Advertisement
ಒಂದು ಕಡೆ ಪೆಟ್ರೋಲ್ ದರ ಏರುತ್ತಿದ್ದರೆ, ಇನ್ನೊಂದೆಡೆ ಬೈಕುಗಳ ಬೆಲೆಯೂ ಗಗನಮುಖೀಯಾಗಿದೆ. ಇಂಥ ವೇಳೆಯಲ್ಲಿ 150+ ಅಥವಾ 200+ ಸಿಸಿ ಸಾಮರ್ಥ್ಯದ ಬೈಕುಗಳ ಖರೀದಿ ಮಾಡಬೇಕು ಎಂದರೆ ಲಕ್ಷ ರೂ.ಗಿಂತ ಹೆಚ್ಚೇ ಬೆಲೆ ತೆರಬೇಕು. ಇದರ ನಡುವೆಯೇ ಸ್ಟೋರ್ಟ್ಸ್ ಬೈಕ್ ಎಂದೇ ಹೆಸರಾಗಿರುವ ಕೆಟಿಎಂ 125 ಬೈಕು ಬಿಟ್ಟು ಆ ವಿಭಾಗದಲ್ಲಿಯೂ ಯಶಸ್ವಿಯಾಗಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿರುವ ಬಜಾಜ್, ತನ್ನ ಪಲ್ಸರ್ ಬ್ರಾಂಡನ್ನು 125ಸಿಸಿ ವಿಭಾಗದಲ್ಲಿ ಪರೀಕ್ಷೆಗೆ ಇಳಿಸಲು ಹೊರಟಿದೆ.
ಎಂಜಿನ್ ಸಾಮರ್ಥ್ಯವೊಂದನ್ನು ಕಡಿಮೆ ಮಾಡಿದೆ ಎಂಬುದನ್ನು ಬಿಟ್ಟರೆ ಈ ಬೈಕು ಹೆಚ್ಚು ಕಡಿಮೆ ಬಜಾಜ್ ಪಲ್ಸರ್ 150 ಅನ್ನೇ ಹೋಲುತ್ತದೆ. ಟ್ಯಾಂಕ್ ವಿನ್ಯಾಸ ಕೂಡ ಹಾಗೆಯೇ ಇದೆ. ಆದರೆ, ಟ್ಯಾಂಕ್‌ನ ಸಾಮರ್ಥ್ಯವನ್ನು 11.5 ಲೀಟರ್‌ಗೆ ಇಳಿಕೆ ಮಾಡಲಾಗಿದೆ. ಬೈಕಿನ ಭಾರ ಕಡಿಮೆ ಮಾಡಲೆಂದೇ ಟ್ಯಾಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎನ್ನುವ ಮಾತೂ ಇದೆ. 150+ ಸಿಸಿ ಸಾಮರ್ಥ್ಯದ ಬಜಾಜ್ ಪಲ್ಸರ್ ಬೈಕುಗಳಲ್ಲಿ ಹೆಚ್ಚು ಮೈಲೇಜ್ ಸಿಗುವುದಿಲ್ಲ. ಹೀಗಾಗಿ ಆ ಕೊರತೆಯನ್ನು ತುಂಬುವ ಸಲುವಾಗಿ ಹೆಚ್ಚು ಮೈಲೇಜ್ ಕೊಡಬೇಕು ಮತ್ತು ಸ್ಟೈಲಿಷ್ ಆಗಿಯೂ ಇರಬೇಕು ಎನ್ನುವವರಿಗಾಗಿಯೇ ಈ ಬೈಕನ್ನು ಬಿಡುಗಡೆ ಮಾಡಲಾಗಿದೆ ಎನ್ನುವುದರಲ್ಲೂ ಸತ್ಯಾಂಶವಿದೆ. ಪಲ್ಸರ್ 125ಕ್ಕೆ ಪ್ರತಿಸ್ಪರ್ಧಿ ಎಂದರೆ ಹೋಂಡಾ ಸಿ.ಬಿ ಶೈನ್. ಶೈನ್‌ಗಿಂತ ಪಲ್ಸರ್ 15 ಕೆ.ಜಿ ಹೆಚ್ಚು ಭಾರವಿದೆ. ಇದರಿಂದಾಗಿ ಒಳ್ಳೆಯ ರೋಡ್ ಗ್ರಿಪ್ ಅನ್ನು ಈ ಹೊಸ ಬೈಕಿನಿಂದ ನಿರೀಕ್ಷಿಸಬಹುದು. ಪಲ್ಸರ್ 150 ಬೈಕಿಗೆ ಬಳಸಿದ್ದ ಎಂಜಿನ್‌ಅನ್ನೇ ಇದರಲ್ಲೂ ಉಪಯೋಗಿಸಿರುವುದರಿಂದ ಸಾಮರ್ಥ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ ಎನ್ನಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಈ ಬೈಕ್ ಸ್ಟಾರ್ಟ್ ಮಾಡಿದಾಕ್ಷಣ, 100 ಕಿ.ಮೀ. ವೇಗವನ್ನು ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ.
