Advertisement

ಬಜಪೆ: ಅಂತಾರಾಜ್ಯ ದನ ಕಳ್ಳರ ಬಂಧನ…ದ.ಕ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಸಕ್ರಿಯರಾಗಿದ್ದರು

01:20 AM Mar 07, 2023 | Team Udayavani |

ಬಜಪೆ: ಬಜಪೆ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಪ್ರಕಾಶ್‌ ಅವರ ಆದೇಶದಂತೆ ಮಾ. 6ರಂದು ಬೆಳಗ್ಗಿನ ಜಾವ 5.30ಕ್ಕೆ ಎಸ್‌ಐ ಪೂವಪ್ಪ ಅವರು ಸಿಬಂದಿ ಜತೆ ಅಡ್ಕೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಮಂಗಳೂರು ನಗರ, ದ.ಕ. ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರುಗಳಲ್ಲಿ ಹೋಗಿ ದನಗಳನ್ನು ಕಳವು ಮಾಡುತ್ತಿದ್ದ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿವಾಸಿ ಇರ್ಷಾದ್‌ (32) ಮತ್ತು ಕೇರಳದ ಮಂಜೇಶ್ವರ ನಿವಾಸಿ ಇರ್ಫಾನ್‌ ಯಾನೆ ಮಲಾರ್‌ ಇರ್ಪಾನ್‌ (29) ನನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳು ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಕೆಎ 01 ಎಬಿ 0832 ನಂಬರಿನ ಕೆಂಪು ಬಣ್ಣದ ಮಹೇಂದ್ರ ಕಂಪೆನಿಯ ಕಾರು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದಡ್ಕ ಫಾರೂಕ್‌ ಪೊಲೀಸರಿಂದ ತಪ್ಪಿಕೊಂಡಿದ್ದಾನೆ.

ಆರೋಪಿತರನ್ನು ತೀವ್ರ ವಿಚಾರಣೆ ನಡೆಸಿದಾಗ ಅವರು ಇತ್ತೀಚೆಗೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿಂದ 6 ದನಗಳನ್ನು ಮತ್ತು 2021ನೇ ಇಸವಿಯಲ್ಲಿ ಬಡಗ ಎಡಪದವು ದಡ್ಡಿಯಿಂದ 2 ದನಗಳನ್ನು ಕೆಂಪು ಬಣ್ಣದ ಕಾರಿನಲ್ಲಿ ಕಳವು ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾರೆ.

ತಪ್ಪಿಸಿಕೊಂಡಿರುವ ಮದಡ್ಕ ಫಾರೂಕ್‌ ಪತ್ತೆಯ ಬಗ್ಗೆ ತೀವ್ರ ಕಾರ್ಯಾಚರಣೆ ಮುಂದುವರಿದಿದೆ.

ವಿವಿಧೆಡೆ ದನಕಳವು, ದರೋಡೆ
ಆರೋಪಿತರ ವಿರುದ್ದ ಮಂಗಳೂರಿನ ಹೊರವಲಯದ ಬಜಪೆ, ಕೊಣಾಜೆ, ಕಾವೂರು, ಮೂಡುಬಿದಿರೆ, ಮಂಗ ಳೂರು ಉತ್ತರ, ಪುಂಜಾಲಕಟ್ಟೆ, ಬಂಟ್ವಾಳ ನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬನಕಲ್‌, ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಗಳಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿ ಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

Advertisement

ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು
ಆರೋಪಿತರು ವಿಟ್ಲದ ಮಿತ್ತೂರು ಎಂಬಲ್ಲಿ ದನ ಕಳವು ಮಾಡಿದ ವಿಚಾರದಲ್ಲಿ ಸ್ಥಳಿಯ ಸಂಘ ಸಂಸ್ಥೆಗಳು ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದವು. ಈ ನಡುವೆ ಆರೋಪಿಗಳ ಬಂಧನವಾಗಿದೆ.
ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಅವರ ಮಾರ್ಗದರ್ಶನದಂತೆ, ಡಿಸಿಪಿ ಅಂಶುಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಅವ‌ರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ ಅವರ ನೇತೃತ್ವದಲ್ಲಿ ಬಜಪೆ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಪ್ರಕಾಶ್‌ ನೇತೃತ್ವದಲ್ಲಿ ಎಸ್‌ಐ ಪೂವಪ್ಪ, ಗುರು ಕಾಂತಿ, ಎಎಸ್‌ಐ ರಾಮಣ್ಣ ಪೂಜಾರಿ, ಸುಜನ್‌, ರಶೀದಾ ಶೇಖ್‌, ರಾಜೇಶ್‌, ಸಂತೋಷ್‌, ಸಂಜೀವ ಭಜಂತ್ರಿ, ಬಸವರಾಜ್‌ ಪಾಟೀಲ್‌, ಮೋಹನ್‌, ಉಮೇಶ್‌ ಮತ್ತು ಕೆಂಚಪ್ಪ ಅವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next