿರೀಕ್ಷೆ. ನಿರೀಕ್ಷಿತ ಫಾರ್ಮ್ನಲ್ಲಿಲ್ಲದ ಸಾಕ್ಷಿ ಮಲಿಕ್ ಕೂಡ ಸ್ಪರ್ಧೆಯಲ್ಲಿದ್ದು, ಒತ್ತಡವನ್ನು ಎಷ್ಟರ ಮಟ್ಟಿಗೆ ನಿಭಾಯಿಸಿಯಾರು ಎಂಬುದೊಂದು ಪ್ರಶ್ನೆ. ಪೂಜಾ ಧಂಡಾ, ದಿವ್ಯಾ ಕಕ್ರಾನ್ ವನಿತಾ ವಿಭಾಗದ ಪ್ರಮುಖ ಭರವಸೆಯಾಗಿದ್ದಾರೆ. ಈ ಪಂದ್ಯಾವಳಿಯ ಎಲ್ಲ 3 “ಸ್ಟೈಲ್’ಗಳ 6 ವಿಭಾಗಗಳಲ್ಲಿ 6 ಒಲಿಂಪಿಕ್ ಕೋಟಾಗಳಿವೆ. ವಿಶ್ವ ಕುಸ್ತಿಯಲ್ಲಿ ಭಾರತ ತಂಡ
ಪುರುಷರ ಫ್ರೀಸ್ಟೈಲ್: ರವಿ ಕುಮಾರ್ (57), ರಾಹುಲ್ ಅವಾರೆ (61), ಭಜರಂಗ್ ಪೂನಿಯ (65), ಕರನ್ (70), ಸುಶೀಲ್ ಕುಮಾರ್ (74), ಜೀತೇಂದರ್ (79), ದೀಪಕ್ ಪೂನಿಯ (86), ಪ್ರವೀಣ್ (92), ಮೌಸಮ್ ಖತ್ರಿ (97), ಸುಮಿತ್ ಮಲಿಕ್ (125 ಕೆಜಿ). ಪುರುಷರ ಗ್ರೀಕೋ ರೋಮನ್: ಮಂಜೀತ್ (55), ಮನೀಷ್ (60), ಸಾಗರ್ (63), ಮನೀಷ್ (67), ಯೋಗೇಶ್ (72), ಗುರುಪ್ರೀತ್ ಸಿಂಗ್ (77), ಹರ್‌ಪ್ರೀತ್ ಸಿಂಗ್ (82), ಸುನೀಲ್ ಕುಮಾರ್ (87), ರವಿ (97), ನವೀನ್ (130 ಕೆಜಿ).
ವನಿತೆಯರ ಫ್ರೀಸ್ಟೈಲ್: ಸೀಮಾ (50), ವಿನೇಶ್ ಪೋಗಟ್ (53), ಲಲಿತಾ (55), ಸರಿತಾ (57), ಪೂಜಾ ಧಂಡಾ (59), ಸಾಕ್ಷಿ ಮಲಿಕ್ (62), ನವಜೋತ್ ಕೌರ್ (65), ದಿವ್ಯಾ ಕಕ್ರಾನ್ (68), ಕೋಮಲ್ ಭಗವಾನ್ ಗೋಲೆ (72), ಕಿರಣ್ (76 ಕೆಜಿ).