Related Articles
ಈ ಬೈಕಿನಲ್ಲಿ ಎಬಿಎಸ್ ಇಲ್ಲ ಎಂಬುದು ಒಂದು ಕೊರತೆ. ಆದರೆ, 68 ಸಾವಿರ ರೂ.ಗಳ ರೇಂಜ್‌ನಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರುವ ಬೈಕ್ ಸಿಗುತ್ತದೆ. 64 ಸಾವಿರ ರೂ.ಗಳ ರೇಂಜಿನಲ್ಲಿ ಕೇವಲ ಡ್ರಮ್ ಬ್ರೇಕ್ ಸಿಸ್ಟಮ್ ಒದಗಿಸಲಾಗಿದೆ. ಡಿಸ್ಕ್ ಬ್ರೇಕ್ ವ್ಯವಸ್ಥೆ ಬೇಕೆಂದರೆ 68 ಸಾವಿರ ರೇಂಜ್‌ನ ಬೈಕನ್ನೇ ಖರೀದಿಸಬೇಕು.
Advertisement
ಈಗಾಗಲೇ ಒಮ್ಮೆ ತನ್ನದೇ ಬ್ರ್ಯಾಂಡ್ ನ ಬಜಾಜ್ ಡಿಸ್ಕವರ್‌ನಲ್ಲಿ 125 ಸಿಸಿ ಬೈಕುಗಳನ್ನು ಬಜಾಜ್ ಪರಿಚಯಿಸಿತ್ತು. ಮತ್ತೆ ಈಗ ಇನ್ನೊಂದು ಬ್ರ್ಯಾಂಡ್ ನಲ್ಲಿ 125 ಸಿಸಿ ಸಾಮರ್ಥ್ಯದ ಬೈಕುಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುವ ಲೆಕ್ಕಾಚಾರ ಕಂಪನಿಯದು. ಆದರೆ, ಪಲ್ಸರ್ ಬೈಕನ್ನು ಕೇಳಿಕೊಂಡು ಬರುವವರು, ಹೆಚ್ಚು ಸಾಮರ್ಥ್ಯದ ಮಾಡೆಲ್‌ಗಳನ್ನು ಬಯಸುವವರು. ಅವರು ಬೆಲೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವರೇ ಹೊರತು ಪವರ್, ಸಾಮರ್ಥ್ಯದ ವಿಚಾರದಲ್ಲಲ್ಲ. ಆಂಥಾ ಗ್ರಾಹಕರು ಪಲ್ಸರ್ 125ಅನ್ನು ಹೇಗೆ ಸ್ವೀಕರಿಸುತ್ತಾರೇ ಎನ್ನುವ ಪ್ರಶ್ನೆಯಂತೂ ಇದೆ. ಆದರೆ ಮೊದಲೇ ಹೇಳಿದಂತೆ ಈ ಬೈಕಿನ ಟಾರ್ಗೆಟ್ ಬೇರೆಯದೇ ವರ್ಗದ ಜನ. ಮೈಲೇಜ್ ಮತ್ತು ನ್ಪೋರ್ಟಿ ಲುಕ್ ಎರಡೂ ಬೇಕೆನ್ನುವವರು ಈ ಬೈಕನ್ನು ಟೆಸ್ಟ್ ರೈಡ್ ಮಾಡಬಹುದು.
ಬಜಾಜ್ ಪಲ್ಸರ್ 125ಸಾಮರ್ಥ್ಯ – 124.4 ಸಿ.ಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್‌ಕೂಲ್ಡ…
ತೂಕ -140 ಕೆ.ಜಿ
ಸ್ಪ್ಲಿಟ್ ಸೀಟ್
ಸೀಟಿನ ಎತ್ತರ -790ಎಂ.ಎಂ
ವೀಲ್ ಬೇಸ್ – 1,320 ಎಂ.ಎಂ
ಬೆಲೆ -64,000 ರೂ.(ಎಕ್ಸ್ ಶೋರೂಂ, ದೆಹಲಿ) -ಸೋಮಶೇಖರ ಸಿ.ಜೆ.