Advertisement

ದೀಪಾ, ಭಜರಂಗ್ ಗೆ ಖೇಲ್ ರತ್ನ ; ಜಡೇಜಾಗೆ ಅರ್ಜುನ ಪ್ರಶಸ್ತಿ

10:52 AM Aug 19, 2019 | sudhir |

– ಭಜರಂಗ್‌ ಪೂನಿಯ ಜತೆಗೆ ದೀಪಾ ಮಲಿಕ್‌ಗೂ ಒಲಿಯಲಿದೆ ಪರಮೋಚ್ಛ ಕ್ರೀಡಾ ಪ್ರಶಸ್ತಿ

Advertisement

– ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜ, ಮೊಹಮ್ಮದ್‌ ಅನಾಸ್‌ ಸೇರಿ 19 ಕ್ರೀಡಾಪಟುಗಳು

ಹೊಸದಿಲ್ಲಿ: ಪ್ರತಿಷ್ಠಿತ “ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಗೆ ಭಜರಂಗ್‌ ಪೂನಿಯ ಜತೆಗೆ ಮತ್ತೋರ್ವ ಕ್ರೀಡಾ ಸಾಧಕರ ಹೆಸರು ಸೇರ್ಪಡೆಯಾಗಲೂಬಹುದು ಎಂಬ ನಿರೀಕ್ಷೆ ನಿಜವಾಗಿದೆ. ಶನಿವಾರ ಈ ಯಾದಿಗೆ ಪ್ಯಾರಾ ಆ್ಯತ್ಲೀಟ್‌ ದೀಪಾ ಮಲಿಕ್‌ ಹೆಸರನ್ನು ಆಯ್ಕೆ ಮಾಡಲಾಗಿದೆ.

ಇದೇ ವೇಳೆ ಕ್ರೀಡಾ ಸಾಧಕರಿಗೆ ನೀಡಲಾಗುವ “ಅರ್ಜುನ ಪ್ರಶಸ್ತಿ’ಗೆ 19 ಮಂದಿಯನ್ನು ಆರಿಸಲಾಯಿತು. ಕ್ರೀಡಾ ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಯಿತು.

 ಪ್ಯಾರಾಲಿಂಪಿಕ್‌ ಸಾಧಕಿ
48ರ ಹರೆಯದ ದೀಪಾ ಮಲಿಕ್‌ 2016ರ ರಿಯೋ ಪ್ಯಾರಾಲಿಂಪಿಕ್ಸ್‌ ಎಫ್53 ವಿಭಾಗದ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಾಲಿಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ವನಿತಾ ಕ್ರೀಡಾಳು ಎಂಬ ಹಿರಿಮೆ ದೀಪಾ ಅವರದಾಗಿದೆ.

Advertisement

ಬೆನ್ನುಹುರಿಯಲ್ಲಿ ಎದ್ದ ಗಡ್ಡೆಯಿಂದಾಗಿ ಕಳೆದ 17 ವರ್ಷಗಳಿಂದ ದೀಪಾ ಮಲಿಕ್‌ ವೀಲ್‌ಚೇರ್‌ನಲ್ಲೇ ಬದುಕು ಸಾಗಿಸುತ್ತಿದ್ದಾರೆ. ಆವರಿಗೆ 2012ರಲ್ಲಿ ಅರ್ಜುನ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು.

ಕಳೆದ ವರ್ಷವಷ್ಟೇ ದೀಪಾ ಶಾಟ್‌ಪುಟ್‌ ಬಿಟ್ಟು ಜಾವೆಲಿನ್‌ ಮತ್ತು ಡಿಸ್ಕಸ್‌ ತ್ರೋ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸತತ 3 ಏಶ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ವನಿತಾ ಕ್ರೀಡಾಳು ಎಂಬ ಗರಿಮೆಯನ್ನೂ ಹೊಂದಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಶುಕ್ರವಾರ ಖ್ಯಾತ ಕುಸ್ತಿಪಟು ಭಜರಂಗ್‌ ಪೂನಿಯ ಅವರನ್ನು ಖೇಲ್‌ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಜತೆಗೆ, ಈ ಯಾದಿಗೆ ಇನ್ನೊಬ್ಬರ ಹೆಸರು ಕೂಡ ಸೇರ್ಪಡೆಯಾಗಬಹುದು ಎಂಬ ಸುಳಿವು ನೀಡಿತ್ತು.

