Advertisement

ಸೋನಂ ಮನೆಯ ಆಭರಣ ಕೊಂಡ ವ್ಯಾಪಾರಿಗೆ ಜಾಮೀನಿಲ್ಲ

08:41 PM Apr 19, 2022 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಸೋನಂ ಕಪೂರ್‌ರ ನವದೆಹಲಿ ನಿವಾಸದಿಂದ ಕಳ್ಳತನ ಮಾಡಲಾಗಿದ್ದ ಆಭರಣವನ್ನು ಕೊಂಡುಕೊಂಡಿರುವ ಉದ್ಯಮಿಯ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.

Advertisement

ದೇವ್‌ ವರ್ಮಾ(40) ಹೆಸರಿನ ಕಾಲ್ಕಾಜಿ ನಿವಾಸಿಯು, ಕಳ್ಳತನವಾಗಿದ್ದ ಆಭರಣಗಳನ್ನು ರಶೀದಿ ಇಲ್ಲದೆಯೇ ಕೊಂಡುಕೊಂಡಿದ್ದಾರೆ ಎನ್ನುವ ಆರೋಪವಿದೆ. ಅವರ ಬಳಿ ಇದ್ದ 1 ಕೋಟಿ ರೂ. ಮೌಲ್ಯದ 100 ವಜ್ರಗಳು, 6 ಚಿನ್ನದ ಸರ, ವಜ್ರದ ಬಳೆಗಳು, ವಜ್ರದ ಬ್ರೇಸ್ಲೆಟ್‌ ಮತ್ತು ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇಂತ ಭ್ರಷ್ಟ ಸರ್ಕಾರವನ್ನ ನೋಡಿಲ್ಲ : ಸಿದ್ದು ವಾಗ್ದಾಳಿ

ಇನ್ನೂ ಕೆಲವು ವಸ್ತುಗಳನ್ನು ವಶ ಪಡಿಸಿಕೊಳ್ಳುವುದು ಬಾಕಿಯಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ಜಾಮೀನು ತಿರಸ್ಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next