Advertisement

ಇನ್ನು ಏಕ ಸದಸ್ಯ ಪೀಠದಿಂದ ಜಾಮೀನು ಅರ್ಜಿ ವಿಚಾರಣೆ

01:25 AM Sep 21, 2019 | Team Udayavani |

ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ಇತ್ಯರ್ಥಕ್ಕೆ ಏಕ ಸದಸ್ಯ ಪೀಠ ರಚಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಿಚಾ ರಣೆಗೆ ಇಬ್ಬರು ಅಥವಾ ಮೂವರು ಸದ ಸ್ಯರ ನ್ಯಾಯಪೀಠದ ಬದಲಿಗೆ ಕೇವಲ ಏಕಸದಸ್ಯ ಪೀಠವನ್ನು ರಚಿಸಲು ಸೆ. 17 ರಂದು ನಿಯಮ ಬದಲಾವಣೆ ಮಾಡಲಾಗಿತ್ತು. ಈವರೆಗೆ ಕೋರ್ಟ್‌ ನಂಬರ್‌ 1 ರಲ್ಲಿ ಇಬ್ಬರು ಸದಸ್ಯರ ನ್ಯಾಯಪೀಠವು ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿತ್ತು. ಕೆಲವು ಬಾರಿ ಮೂರು ನ್ಯಾಯಮೂರ್ತಿಗಳೂ ಇರುತ್ತಿದ್ದರು.

Advertisement

ಅಷ್ಟೇ ಅಲ್ಲ, ಪ್ರಕರಣಗಳ ವರ್ಗಾವಣೆ ಮತ್ತು ತುರ್ತು ಪ್ರಕರಣಗಳ ವರ್ಗಾವಣೆ ಯನ್ನೂ ಏಕ ಸದಸ್ಯ ಪೀಠ ನಿರ್ವಹಿಸಲಿದೆ. ಈ ಪೀಠಕ್ಕೆ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿ ನೇಮಿಸಲಿದ್ದಾರೆ. 1950ರ ಸಮಯದಲ್ಲಿ ಎಲ್ಲ ನ್ಯಾಯ ಮೂರ್ತಿಗಳೂ ಜಾಮೀನು ಅರ್ಜಿ ವಿಚಾರಣೆ ಯನ್ನು ನಡೆಸುತ್ತಿದ್ದರು. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ನ್ಯಾಯಮೂರ್ತಿ ಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ಹೀಗಾಗಿ ಅನಂತರ 2 ಅಥವಾ 3 ನ್ಯಾಯಮೂರ್ತಿಗಳು ಜಾಮೀನು ಅರ್ಜಿಗಳ ವಿಚಾರಣೆ ನಡೆಸಲು ಆರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next