19 ಮಂದಿ ಅರ್ಜುನರು
ಕ್ರಿಕೆಟಿಗರಾದ ರವೀಂದ್ರ ಜಡೇಜ, ಪೂನಂ ಯಾದವ್‌, ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಸ್ಟಾರ್‌ಗಳಾದ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌, ಮೊಹಮ್ಮದ್‌ ಅನಾಸ್‌, ಸ್ವಪ್ನಾ ಬರ್ಮನ್‌, ಫ‌ುಟ್ಬಾಲರ್‌ ಗುರುಪ್ರೀತ್‌ ಸಿಂಗ್‌ ಸಂಧು, ಹಾಕಿಪಟು ಚಿಂಗ್ಲೆನ್ಸಾನ ಸಿಂಗ್‌ ಕಂಗುಜಮ್‌, ಶೂಟರ್‌ ಅಂಜುಮ್‌ ಮೌದ್ಗಿಲ್‌ ಇವರಲ್ಲಿ ಪ್ರಮುಖರು.

ರಾಷ್ಟ್ರೀಯ ಕ್ರೀಡಾದಿನವಾದ ಆ. 29ರಂದು ರಾಷ್ಟ್ರಪತಿಯವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಸಭೆ ತ್ಯಜಿಸಿದ ಮೇರಿ ಕೋಮ್‌
“ಸ್ವಹಿತಾಸಕ್ತಿ ಸಂಘರ್ಷ’ದ ಬಿಸಿ ಪ್ರಶಸ್ತಿ ಆಯ್ಕೆ ಸಮಿತಿಗೂ ತಟ್ಟಿದ್ದು ಶನಿವಾರದ ಬೆಳವಣಿಗೆಯಾಗಿತ್ತು. ಇದರಿಂದ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದ ಖ್ಯಾತ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌ ಶನಿವಾರದ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಅವರ ವೈಯಕ್ತಿಕ ಕೋಚ್‌ ಚೋಟೆಲಾಲ್‌ ಯಾದವ್‌ ಹೆಸರು ದ್ರೋಣಾಚಾರ್ಯ ಪ್ರಶಸ್ತಿ ಯಾದಿಯಲ್ಲಿದ್ದುದೇ ಇದಕ್ಕೆ ಕಾರಣ.

ಕ್ರೀಡಾ ಪ್ರಶಸ್ತಿ ಪುರಸ್ಕೃತರು

ಖೇಲ್‌ ರತ್ನ
ಭಜರಂಗ್‌ ಪೂನಿಯ (ಕುಸ್ತಿ)
ದೀಪಾ ಮಲಿಕ್‌ (ಪ್ಯಾರಾ ಆ್ಯತ್ಲೀಟ್‌)

