Advertisement

ಬಜಪೆ ಗ್ರಾ.ಪಂ. ಕಟ್ಟಡ : ಸಾಮಾನ್ಯ ಸೇವಾ ಕೇಂದ್ರ ಆರಂಭ

11:21 PM Jan 12, 2021 | Team Udayavani |

ಬಜಪೆ: ಬಜಪೆ ಪಟ್ಟಣ ಪಂಚಾಯತ್‌ ಘೋಷಣೆ ಪ್ರಕ್ರಿಯೆ ಜಾರಿಯಲ್ಲಿದ್ದು ಇದೀಗ ಪರಿಸರದ ಜನತೆಗೆ ಮತ್ತೂಂದು ಸುದ್ದಿ ಸಂತಸ ತಂದಿದೆ. ಬಹುಬೇಡಿಕೆಯ ಸಾಮಾನ್ಯ ಸೇವಾ ಕೇಂದ್ರವು ಬಜಪೆ ಗ್ರಾ.ಪಂ. ಕಟ್ಟಡದಲ್ಲಿ ಜ. 15ರಂದು ಶಾಸಕ ಉಮಾನಾಥ ಕೋಟ್ಯಾನ್‌ ಅವರಿಂದ ಉದ್ಘಾಟನೆಗೊಳ್ಳಲಿದೆ. ಇದರಿಂದ ಸ್ಥಳೀಯರಿಗೆ ಅಧಾರ್‌ ನೋಂದಣಿ ಮತ್ತು ತಿದ್ದುಪಡಿಗೆ ಅನುಕೂಲವಾಗಲಿದೆ. ನೋಂದಣಿಗಾಗಿ ಬೇರಡೆ ಅಲೆದಾಡಬೇಕಿದ್ದ ಸಮಸ್ಯೆಗೆ ಪರಿಹಾರ ದೊರೆಯಲಿದೆ.

Advertisement

ಈ ಸಂದರ್ಭ ಪಂಚಾಯತ್‌ ಆಡಳಿತಾಧಿಕಾರಿ ನಾಗರಾಜ್‌ ಎನ್‌.ಬಿ ಹಾಗೂ ಪಿಡಿಒ ಸಾಯೀಶ್‌ ಚೌಟ ಉಪಸ್ಥಿತರಿರಲಿದ್ದಾರೆ. ಬ್ಯಾಂಕ್‌ ಮತ್ತು ಅಂಚೆ ಇಲಾಖೆಗಳಲ್ಲಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆಯುವ ಕಾರಣ ರಾಜ್ಯದಲ್ಲಿ ಒಟ್ಟು 150 ಗ್ರಾ.ಪಂ.ಗಳಲ್ಲಿ ಪ್ರಾಯೋಗಿಕವಾಗಿ ಸಿಎಸ್‌ಸಿ ಸಹಯೋಗದೊಂದಿಗೆ ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗೆ ಆಯ್ಕೆ ಮಾಡಲಾಗಿತ್ತು. ಜಿಲ್ಲೆಗೆ ತಲಾ 5 ಗ್ರಾ.ಪಂ.ಗಳಲ್ಲಿ ಅನುಷ್ಠಾನಕ್ಕೆ ಇಲಾಖೆ ನಿರ್ಧರಿಸಿತ್ತು. ಅದರಂತೆ ದ.ಕ. ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನ ಬಜಪೆ, ಬಂಟ್ವಾಳ ತಾಲೂಕಿನ ಕೊಲಾ°ಡು, ಬೆಳ್ತಂಗಡಿ ತಾಲೂಕಿನ ಉಜಿರೆ, ಸುಳ್ಯ ತಾಲೂಕಿನ ಅಲೆಟ್ಟಿ , ಪುತ್ತೂರು ತಾಲೂಕಿನ ಒಳಮೊಗ್ರು ಪಂಚಾಯತ್‌ಗಳನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲೆಯ ಎರಡನೇ ಪಂಚಾಯತ್‌ :

