Advertisement

ಮಲೆನಾಡಿನ ಬೈನೆ ಬಡವರ ಪಾಲಿನ ಕಲ್ಪವೃಕ್ಷ

03:37 PM Feb 21, 2022 | Team Udayavani |

ಸಕಲೇಶಪುರ: ತೆಂಗಿನ ಮರಕ್ಕೆ ಮತ್ತೂಂದು ಹೆಸರು ಕಲ್ಪವೃಕ್ಷ. ಆದರೆ, ಮಲೆನಾಡಿನಲ್ಲಿ ಬಡವರ ಪಾಲಿನ ಮತ್ತೂಂದು ಕಲ್ಪವೃಕ್ಷದ ರೀತಿಯ ಮರವಿದ್ದು ಆ ಮರದ ಹೆಸರು ಬೈನೆ(ಬಗನಿ) ಮರ.

Advertisement

ಬೈನೆ ಮರ ಇದು ಪಾಲ್ಮಸಿ ಸಸ್ಯ ಕುಟುಂಬಕ್ಕೆಸೇರಿದ್ದು, ಕ್ಯಾರಿಯೋಟ ಉರೆನ್ಸ್‌ ಎಂಬುದು ಇದರಸಸ್ಯ ಶಾಸ್ತ್ರೀಯ ಹೆಸರು. ತಾಳೆಮರದ ಸ್ವರೂಪದಲ್ಲಿರುವ ಬೈನೆಮರ ಆರ್ಥಿಕವಾಗಿ ಹಿಂದುಳಿದವರ ಬದುಕಿನ ಅಚ್ಚುಮೆಚ್ಚಿನ ಮರ. ಹೌದು ಬದುಕುಆಧುನಿಕತೆದುಕೊಳ್ಳುವ ಮುನ್ನ, ಸಮಾಜದ ಎಲ್ಲಸ್ತರದ ಜನರ ದೈನಂದಿನ ಬದುಕಿನಲ್ಲಿ ಒಂದಲ್ಲ ಒಂದುರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದ್ದ ಬೈನೆಮರಇಂದು ಆರ್ಥಿಕವಾಗಿ ಹಿಂದುಳಿದವರು ಮಾತ್ರವೇ ಉಪಯೋಗಿಸುವಂತಾಗಿದೆ.

ಮನೆಕಟ್ಟಲು ಉಪಯೋಗ: ಮರಗಳನ್ನು ಬಳಸಿ ಮನೆಕಟ್ಟಲು ಆರ್ಥಿಕವಾಗಿ ಸಬಲರಲ್ಲದ ಜನರು ಬೈನೆಮರದ ಬಲಿತ ಖಾಂಡಗಳನ್ನು ಬಳಸಿ ಮನೆಕಟ್ಟುತ್ತಿದ್ದು. ಬಡವರ ಮನೆಗಳ ಪಕಾಸಿ(ಮನೆ ಚಾವಣಿಗೆ ಬಳಸುವ ಕಂಬ)ಗಳಾಗಿ, ದಬ್ಬೆಗಳಾಗಿ, (ರೀಪು)ಕಿಟಕಿ, ಬಾಗಿಲುಗಳಾಗಿ ಈ ಮರದ ಖಾಂಡಗಳು ಉಪ ಯೋಗಕ್ಕೆ ಬರುತ್ತಿವೆ. ಹಲವು ದಶಕಗಳ ಕಾಲ ಬಾಳಿಕೆ ಬರುವ ಬೈನೆಮರದ ಪಕಾಸುಗಳಿರುವ ಹಲವು ಮನೆಗಳು ಇಂದಿಗೂ ಪಶ್ಚಿಮಘಟ್ಟದಲ್ಲಿ ಕಾಣಸಿಗುತ್ತವೆ.