ಅರ್ಜುನ ಪ್ರಶಸ್ತಿ
ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ (ಆ್ಯತ್ಲೆಟಿಕ್ಸ್‌)
ಮೊಹಮ್ಮದ್‌ ಅನಾಸ್‌ (ಆ್ಯತ್ಲೆಟಿಕ್ಸ್‌)
ಎಸ್‌. ಭಾಸ್ಕರನ್‌ (ಬಾಡಿ ಬಿಲ್ಡಿಂಗ್‌)
ಸೋನಿಯಾ ಲಾಥರ್‌ (ಬಾಕ್ಸಿಂಗ್‌)
ರವೀಂದ್ರ ಜಡೇಜ (ಕ್ರಿಕೆಟ್‌)
ಚಿಂಗ್ಲೆನ್ಸಾನ ಸಿಂಗ್‌ (ಹಾಕಿ)
ಅಜಯ್‌ ಠಾಕೂರ್‌ (ಕಬಡ್ಡಿ)
ಗೌರವ್‌ ಸಿಂಗ್‌ ಗಿಲ್‌ (ಮೋಟಾರ್‌ ನ್ಪೋರ್ಟ್ಸ್)
ಪ್ರಮೋದ್‌ ಭಗತ್‌ (ಪ್ಯಾರಾ ಬ್ಯಾಡ್ಮಿಂಟನ್‌)
ಅಂಜುಮ್‌ ಮೌದ್ಗಿಲ್‌ (ಶೂಟಿಂಗ್‌)
ಹರ್ಮೀತ್‌ ರಜುಲ್‌ ದೇಸಾಯಿ (ಟೇಬಲ್‌ ಟೆನಿಸ್‌)
ಪೂಜಾ ಧಂಡಾ (ಕುಸ್ತಿ)
ಫೌವಾದ್‌ ಮಿರ್ಜಾ (ಈಕ್ವೆಸ್ಟ್ರಿಯನ್‌)
ಗುರುಪ್ರೀತ್‌ ಸಿಂಗ್‌ ಸಂಧು (ಫ‌ುಟ್‌ಬಾಲ್‌)
ಪೂನಂ ಯಾದವ್‌ (ಕ್ರಿಕೆಟ್‌)
ಸ್ವಪ್ನಾ ಬರ್ಮನ್‌ (ಆ್ಯತ್ಲೆಟಿಕ್ಸ್‌)
ಸುಂದರ್‌ ಸಿಂಗ್‌ ಗುರ್ಜರ್‌ (ಪ್ಯಾರಾ ಆ್ಯತ್ಲೆಟಿಕ್ಸ್‌)
ಬಿ. ಸಾಯಿ ಪ್ರಣೀತ್‌ (ಬ್ಯಾಡ್ಮಿಂಟನ್‌)
ಸಿಮ್ರಾನ್‌ ಸಿಂಗ್‌ ಶೆರ್ಗಿಲ್‌ (ಪೋಲೊ)

ಧ್ಯಾನ್‌ಸಿಂಗ್‌ ಪ್ರಶಸ್ತಿ
ಮ್ಯಾನ್ಯುಯೆಲ್‌ ಫ್ರೆಡ್ರಿಕ್ಸ್‌ (ಹಾಕಿ)
ಅರೂಪ್‌ ಬಸಾಕ್‌ (ಟೇಬಲ್‌ ಟೆನಿಸ್‌)
ಮನೋಜ್‌ ಕುಮಾರ್‌ (ಕುಸ್ತಿ)
ನಿತಿನ್‌ ಕೀರ್ತನೆ (ಟೆನಿಸ್‌)
ಲಾಲ್ರೆಮ್ಸಂಗ (ಆರ್ಚರಿ)

ದ್ರೋಣಾಚಾರ್ಯ ಪ್ರಶಸ್ತಿ
ವಿಮಲ್‌ ಕುಮಾರ್‌ (ಬ್ಯಾಡ್ಮಿಂಟನ್‌)
ಸಂದೀಪ್‌ ಗುಪ್ತಾ (ಟೇಬಲ್‌ ಟೆನಿಸ್‌)
ಮೊಹಿಂದರ್‌ ಸಿಂಗ್‌ ಧಿಲ್ಲೋನ್‌ (ಆ್ಯತ್ಲೆಟಿಕ್ಸ್‌ )

ಜೀವಮಾನ ಸಾಧನೆ ಪ್ರಶಸ್ತಿ
ಮೆರ್ಜ್‌ಬಾನ್‌ ಪಟೇಲ್‌ (ಹಾಕಿ)
ರಾಮ್‌ಬೀರ್‌ ಸಿಂಗ್‌ ಖೋಕರ್‌ (ಕಬಡ್ಡಿ)
ಸಂಜಯ್‌ ಭಾರದ್ವಜ್‌ (ಕ್ರಿಕೆಟ್‌)

19 ಮಂದಿ ಅರ್ಜುನರು
ಕ್ರಿಕೆಟಿಗರಾದ ರವೀಂದ್ರ ಜಡೇಜ, ಪೂನಂ ಯಾದವ್‌, ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಸ್ಟಾರ್‌ಗಳಾದ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌, ಮೊಹಮ್ಮದ್‌ ಅನಾಸ್‌, ಸ್ವಪ್ನಾ ಬರ್ಮನ್‌, ಫ‌ುಟ್ಬಾ ಲರ್‌ ಗುರುಪ್ರೀತ್‌ ಸಿಂಗ್‌ ಸಂಧು, ಶೂಟರ್‌ ಅಂಜುಮ್‌ ಮೌದ್ಗಿಲ್‌ ಇವರಲ್ಲಿ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next