Advertisement
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರ ಕೊಂಚ ಕಡಿಮೆ. ಈ ಪ್ರದೇಶದಲ್ಲಿ ಹಿರಿಯ ನಾಗರಿಕರು ಹಾಗೂ ಇತರರು ಕಾಲ್ನಡಿಗೆ ವ್ಯಾಯಾಮಕ್ಕೆ ಹೆಚ್ಚು ಸೂಕ್ತವಾಗಿದೆ. ರಸ್ತೆ ಬದಿಯಲ್ಲಿರುವ ಕಾರಣ ಇಲ್ಲಿ ಲೋಕೋಪಯೋಗಿ ಇಲಾ ಖೆಯ ಸಹಕಾರವೂ ಅಗತ್ಯವಾಗಿದೆ. ಮಂಗಳೂರು ಮಹಾನಗರದ ಹೊರ ವಲ ಯದಲ್ಲಿ ಹಿರಿಯ ನಾಗರಿಕರಿಗೆ ಹೊರಗೆ ಕಾಲ್ನಗಡಿಗೆಗೆ, ವ್ಯಾಯಾಮ ಮಾಡಲು, ಮಾನಸಿಕ ಆರೋಗ್ಯಕ್ಕಾಗಿ ಯಾವುದೇ ಸೌಲಭ್ಯ ಇಲ್ಲದಾಗಿತ್ತು. ಹಿರಿಯ ನಾಗರಿಕರಿಗೆ ಹೆಚ್ಚಿನ ರಸ್ತೆ ಗಳಲ್ಲಿ ನಡೆದುಕೊಂಡು ಹೋಗುವ ದುಸ್ತ ರವಾಗಿತ್ತು. ಈ ಬಗ್ಗೆ ಬಜಪೆ ರೋಟರಿ ಕ್ಲಬ್ ಹಲವಾರು ವರ್ಷಗಳಿಂದ ಹಿರಿಯ ನಾಗರಿಕರ ಮೂಲಸೌಕರ್ಯ ನೆರವಾಗು ವಂತಹ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದೆ.
ಎಂಆರ್‌ಪಿಎಲ್ ಬಜಪೆ ರೋಟರಿ ಕ್ಲಬ್ ಮನವಿಗೆ ಸ್ಪಂದಿಸಿ ಹಿರಿಯ ನಾಗರಿಕರ ಉದ್ಯಾನವನ ನಿರ್ಮಾಣಕ್ಕೆ 4.24 ಲಕ್ಷ ರೂ. ಅನುದಾನ ನೀಡಲು ಮುಂದೆ ಬಂದಿದೆ. ನಾಲ್ಕು ತಿಂಗಳೊಳಗೆ ಉದ್ಯಾನವನದ ಕಾಮಗಾರಿ ಅಂತಿಮಗೊಳಿಸಲು ಸೂಚಿಸಿದೆ. ಈ ಉದ್ಯಾನವನದಲ್ಲಿ ಹಿರಿಯ ನಾಗರಿಕರಿಗೆ ಕಾಲ್ನಡಿಗೆದಾರಿ, ಬೆಂಚು, ನೀರು ಸೌಲಭ್ಯ, ನೆರಳಿಗೆ ಮರ, ಸೌಂದರ್ಯಕ್ಕೆ ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಹಸುರು ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ತ್ಯಾಜ್ಯ ನಿರ್ವಹಣೆಗೆ ಕೂಡ ಕ್ರಮ ವಹಿಸಲಾಗುತ್ತದೆ. ಅನಂತರ ಮುಂದಿನ ದಿನಗಳಲ್ಲಿ ಕಾರಂಜಿ, ಸಂಗೀತ, ಎಫ್‌ಎಂ ರೇಡಿಯೋಗಳನ್ನು ಅಳವಡಿ ಕೆಗೆ ಚಿಂತಿಸಲಾಗುತ್ತಿದೆ. ಇಲಾಖೆ ಸಹಕಾರ
ಜನರ ಹಿತ ದೃಷ್ಟಿಯಿಂದ ಪರಿಸರದ ಸೌಂದರ್ಯವನ್ನು ಕಾಪಾಡಲು ಹಿರಿಯ ನಾಗರಿಕರ ಉದ್ಯಾನವನ ನಿರ್ಮಾಣವಾಗಲಿದೆ. ಎಂಆರ್‌ಪಿಎಲ್ ಈಗಾಗಲೇ ಅನುದಾನ ನೀಡಲು ಮುಂದೆ ಬಂದಿದೆ. ಬಜಪೆ ಗ್ರಾಮ ಪಂಚಾಯತ್, ಲೋಕೋಪಯೋಗಿ ಇಲಾಖೆ ಕೂಡ ಸಹಕಾರ ನೀಡಲಿದೆ.
– ವರಪ್ರಸಾದ್ ಶೆಟ್ಟಿ, ಅಧ್ಯಕ್ಷ ರು, ಬಜಪೆ ರೋಟರಿ ಕ್ಲಬ್