Advertisement
2010ರ ಮೇ 22ರಂದು ನಡೆದ ಆ ದುರ್ಘಟನೆಯಲ್ಲಿ ಬದುಕಿ ಉಳಿದವರ ಬಗ್ಗೆ ಈಗಲೂ ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಆ ಎಂಟು ಮಂದಿಯ ಬಗ್ಗೆ ಈಗ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕಾಗಲಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಲಿ ಅಥವಾ ನಾಶವಾದ ವಿಮಾನದ ಒಡೆತನ ಹೊಂದಿದ್ದ ಏರ್ ಇಂಡಿಯಾ ಸಂಸ್ಥೆಗಾಗಲಿ ಯಾವುದೇ ಮಾಹಿತಿಯಿಲ್ಲ. ಬದುಕುಳಿದವರೆಲ್ಲ ಸಣ್ಣಪುಟ್ಟ ಗಾಯಗಳಾ ಗಿದ್ದವು. ಪರಿಹಾರ ಪ್ರಕ್ರಿಯೆ ಒಂದೆರಡು ವರ್ಷದೊಳಗೆ ಪೂರ್ಣವಾಗಿತ್ತು.
ಮಂಗಳೂರು ವಿಮಾನ ನಿಲ್ದಾಣ ಮಾತ್ರವಲ್ಲದೆ ದೇಶದ ಮಟ್ಟಿಗೂ ಭೀಕರ ಎಂದೇ ವ್ಯಾಖ್ಯಾನಿಸಬಹುದಾದ ಆ ಬಹುದೊಡ್ಡ ದುರಂತದ ಬಗ್ಗೆ ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘದ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಅವರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ. ವಿಮಾನ ದುರಂತದಲ್ಲಿ ಮಡಿದ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಪರಿಹಾರ ದೊರಕಿಸುವ ಕಾರ್ಯ ನಡೆದಿದೆ. ಜತೆಗೆ ಮಕ್ಕಳು ಮತ್ತು ಮಹಿಳೆಯರಿಗೆ ಪರಿಹಾರ ಜಾಸ್ತಿ ಮಾಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಬದುಕಿ ಉಳಿದವರಿಗೆ ಪರಿಹಾರ ಪ್ರಕ್ರಿಯೆ ಒಂದೆರಡು ವರ್ಷಗಳಲ್ಲಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ನಮ್ಮ ಸಂಘದ ಜತೆಗೆ ಸಂಪರ್ಕದಲ್ಲಿಲ್ಲ ಎಂದಿದ್ದಾರೆ.
“ದುಬಾೖಯಿಂದ ಅಲ್ಲಿನ ಸಮಯ ರಾತ್ರಿ 1.20ಕ್ಕೆ ಆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಮಂಗಳೂರಿಗೆ ಬಂದಾಗ ಮುಂಜಾನೆ ಬೆಳಗ್ಗೆ 6.15. ವಿಮಾನ ಇಳಿದು ರನ್‌ವೇಯಲ್ಲಿ ಚಲಿಸುತ್ತಿರುವಾಗ ಒಮ್ಮೆಲೆ ಭಾರೀ ವೇಗ, ಅನಂತರ ಗುಂಡಿಗೆ ಬಿದ್ದ ಅನುಭವವಾಯಿತು. ಬೆಂಕಿ ಕಾಣಿಸಿತು. ಮೇಲ್ಭಾಗದ ಒಂದು ಪಾರ್ಶ್ವ ಒಡೆದು ಹೋಯಿತು. ಆ ರಭಸದಲ್ಲಿ ನನ್ನ ಸೀಟ್ ಬೆಲ್ಟ್ ಒಡೆದಿದ್ದು, ಸೀಟಿನ ಮೇಲೇರಿ ಒಡೆದುಹೋದ ಛಾವಣಿಯ ಭಾಗದಿಂದ ಕೆಳಕ್ಕೆ ಹಾರಿದೆ’ ಎಂದು ಅಂದಿನ ಘಟನೆಯನ್ನು ಈ ಹಿಂದೆ ನೆನಪಿಸಿಕೊಂಡಿದ್ದರು ವಾಮಂಜೂರು ನಿವಾಸಿ ಜ್ಯೂಯೆಲ್ ಡಿ’ಸೋಜಾ. ಸ್ಮಾರಕ ಪಾರ್ಕ್ ನಿರ್ಮಾಣ
