ನವದೆಹಲಿ: ಜನಪ್ರಿಯ ಬಜಾಜ್ ಆಟೋ, ನೂತನ ಬಜಾಜ್ ಪ್ಲ್ಯಾಟಿನಾ 100 ಕಿಕ್ ಸ್ಟಾರ್ಟ್ ( KS) ಮೋಟಾರು ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಧ್ಯಮ ವರ್ಗದ ಗ್ರಾಹಕರಿಗೆ ಅನುಕೂಲವಾಗಿವಂತೆ ಈ ಬೈಕ್ ಅನ್ನು ರೂಪಿಸಲಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಮಾತ್ರವಲ್ಲದೆ ಇತರ ಪ್ಲಾಟಿನಾ ಬೈಕ್ ಗಳಿಗೆ ಹೋಲಿಸಿದರೆ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ.
ಬಜಾಜ್ ಪ್ಲ್ಯಾಟಿನಾ, 100 ಕಿಕ್ ಸ್ಟಾರ್ಟ್ ನಲ್ಲಿ ಸ್ಟ್ರಿಂಗ್ ನೈಟ್ರೋಕ್ಸ್ ಸಸ್ಪೆನ್ಶನ್, ಹ್ಯಾಂಡ್ ಗಾರ್ಡ್, ಆರಾಮವಾಗಿ ಕೂರಬಲ್ಲ ಸೀಟ್ ವಿನ್ಯಾಸವನ್ನು ಒಳಗೊಂಡಿದೆ. ಇದರ ಜೊತೆಗೆ ಟ್ಯೂಬ್ ಲೆಸ್ ಟೈರ್, LED DRL ಹೆಡ್ ಲ್ಯಾಂಪ್, ಪ್ರೊಟೆಕ್ಟಿವ್ ಟ್ಯಾಂಕ್ ಪ್ಯಾಡ್ ನೀಡಲಾಗಿದೆ. ಹಾಗೂ ಇಂಡಿಕೇಟರ್, ಮಿರರ್, ರಬ್ಬರ್ ಪೂಟ್ ಪ್ರಿಂಟ್ ಅನ್ನು ಇದು ಒಳಗೊಂಡಿದೆ.
ಬಜಾಜ್ ಬೈಕ್ ಗಳು ಅತ್ಯತ್ತಮ ಮೈಲೇಜ್ ನೀಡಬಲ್ಲ ಬೈಕ್ ಗಳ ಸಾಲಿನಲ್ಲಿ ತನ್ನನ್ನು ಗುರುತಿಸಿಕೊಂಡಿದ್ದು, ಹೊಸ ವರ್ಷಕ್ಕೆ ತನ್ನ ಗ್ರಾಹಕರಿಗೆ ಬಹುದೊಡ್ಡ ಕೊಡುಗೆ ನೀಡಿದೆ.
ಈ ಹೊಸ ಆವೃತ್ತಿಯ ಬೈಕ್ ಕುರಿತಾಗಿ ಬಜಾಜ್ ಆಟೋ ಲಿಮಿಟೆಡ್ ನ ಮಾರ್ಕೆಟಿಂಗ್ ಮುಖ್ಯಸ್ಥ ಶ್ರೀ ನಾರಾಯಣ್ ಮಾತನಾಡಿದ್ದು, ಈ ಹೊಸ ಬಜಾಜ್ ಪ್ಲ್ಯಾಟಿನಾ 100 ಬೈಕ್ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಪ್ರಯಾಣಿಕರಿಗೆ ಇದು ಅತಿ ಉತ್ತಮವಾದ ಅನುಭವವನ್ನು ನೀಡಬಲ್ಲ ಮೋಟಾರು ವಾಹನವಾಗಿದೆ ಮತ್ತು ಇದು ಖಂಡಿತಾ ಗ್ರಾಹಕರು ಬಯಸುವಂತಹ ಉತ್ತಮ ಮೈಲೆಜ್ ನೀಡಲಿದೆ ಎಂದಿದ್ದಾರೆ.
ಹೊಸ ಜಾಜ್ ಪ್ಲ್ಯಾಟಿನಾ 100 ಕಿಕ್ ಸ್ಟಾರ್ಟ್ ಬೈಕ್, ಕಾಕ್ ಟೈಲ್ ವೈನ್ ರೆಡ್, ಎಬೋನಿ ಬ್ಲಾಕ್ ಮತ್ತು ಸಿಲ್ವರ್ ಡಿಕಾಲ್ಸ್ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ: ಈ ಮೊಟಾರು ಬೈಕ್ ಅನ್ನು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿವಂತೆ ತಯಾರಿಸಲಾಗಿದ್ದು 51,667 ರೂ. (ex-showroom) ಬೆಲೆಯಲ್ಲಿ ಖರೀದಿಸಬಹುದಾಗಿದೆ.