Advertisement

Bailhongal: ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡಿಸಲು ಕ್ರಮ-ಯ.ರು.ಪಾಟೀಲ

05:49 PM Nov 30, 2023 | Team Udayavani |

ಬೈಲಹೊಂಗಲ: ಮಕ್ಕಳ ಸಾಹಿತ್ಯಲೋಕದಲ್ಲಿ ತಾಲೂಕಿನ ಸಾಹಿತಿಗಳ ಪಾತ್ರ ಅಪಾರವಾಗಿದೆ ಎಂದು ಸಾಹಿತಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ ಹೇಳಿದರು.

Advertisement

ಬುಧವಾರ ಪಟ್ಟಣದ ಶಾಸಕರ ಮತಕ್ಷೇತ್ರದ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.4ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಉದ್ಘಾಟನೆ, ಗ್ರಂಥ ಲೋಕಾರ್ಪಣೆ ಮತ್ತು ಮಕ್ಕಳ ಮಂದಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬೈಲಹೊಂಗಲ ನಾಡಿನ ಮಕ್ಕಳ ಸಾಹಿತಿಗಳಾದ ಚನ್ನಬಸಪ್ಪ ಹೊಸಮನಿ, ಎಂ.ಆರ್‌.ಮುಲ್ಲಾ, ಗಂಗಾಧರ ತುರಮರಿ, ಉಳವೀಶ ಹುಲೆಪ್ಪನವರಮಠ ಮೊದಲಾದವರು ಅನೇಕ ಕೃತಿಗಳನ್ನು ಹೊರ ತಂದು ಅಪಾರ ಕೀರ್ತಿ ಪಡೆದಿದ್ದಾರೆ. ಇಂದಿನ ಮಕ್ಕಳು ಕನ್ನಡ ಅಂಕಿಗಳನ್ನು ಹೆಚ್ಚಾಗಿ ಬಳಕೆ ಮಾಡಿ ಕನ್ನಡ ಭಾಷೆ ಬೆಳವಣಿಗೆಗೆ ಮುಂದಾಗಬೇಕು ಎಂದರು.

ಸಂಘದ ಗೌರವಾಧ್ಯಕ್ಷ ರಮೇಶ ಇಂಗಳಗಿ ಮಾತನಾಡಿ, ಇಂದಿನ ಮಕ್ಕಳಿಗೆ ಮಕ್ಕಳ ಸಾಹಿತ್ಯದ ಕುರಿತು ಅರಿವು ಮೂಡಿಸುವ ಕಾರ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾಗುವುದು. ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಸಾಹಿತಿಗಳು, ನಾಗರಿಕರು ಸಹಕಾರ ನೀಡಬೇಕೆಂದರು.

ಇದೇ ವೇಳೆ ಹಿರಿಯ ಪತ್ರಕರ್ತ ಸಿ.ವೈ. ಮೆಣಸಿನಕಾಯಿ ಅವರು ರಚಿಸಿದ ಬಾಳು ಬಂಗಾರ ಮತ್ತಿತರ ಕಥೆಗಳು ಮತ್ತು ಕಾಲಚಕ್ರ
ಮತ್ತಿತರ ಕಥೆಗಳು ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ವರ್ಷಾ ಬಡ್ಲಿ, ವಿನೋದಾ ಪರಮನಾಯ್ಕರ ಇವರಿಗೆ ಮಕ್ಕಳ ಮಂದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು ಸಾನ್ನಿಧ್ಯ ವಹಿಸಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್‌.ಕಸಾಳೆ, ಕ.ರಾ.ಪ್ರೌ.ಶಾ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್‌. ಎಂ. ಪಾಟೀಲ, ಶಾಸಕರ ಮತಕ್ಷೇತ್ರದ ಮಾದರಿ ಪ್ರಾಥಮಿಕ ಶಾಲೆ ನಂ.4 ರ ಮುಖ್ಯೊಪಾಧ್ಯಾಯ ಸಿ.ಬಿ.ಶೀಗಿಹಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಮಹೇಶ ಕೋಟಗಿ, ಕ.ರಾ.ಮ.ಸಾ.ಪ ಜಿಲ್ಲಾ ಕಾನೂನು ಸಲಹೆಗಾರ ಡಾ.ಉದ್ದಣ್ಣ ಗೋಡೇರ, ತಾಲೂಕಾ ಘಟಕ ಅಧ್ಯಕ್ಷ ಸಿ.ವೈ. ಮೆಣಶಿನಕಾಯಿ, ಉಪಾಧ್ಯಕ್ಷ ರಾಜು ಬಡಿಗೇರ, ಕೋಶಾಧ್ಯಕ್ಷ ಶಿವಬಸ್ಸು ಮೆಳವಂಕಿ, ಸಂಘಟನಾ ಕಾರ್ಯದರ್ಶಿ ಮಹಾಂತೇಶ ರಾಜಗೋಳಿ, ಮಹಿಳಾ ಕಾರ್ಯದರ್ಶಿ ಸರಸ್ವತಿ ಬನ್ನಿಗಿಡದ, ಮಾಧ್ಯಮ ವಕ್ತಾರ ಈಶ್ವರ ಶಿಲ್ಲೇದಾರ, ನಿರ್ದೆಶಕರಾದ ಎಸ್‌.ಎಸ್‌.ಪಾಟೀಲ, ರಾಜು ಹರಕುಣಿ, ಭಾರತಿ ಕಿತ್ತೂರಮಠ, ಜಿ.ಬಿ.ತುರಮರಿ, ಎಂ.ಎಂ.ಸಂಗಣ್ಣವರ ಇದ್ದರು.
ನಿರ್ದೆಶಕ ಸಿದ್ದು ನೇಸರಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆನಂದ ಮಾಲಗಿತ್ತಿಮಠ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next