Advertisement

ಬೈಲಹೊಂಗಲ: ಎನ್‌ಎಸ್‌ಎಸ್‌ ವ್ಯಕ್ತಿತ್ವ ವಿಕಸನದ ಗರಡಿಮನೆ

05:22 PM Jun 02, 2023 | Team Udayavani |

ಬೈಲಹೊಂಗಲ: ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯತೆ, ಸಾಮಾಜಿಕ ಜೀವನದ ಜವಾಬ್ದಾರಿ ಹಾಗೂ ನಿಸ್ವಾರ್ಥ ಸೇವೆಯನ್ನು
ಕಲಿಸುವದರೊಂದಿಗೆ ವ್ಯಕ್ತಿತ್ವ ವಿಕಸನ ಕಲಿಸುವ ಗರಡಿ ಮನೆಯಾಗಿ ಎನ್‌ ಎಸ್‌ ಎಸ್‌ ಕಾರ್ಯ ನಿರ್ವಹಿಸುತ್ತಿದೆ ಎಂದು ನ್ಯಾಯವಾದಿ ಎಫ್‌.ಎಸ್‌. ಸಿದ್ದನಗೌಡರ ಹೇಳಿದರು.

Advertisement

ಪಟ್ಟಣದ ಗಣಾಚಾರಿ ಮಹಿಳಾ ಕಾಲೇಜಿನ ಎನ್‌ ಎಸ್‌ ಎಸ್‌ ಘಟಕದಿಂದ ತಾಲೂಕಿನ ಬೇವಿನಕೊಪ್ಪದ ಆನಂದಾಶ್ರಮದಲ್ಲಿ ನಡೆದ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ಕಾಲೇಜು ಜೀವನ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಹಳ್ಳಿಯ ಜೀವನ, ಸಾರ್ವಜನಿಕ ಆಸ್ತಿಗಳ ರಕ್ಷಣೆ, ಸಮಾಜದ ಜೊತೆ ಬೆರೆಯುವ ಗುಣವನ್ನು ಅರಿತುಕೊಳ್ಳುವುದರೊಂದಿಗೆ ನಾಯಕತ್ವದ ಗುಣ ರೂಪಿಸುವ ವೇದಿಕೆ ಕಲ್ಪಿಸಿ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುತ್ತದೆ.

ಇಂದಿನ ವಿದ್ಯಾರ್ಥಿಗಳ ನಾಳಿನ ಬದುಕಿಗೆ ಎಲ್ಲ ತರಹದ ಅನುಭವ ಕಲಿಸುವುದರೊಂದಿಗೆ ಎಲ್ಲರ ಜೊತೆಯಲ್ಲಿ ಭಾತೃತ್ವದೊಂದಿಗೆ ಕೋಮು ಸೌಹಾರ್ದತೆಯಿಂದ ಇರುವ ಸಾಮಾಜಿಕ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತರಿಸುವ ಕಾರ್ಯ ಎನ್‌ಎಸ್‌ಎಸ್‌ ಮಾಡುತ್ತಿದೆ. ದೇಶದಲ್ಲಿ ಒಂದೂವರೆ ಕೋಟಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೊಜನೆಯಲ್ಲಿ ತೋಡಗಿಕೊಂಡು ಗ್ರಾಮಗಳ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರಮದಾನದ ಮನೊಭಾವನೆ,
ಹೊಂದಾಣಿಕೆ ಹಾಗೂ ಸ್ವಾವಲಂಬನೆಯ ಬದುಕನ್ನು ಕಲಿಸುವ ಉದ್ದೇಶದಿಂದ 1969ರಲ್ಲಿ ಸರ್ಕಾರ ಜಾರಿಗೆ ತಂದಿರುವ ಎನ್‌.ಎಸ್‌.ಎಸ್‌.ದ ಸದುಪಯೋಗ ಪ್ರತಿಯೊಬ್ಬ ಸ್ವಯಂಸೇವಕರು ಪಡೆದುಕೊಳ್ಳಬೇಕೆಂದರು. ಆಶ್ರಮದ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಮುದಕವಿ, ಗ್ರಾ.ಪಂ ಸದಸ್ಯ ಸುರೇಶ್‌ ಮಾಟೋಳ್ಳಿ, ಶ್ರೀಶೈಲ ಸಂಪಗಾಂವಿ, ಮಹಾಂತೇಶ ಉರಬೀನ, ಶಿಬಿರಾ  ಧಿಕಾರಿ ಮಲ್ಲಿಕಾರ್ಜುನ ಪೆಂಟೇದ, ವಿ.ಡಿ.ಮಾಕಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next