Advertisement

Bailhongal: ಶರಣರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ

05:05 PM Nov 08, 2023 | Team Udayavani |

ಬೈಲಹೊಂಗಲ: ಶರಣ ಸಂಕುಲಕ್ಕೆ ಬೆಳಕಾಗಿ ವಚನ ಸಾಹಿತ್ಯ ರಕ್ಷಣೆಯಲ್ಲಿ ವೀರಗಣಾಚಾರಿಯಾಗಿದ್ದ 12ನೇ ಶತಮಾನದ ಮಡಿವಾಳ ಮಾಚಿದೇವರ ವಚನಗಳು ಇಂದು ಅತ್ಯಂತ ಪ್ರಸ್ತುತವಾಗಿವೆ ಎಂದು ಮಡಿವಾಳಪ್ಪ ಸಂಗೊಳ್ಳಿ ಹೇಳಿದರು.

Advertisement

ಸಮೀಪದ ಕಾರಿಮನಿ ಗ್ರಾಮದ ಮಡಿವಾಳ ಮಾಚಿದೇವರ ಸಮಾ ಧಿ ಸ್ಥಳದಲ್ಲಿ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾನವ ಕುಲಕ್ಕೆ ವಚನ ಸಾಹಿತ್ಯವನ್ನು ನೀಡಿದ ಶರಣರ ವಚನಗಳಲ್ಲಿ ಮಡಿವಾಳ ಮಾಚಿದೇವರು ಅಗ್ರಪಂಕ್ತಿಯಲ್ಲಿದ್ದವರು ಎಂದರು.

ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ ಮಾತನಾಡಿ, 12ನೇ ಶತಮಾನದ ದಾರ್ಶನಿಕ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಥೇಮ್ಸ್‌ ನದಿ ದಡದ ಮೇಲೆ ಸ್ಥಾಪನೆಯಾಗಿದೆ. ಶರಣರ ವಚನಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗುವದನ್ನು ನೋಡಿದರೆ 900 ವರ್ಷಗಳ ಹಿಂದಿನ ವಚನ ಸಾಹಿತ್ಯ ಇಂದಿನ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು.

ಎಚ್‌.ಜಿ.ಹೆಬ್ಬಳ್ಳಿ ಮತ್ತು ಸುಮಂಗಲಾ ಕರಡಿಗುದ್ದಿ ಮಾತನಾಡಿ, ಶರಣರು ಕಂಡ ಸಮಾನತೆಯ ನಾಡು ಕಟ್ಟಲು ಪಣ ತೊಡೋಣ, ಶರಣರ ಸಾಧನೆ ದೊಡ್ಡದಾಗಿದ್ದು ಅವರಿಗೆ ಇನ್ನೊಬ್ಬರ ಹೊಲಿಕೆ ಅಸಾಧ್ಯ, ಶರಣರಿಗೆ ಶರಣರೆ ಸಮಾನ ಎಂದರು.

ಸಿ.ಬಿ.ಯಡಳ್ಳಿ, ಎಫ್‌.ಎಸ್‌.ಸಿದ್ದನಗೌಡರ, ಎಮ್‌.ಎಸ್‌.ಕೊಳ್ಳಿ, ಎಸ್‌.ಎಸ್‌.ಆರಭಾಂವಿ, ಸಂಗಪ್ಪ ತಡವಲ, ರಾಜಕುಮಾರ ಮಡಿವಾಳರ, ಷಣ್ಮುಖಯ್ಯ ಪೂಜೇರಿ, ವಿರುಪಾಕ್ಷಯ್ಯ ಪೂಜೇರಿ, ನಾಗಪ್ಪ ನಾಯ್ಕರ, ಸೋಮಲಿಂಗ ಕಾರಿಮನಿ, ಬಸವರಾಜ ನರಸಣ್ಣವರ, ರಾಜಶೇಖರ ನಿಡವಣಿ ಇದ್ದರು. ಶೋಭಕ್ಕ ನಾಗನಗೌಡರ ಸ್ವಾಗತಿಸಿದರು. ಸುಧಾ ನರಸಣ್ಣವರ ನಿರೂಪಿಸಿದರು. ಚನ್ನಪ್ಪ ನರಸಣ್ಣವರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next