ದುರಂತ ನಡೆದ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಮಡಿದವರ ಹೆಸರುಗಳನ್ನು ಶಿಲೆಯಲ್ಲಿ ಬರೆದು ತಾತ್ಕಾಲಿಕ ಸ್ಮಾರಕವನ್ನು ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ವಿವಾದವಾಗಿತ್ತು. ಜತೆಗೆ ತಾತ್ಕಾಲಿಕ ಸ್ಮಾರಕ ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗಿ ಪುಡಿಯಾಗಿತ್ತು. ಆ ಬಳಿಕ ಸ್ಮಾರಕ ನಿರ್ಮಾಣ ಬೇಡಿಕೆ ಮುನ್ನೆಲೆಗೆ ಬಂದು ಅಂತಿಮವಾಗಿ ಎರಡು ವರ್ಷಗಳ ಹಿಂದೆ ಕೂಳೂರು ಸಮೀಪದ ತಣ್ಣೀರುಬಾವಿಗೆ ತೆರಳುವ ರಸ್ತೆ ಪಕ್ಕದ ಸುಮಾರು 90 ಸೆಂಟ್ಸ್ ಜಾಗ ದಲ್ಲಿ ಸ್ಮಾರಕವನ್ನು . 22/5 ಹೆಸರಿನಲ್ಲಿ “ಸ್ಮಾರಕ ಪಾರ್ಕ್’ ಕೂಡ ಆಗಿದೆ. ಜಿಲ್ಲಾಡಳಿತ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ನವಮಂಗಳೂರು ಬಂದರು ಮಂಡಳಿ ಜಂಟಿ ಸಹಯೋಗದಲ್ಲಿ ಇದು ನಿರ್ಮಾಣವಾಗಿದೆ. ಫಲ್ಗುಣಿ ನದಿ ದಂಡೆಯ ಈ ಸ್ಥಳ ಪ್ರಕೃತಿ ರಮಣೀಯ ಪ್ರದೇಶದಲ್ಲಿದೆ. ಇದೇ ಜಾಗದಲ್ಲಿ ಪ್ರತೀ ವರ್ಷ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ.
Related Articles
ತಣ್ಣೀರುಬಾವಿಯ ಪ್ರದೀಪ್ (ಅಂದಿನ ವಯಸ್ಸು 28 ವರ್ಷ), ಹಂಪನಕಟ್ಟೆಯ ಮಹಮ್ಮದ್ ಉಸ್ಮಾನ್ (49), ವಾಮಂಜೂರಿನ ಜ್ಯೂಯೆಲ್ ಡಿ’ಸೋಜಾ (24), ಕೇರಳ ಕಣ್ಣೂರು ಕಂಬಿಲ್‌ನ ಮಾಹಿನ್ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್ (37), ಉಳ್ಳಾಲದ ಉಮ್ಮರ್ ಫಾರೂಕ್ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿಯಾಗಿದ್ದ ಬಾಂಗ್ಲಾ ಮೂಲದ ಸಬ್ರಿನಾ (23) ಅಂದು ಪವಾಡಸ ದೃಶವಾಗಿ ಬದುಕುಳಿದ ಅದೃಷ್ಟವಂತರು. ಸಬ್ರಿನಾ ಮಾತ್ರ ಗಂಭೀರವಾಗಿ ಗಾಯಗೊಂಡಿದ್ದರು.
Advertisement