ಈಗಾಗಲೇ ಪುತ್ತೂರಿನ ಒಳಮೊಗ್ರು ಪಂಚಾಯತ್‌ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಕಾರ್ಯಾರಂಭಿಸಿದ್ದು ಇದೀಗ ಬಜಪೆ ಗ್ರಾ.ಪಂ.ನಲ್ಲಿ ಶುಕ್ರವಾರ ಕಾರ್ಯಾರಂಭಗೊಳ್ಳಲಿದೆ. ಇದು ಜಿಲ್ಲೆಯ ಎರಡನೇ ಗ್ರಾ.ಪಂ. ಹಾಗೂ ತಾಲೂಕಿನ ಪ್ರಥಮ ಗ್ರಾಮ ಪಂಚಾಯತ್‌ ಇದಾಗಲಿದೆ.

ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಈ ಸೇವೆ ಲಭ್ಯವಾಗಿದೆ. ಇಲ್ಲಿ ಹೊಸ ಆಧಾರ್‌ ಮತ್ತು ತಿದ್ದು ಪಡಿ, ಬಯೋಮಿಟ್ರಿಕ್‌ ಅಪ್‌ಡೆಟ್‌, ರೆಟಿನಾ, 5ರಿಂದ 15ವರ್ಷದವರ ತಿದ್ದು ಪಡಿ ಮಾಡಬಹುದಾಗಿದೆ. ಖಾಸಗಿ ಸೇವಾ ಕೇಂದ್ರದಲ್ಲಿ ವಿಳಾಸ, ಜನನ ದಿನಾಂಕ ತಿದ್ದುಪಡಿ ಮಾತ್ರ ಮಾಡಬಹುದಾಗಿತ್ತು.

Advertisement

ಪ್ರತಿ ಆಧಾರ್‌ ನೋಂದಣಿ ಮತ್ತು ಆಧಾರ್‌ ತಿದ್ದು ಪಡಿಗೆ ಸಂಗ್ರಹವಾಗುವ 100 ರೂ. ಗಳಲ್ಲಿ ಸಿಎಸ್‌ಸಿ/ಎಸ್‌ಪಿವಿ ಅವರಿಗೆ 85 ರೂ. ಗ್ರಾ.ಪಂ./ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಗೆ 15 ರೂ. ನೀಡಬೇಕಾಗುತ್ತದೆ.

ಈಗಾಗಲೇ ಬಜಪೆ ಪಂಚಾಯತ್‌ ಕಟ್ಟಡದಲ್ಲಿ ಸೇವಾ ಕೇಂದ್ರಕ್ಕೆ ಅವಶ್ಯಕತೆ ಇರುವ ಕಟ್ಟಡ, ವಿದ್ಯುತ್‌ ಸಂಪರ್ಕ, ಇಂಟರ್‌ನೆಟ್‌, ಬಯೋಮೆಟ್ರಿಕ್‌, ರೆಟಿನಾ ಕೆಮರಾ ಮುಂತಾದ ಮೂಲಭೂತ ಸೌಕರ್ಯವನ್ನು ಅಳವಡಿಸಲಾಗಿದೆ. ಜತೆಗೆ ಅಂಗವಿಕಲರಿಗೆ ಆವಶ್ಯಕತೆ ಇರುವ ವೀಲ್‌ಚೇರ್‌, ವಯಸ್ಕರಿಗೆ ಬೇಕಾಗುವ ಹ್ಯಾಂಡ್‌ ವಾಕ್‌ ಸಲಕರಣೆಯನ್ನು ಕೂಡ ಪಂಚಾಯತ್‌ ವ್ಯವಸ್ಥೆ ಮಾಡಿದೆ.  ಸಾಯೀಶ್‌ ಚೌಟ,  ಪಿಡಿಒ, ಬಜಪೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next