Advertisement

ಗಣೇಶ ಚತುರ್ಥಿಗೆ ಬಿಗ್ ಗಿಫ್ಟ್ ನೀಡಲು ಸಿದ್ಧವಾದ ಭಜರಂಗಿ 2!

05:48 PM Jul 20, 2021 | Team Udayavani |

ಬೆಂಗಳೂರು:  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಹರ್ಷಾ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಭಜರಂಗಿ- 2 ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಗಣೇಶ ಹಬ್ಬಕ್ಕೆ ದೊಡ್ಡ ಪರದೆ ಮೇಲೆ ಲಗ್ಗೆ ಇಡಲು ಸಿನಿಮಾ ಸಜ್ಜಾಗಿದೆ ಎಂದು ಚಿತ್ರ ತಂಡದಿಂದ ಮಾಹಿತಿ ಲಭ್ಯವಾಗಿದೆ.

Advertisement

ಕೋವಿಡ್ ಕಾರಣದಿಂದ ಸಂಪೂರ್ಣ ಲಾಕ್ ಡೌನ್ ಆಗಿದ್ದ ಚಿತ್ರ ಮಂದಿರಗಳು ಯಾವ ಸಿನಿಮಾವನ್ನು ಜನರಿಗೆ ತೋರಿಸಿರಲಿಲ್ಲ. ಇದೀಗ ಸರ್ಕಾರ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಸೆಪ್ಟೆಂಬರ್ 10ಕ್ಕೆ ಶಿವಣ್ಣ ಅಭಿನಯದ ಭಜರಂಗಿ 2 ಸಿನಿಮಾ ರಿಲೀಸ್ ಆಗುತ್ತಿದೆ ಎಂದು ನಿರ್ಮಾಪಕ ಜಯಣ್ಣ ತಿಳಿಸಿದ್ದಾರೆ.

ಇನ್ನು ಹರ್ಷಾ ನಿರ್ದೇಶನ ಮಾಡಿರುವ ಈ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇನ್ನು ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದ್ದು, ಗಣೇಶ ಚತುರ್ಥಿಗೆ ಕುತೂಹಲ ತಣಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next