Advertisement

ಕಲರ್‌ಫುಲ್‌ ಇವೆಂಟ್‌ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್‌

11:06 AM Jun 27, 2022 | Team Udayavani |

ಶಿವರಾಜ್‌ಕುಮಾರ್‌ ನಟನೆಯ “ಬೈರಾಗಿ’ ಚಿತ್ರ ಜುಲೈ 01 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲ ಚಿತ್ರತಂಡ ಚಾಮರಾಜನಗರದಲ್ಲಿ ಅದ್ಧೂರಿ ಯಾಗಿ ಪ್ರಿ ರಿಲೀಸ್‌ ಇವೆಂಟ್‌ ಮಾಡಿದ್ದು, ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿ ಸಾಗರವೇ ಸೇರಿದೆ.

Advertisement

ಕಲರ್‌ಫ‌ುಲ್‌ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ಪೃಥ್ವಿ ಅಂಬರ್‌ ಸೇರಿದಂತೆ ಇಡೀ ಚಿತ್ರತಂಡ ಸೇರಿತ್ತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಶಿವಣ್ಣ ಡ್ಯಾನ್ಸ್‌, ಡೈಲಾಗ್‌ ಮೂಲಕ ರಂಜಿಸಿದರು.

ಚಿತ್ರತಂಡ ಜೂನ್‌ 24ರಂದು ಬೆಂಗಳೂರಿನಿಂದ ರೋಡ್‌ ಶೋ ಮೂಲಕ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ತಲುಪಿದೆ. ಮಾರ್ಗಮಧ್ಯೆ ಅಭಿಮಾನಿಗಳು ಶಿವಣ್ಣನ ನೋಡಲು ಸೇರಿದ್ದರು.

ಶಿವರಾಜ್‌ಕುಮಾರ್‌ ನಟನೆಯ 123ನೇ ಚಿತ್ರ “ಬೈರಾಗಿ’ಯಾಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರವನ್ನು ವಿಜಯ್‌ ಮಿಲ್ಟನ್‌ ನಿರ್ದೇಶಿಸಿದ್ದು, ಕೃಷ್ಣ ಸಾರ್ಥಕ್‌ ನಿರ್ಮಿಸಿದ್ದಾರೆ.

ಇದನ್ನೂ ಓದಿ:ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

Advertisement

ಈಗಾಗಲೇ ಒಟಿಟಿ, ಸ್ಯಾಟಲೈಟ್‌ ಹಕ್ಕುಗಳು, ಬಿಡುಗಡೆಗೂ ಮುಂಚೆಯೇ ಬೈರಾಗಿ ಹತ್ತು ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿದ್ದು, ಈ ವಿಚಾರವನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಬೈರಾಗಿ ಚಿತ್ರ ಆ್ಯಕ್ಷನ್‌ ಜೊತೆಗೆ ಎಮೋಶನ್‌ ಮೇಲೆ ಸಾಗುವ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎನ್ನುವುದು ಶಿವಣ್ಣ ಮಾತು.

ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಚಿತ್ರದಲ್ಲಿ ಎಮೋಶನ್ಸ್‌ಗೆ ಹೆಚ್ಚಿನ ಮಹತ್ವವಿದೆ. ಮೈಮೇಲೆ ಆಗಿರುವ ಗಾಯ ವಾಸಿಯಾದರೂ ಮನಸ್ಸಿಗೆ ಆಗಿರುವ ಗಾಯ ಮಾಸುವುದಿಲ್ಲ ಎಂಬ ಅಂಶದ ಜೊತೆಗೆ ಇನ್ನೂ ಹಲವು ವಿಚಾರಗಳನ್ನು ಸಿನಿಮಾ ಒಳಗೊಂಡಿದೆ’ ಎನ್ನುತ್ತಾರೆ ಶಿವಣ್ಣ. ಚಿತ್ರವನ್ನು ಕೃಷ್ಣ ಸಾರ್ಥಕ್‌ ನಿರ್ಮಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next