ಕೃಷಿಯಲ್ಲಿ ಬಳಕೆ: ಸಾಂಪ್ರದಾಯಿಕ ಕೃಷಿಯಲ್ಲಿ ಬೈನೆಮರದ ಉಪಯೋಗವಿಲ್ಲದೆ ಕೃಷಿ ಕಾರ್ಯಸಂಪೂರ್ಣವಾಗುತ್ತಿರಲಿಲ್ಲ. ಇಂದಿಗೂ ಗ್ರಾಮೀಣಭಾಗದ ಸಾಕಷ್ಟು ಕೃಷಿಕರು ಎಳೆ ಬೈನೆ ಮರದ ಖಾಂಡಗಳನ್ನು ಸೀಳಿ ಹಗ್ಗಗಳಾಗಿ ಮಾಡುವ ಮೂಲಕ ಭತ್ತದ ಹೊರೆಕಟ್ಟಲು ಉಪಯೋಗಿಸುತ್ತಾರೆ. ಬಲಿತಮರದ ಖಾಂಡಗಳಿಂದ ನೇಗಿಲು, ನೋಗಗಳನ್ನಾಗಿ ಮಾಡಲಾಗುತ್ತದೆ. ಬೈನೆ ಮರದ ರೆಕ್ಕೆಗಳನ್ನು ಮನೆಯ ಮುಂದಿನ ಅಂಗಳ ಗುಡಿಸಲು ಪೊರಕೆಯಾಗಿ, ಭತ್ತದ ಒಕ್ಕಲು ಸಮಯದಲ್ಲಿ ಕಣ ಸ್ವತ್ಛಗೊಳಿಸುವ ಸಾಧನವಾಗಿ, ಜಾತ್ರೆ, ಸುಗ್ಗಿಗಳಲ್ಲಿ ತಳಿರುತೋರಣವಾಗಿ,ಮದುವೆ ಉತ್ಸವಗಳಲ್ಲಿ ಚಪ್ಪರಕ್ಕೆ ಹಾಕುವ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಬೈನೆ ಮರದ ಕಾಯಿಗಳನ್ನುಸಾಂಪ್ರಾದಾಯಿಕ ವಿಧಾನದಲ್ಲಿ ಮೀನು ಹಿಡಿಯಲು ಉಪಯೋಗಿಸಲಾಗುತ್ತಿದೆ.

ಪ್ರಾಣಿ ಪಕ್ಷಿಗಳಿಗೆ ಆಶ್ರಯ: ತಾನು ಬದುಕಿದ್ದ ವೇಳೆ ಜನರಿಗೆ ತನ್ನ ಎಲ್ಲ ಸರ್ವಸ್ವವನ್ನು ಧಾರೆ ಎರೆಯುವ ಈಮರ, ತನ್ನ ಜೀವಿತಾವಧಿಯ ನಂತರವು ಪ್ರಾಣಿಗಳಪಾಲಿಗೆ ಅಚ್ಚುಮೆಚ್ಚಿನ ಆವಾಸ ತಾಣ, ಒಣಗಿ ನಿಂತಮರದ ಖಾಂಡದಲ್ಲಿ ನೂರಾರು ಗೊಬ್ಬರದಹುಳುಗಳಿಗೆ ಆಹಾರ ಒದಗಿಸಿದರೆ, ಈ ಗೊಬ್ಬರದಹುಳುಗಳನ್ನು ಅರಿಸಿ ಬರುವ ಕಬ್ಬಕ್ಕಿನಂತ ಕಾಡು ಬೆಕ್ಕುಗಳಿಗೆ ಬೇಕಾದಷ್ಟು ಆಹಾರ ಒದಗಿಸುತ್ತದೆ. ಒಟ್ಟಿನಲ್ಲಿ ಹುಟ್ಟಿನಿಂದ ಭೂಮಿ ಮೇಲೆ ತನ್ನ ಕೊನೆಯ ಅಸ್ತಿತ್ವ ಇರುವವರಗೂ ಬಹು ಉಪಯೋಗಿಯಾಗಿದ್ದು, ಬಡವರ ಪಾಲಿನ ಕಲ್ಪವೃಕ್ಷವಾಗಿದೆ.

