ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಇಬ್ಬರೂ ನಟಿಯರ ಜೈಲುವಾಸ ಮತ್ತೆ ಮುಂದುವರಿಕೆಯಾಗಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎನ್ ಡಿಪಿಎಸ್ ನ್ಯಾಯಾಲಯೂ ಅರ್ಜಿಯನ್ನು ತಿರಸ್ಕರಿಸಿತು. ಪ್ರಕರಣದ ಇತರ ಆರೋಪಿಗಳಾದ ರಾಹುಲ್, ಶಿವಪ್ರಕಾಶ್ ಮತ್ತು ವಿನಯ್ ಜಾಮೀನು ನಿರಾಕರಿಸಲಾಗಿದೆ.
ಇದನ್ನೂ ಓದಿ:ಕರಣ್ ಜೋಹರ್‌ಗೂ ಡ್ರಗ್ ಸಂಕಷ್ಟ? ವಿಡಿಯೋ ತಿರುಚಿದ್ದಲ್ಲ: FSL ವರದಿಯಿಂದ ಸ್ಪಷ್ಟ
ಇತರ ಆರೋಪಿಗಳಾದ ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು ಎಸ್ ಪಿಪಿ ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಯಿತು. ಪ್ರಶಾಂತ್ ರಂಕಾ, ವೈಭವ್ ಜೈನ್, ಪ್ರಶಾಂತ್ ರಾಜು ಮತ್ತು ಅಭಿಸ್ವಾಮಿಯ ಅರ್ಜಿ ವಿಚಾರಣೆಯನ್ನು ಕೂಡಾ ಸೆ.30ಕ್ಕೆ ಮುಂದೂಡಲಾಯಿತು.
ಡ್ರಗ್ ಪ್ರಕರಣದ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿಯವರನ್ನು ಬಂಧಿಸಲಾಗಿದೆ.
ಸಂಜನಾ ಸೆ.14ರಂದು ರಾಗಿಣಿ ಬಂಧನವಾಗಿದ್ದರೆ, ಎರಡು ದಿನಗಳ ನಂತರ ಎಂದರೆ ಸೆ.16ರಂದು ಸಂಜನಾರ ಮನೆಗೆ ದಾಳಿ ಮಾಡಿದ ಬಳಿಕ ಅವರನ್ನು ಬಂಧಿಸಿದ್ದರು.