Advertisement

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

10:34 AM Apr 28, 2024 | Team Udayavani |

ಬೈಕಂಪಾಡಿ: ಇಲ್ಲಿನ ಹೋಟೆಲ್ ಶ್ರೀ ದ್ವಾರ ಬಳಿ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ.

Advertisement

ಒಂದು ಲಾರಿ ಗ್ರಾನೈಟ್ ಮಳಿಗೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಗ್ರಾನೆಟ್ ಗೆ ಹಾನಿಯಾಗಿದೆ. ಮಂಗಳೂರಿನಿಂದ ಮಲ್ಪೆಗೆ ಮೀನು ಸಾಗಾಟ ಮಾಡುತ್ತಿದ್ದ ಹಳೆಯ ಲಾರಿ ಸಂಪೂರ್ಣ ಹಾನಿಗೀಡಾಗಿದೆ.

ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಮಹಿಳಾ ಮೀನುಗಾರರು ನಿತ್ಯ ಮೀನು ಮಾರಾಟಕ್ಕೆ ಕುಳಿತುಕೊಳ್ಳುತ್ತಿದ್ದು, ಭಾರಿ ಅಪಾಯವೊಂದು ತಪ್ಪಿದಂತಾಗಿದೆ.

ಇಲ್ಲಿ ಹೆದ್ದಾರಿಯ ನಡುವೆ ಡಿವೈಡರ್ ಒಂದನ್ನು ನೀಡಲಾಗಿದ್ದು, ಅಜಾಗರೂಕತೆಯ ಚಾಲನೆ ಮಾಡಿದಲ್ಲಿ ಅಪಾಯ ತಪ್ಪಿದ್ದಲ್ಲ. ಸರ್ವಿಸ್ ರಸ್ತೆಯೂ ಇಲ್ಲದಿರುವುದರಿಂದ ಈ ಹೆದ್ದಾರಿ ಬದಿ ಅಪಘಾತ ಪ್ರಕರಣಗಳು ಹೆಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next