Advertisement

ಜಾಲತಾಣಗಳಿಂದ ಭಜರಂಗ್‌ ದೂರ

02:23 AM Mar 02, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ಮೇಲೆ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಭಾರತದ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪೂನಿಯ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಟ್ವೀಟ್‌ ಒಂದನ್ನು ಮಾಡಿ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ.

Advertisement

“ಇಂದಿನಿಂದಲೇ ನನ್ನೆಲ್ಲ ಸಾಮಾಜಿಕ ಜಾಲತಾಣಗಳನ್ನು ಶಟ್‌ಡೌನ್‌ ಮಾಡಲಿದ್ದೇನೆ. ನಿಮ್ಮನ್ನೆಲ್ಲ ಟೋಕಿಯೊ ಒಲಿಂಪಿಕ್ಸ್‌ ಬಳಿಕ ಭೇಟಿ ಆಗುತ್ತೇನೆ. ಈ ಅವಧಿಯಲ್ಲಿ ನನ್ನ ಮೇಲೆ ಎಂದಿನ ಪ್ರೀತಿಯನ್ನು ಮುಂದುವರಿಸುತ್ತೀರೆಂಬ ನಂಬಿಕೆ ಇದೆ. ಜೈ ಹಿಂದ್‌’ ಎಂದು ಭಜರಂಗ್‌ ಹಿಂದಿಯಲ್ಲಿ ಟ್ವೀಟ್‌ ಮಾಡಿ ಸೋಶಿಯಲ್‌ ಮೀಡಿಯಾಗಳಿಂದ ದೂರ ಸರಿದಿದ್ದಾರೆ.

2019ರ ವಿಶ್ವಕಪ್‌ ಸಾಧನೆಯಿಂದ ಭಜರಂಗ್‌ ಪೂನಿಯ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಭಾರತಕ್ಕೆ ಪದಕ ತರುವ ಭಾರೀ ನಿರೀಕ್ಷೆಯೂ ಇದೆ.

ಅಮೆರಿಕದಲ್ಲಿ ಅಭ್ಯಾಸ
ಇತ್ತೀಚೆಗೆ ಅಮೆರಿಕದ ಮಿಚಿಗನ್‌ನಲ್ಲಿರುವ “ಕ್ಲಿಫ್ ಕೀನ್‌ ರೆಸ್ಲಿಂಗ್‌ ಕ್ಲಬ್‌’ನಲ್ಲಿ ಒಂದು ತಿಂಗಳ ತರಬೇತಿ ಮುಗಿಸಿ ಭಾರತಕ್ಕೆ ಮರಳಿರುವ ಭಜರಂಗ್‌ ಪೂನಿಯ ಇನ್ನು ಗುರುವಾರದಿಂದ ಇಟಲಿಯಲ್ಲಿ ಆರಂಭವಾಗಲಿರುವ ಯುಡಬ್ಲ್ಯುಡಬ್ಲ್ಯು ರ್‍ಯಾಂಕಿಂಗ್‌ ಸರಣಿಯಲ್ಲಿ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next