Advertisement

ಬೈನೆ ಮರದ ಸೇಂದಿ ಪಾನೀಯವಾಗಿ ಹೆಚ್ಚು ಬಳಕೆ :

ಈ ಮರದಿಂದ ಉತ್ಪತ್ತಿಯಾಗುವ ಸೇಂದಿ ಅತ್ಯಂತ ರುಚಿಕರ. ಬಿಸಿಲು ಮೂಡುವ ಮುನ್ನ ಸೇಂದಿಕುಡಿಯುವುದು ಆರೋಗ್ಯವರ್ಧಕ ಎಂಬ ಮಾತಿದೆ. ಸೇಂದಿ ಕುಡಿಯಲು ದೂರದೂರದ ಊರುಗಳಿಂದಜನರು ಆಗಮಿಸುವುದು ಉಂಟು. ಆರ್ಯುವೇದದ ಬಗ್ಗೆ ಅರಿವಿರುವ ಮಲೆನಾಡಿನ ಸಾಕಷ್ಟು ಜನರುಬೈನೆಮರದ ಸಸಿಗಳನ್ನು ಸೀಳಿ ಅದರ ತಿರುಳು ತಿನ್ನುತ್ತಾರೆ. ಸೇಂದಿ ಬೈನೆ ಮರದ ಮಾಲೀಕರಿಗೆ ಆದಾಯ ಮೂಲವೂ ಆಗಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಸೇಂದಿಯನ್ನು ಮಾರಾಟ ಮಾಡಿದರೆ ಹಲವು

ಕಾಫಿ ತೋಟಗಳ ಮಾಲೀಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮರದಿಂದ ಸೇಂದಿ ಇಳಿಸಿಕೊಳ್ಳುತ್ತಾರೆ.

ಬೈನೆ ಮರದ ಸ್ವರೂಪ :  ತಾಳೆ ಮರದ ಸ್ವರೂಪದಲ್ಲಿರುವ ಇದು ಸುಮಾರು ನೂರು ಅಡಿಯವರಗೂ ನೀಳವಾಗಿ ಬೆಳೆಯುವುದರಿಂದ ರಣಹದ್ದುಗಳು ಗೂಡು ಕಟ್ಟಲು ಈ ಮರಗಳನ್ನು ಹೆಚ್ಚಾಗಿ ಆಯ್ಕೆಮಾಡಿಕೊಳ್ಳುತ್ತವೆ.ಸಾಮಾನ್ಯವಾಗಿ 40 ಕ್ಕಿಂತ ಹೆಚ್ಚು ಅಂಗುಲ ಮಳೆಬೀಳುವ ಪಶ್ಚಿಮ ಘಟ್ಟಪ್ರದೇಶದಲ್ಲಿ ಈ ಮರಗಳು ಹೆಚ್ಚಾಗಿ ಕಂಡು ಬರುತ್ತವೆ.

ಬದುಕು ಆಧುನೀಕತೆಯತ್ತ ಮುಖ ಮಾಡಿರುವುದರಿಂದ ಬೈನೆಮರದಉಪಯೋಗ ಇತ್ತೀಚಿನ ವರ್ಷಗಳಲ್ಲಿಕಡಿಮೆಯಾಗುತ್ತಿದೆ. ಆದರೆ, ಇಂದಿಗೂಗ್ರಾಮೀಣ ಭಾಗದ ಜನರು ಈ ಮರದಉಪಯೋಗವನ್ನು ಒಂದಲ್ಲ ಒಂದು ರೀತಿಯಲ್ಲಿಪಡೆಯುತ್ತಿದ್ದಾರೆ. -ಜಯಣ್ಣ ಬ್ಯಾಕರವಳ್ಳಿ, ಕಾಫಿ ಬೆಳೆಗಾರರು

 

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next