Advertisement

ಬೈಕಂಪಾಡಿ ಕೈಗಾರಿಕೆ ಟೌನ್‌ಶಿಪ್‌ ಪ್ರಾಧಿಕಾರಕ್ಕೆ “ನಿಯಮ’ವೇ ಅಡ್ಡಿ!

02:20 PM Apr 11, 2024 | Team Udayavani |

ಮಹಾನಗರ: ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬೈಕಂಪಾಡಿ ಕೈಗಾರಿಕೆ ವಲಯದ ಅಭಿವೃದ್ಧಿಗೆ ಮರು ಜೀವ ನೀಡಬಹುದಾದ “ಬೈಕಂಪಾಡಿ ಕೈಗಾರಿಕೆ ಟೌನ್‌ಶಿಪ್‌ ಪ್ರಾಧಿಕಾರ’ ರಚನೆಗೆ  ಸರಕಾರದ ನಿಯಮಾವಳಿಯೇ ಈಗ ಅಡ್ಡಿಯಾಗಿದೆ!

Advertisement

ಟೌನ್‌ಶಿಪ್‌ ಪ್ರಾಧಿಕಾರ ರಚನೆಗೆ ಸರಕಾರ ಈ ಹಿಂದೆಯೇ ನಿರ್ಧರಿಸಿ ಈ ಕುರಿತ ಸಿದ್ಧತೆ ನಡೆಸಿತ್ತು. ಆದರೆ ಬಳಿಕ ಹೊಸದಾಗಿ ಕೈಗಾರಿಕೆ ನಿಯಮಾವಳಿ ರೂಪಿಸಿದ ಸಂದರ್ಭ ಇದಕ್ಕೆ ವಿಘ್ನ ಎದುರಾಯಿತು.

ಸರಕಾರದ ಹೊಸ ನಿಯಮಾವಳಿ ಪ್ರಕಾರ ಈಗ ಇರುವ ಕೈಗಾರಿಕೆ ಪ್ರದೇಶವು 1 ಸಾವಿರ ಎಕ್ರೆ ಹೊಂದಿದ್ದರೆ ಮಾತ್ರ
ಅದನ್ನು ಕೈಗಾರಿಕೆ ಟೌನ್‌ಶಿಪ್‌ ಪ್ರಾಧಿಕಾರ ಮಾಡಲಾಗುತ್ತದೆ. ಅದಕ್ಕಿಂತ ಕಡಿಮೆ ವಿಸ್ತಾರ  ಹೊಂದಿದ್ದರೆ ಪ್ರಾಧಿಕಾರ ಮಾಡಲು
ಆಗುವುದಿಲ್ಲ. ಸದ್ಯ ಬೈಕಂಪಾಡಿ ಕೈಗಾರಿಕೆ ಪ್ರದೇಶವು ಕಡಿಮೆ ವ್ಯಾಪ್ತಿ ಹೊಂದಿರುವುದರಿಂದ ಪ್ರಾಧಿಕಾರ ರಚನೆಗೆ ಅಡ್ಡಿಯಾಗಿದೆ.

ತೆರಿಗೆ ಬೇಕು-ಅಭಿವೃದ್ಧಿ ಇಲ್ಲ!
ಸುಮಾರು 50 ವರ್ಷಗಳ ಹಿಂದೆ ಸ್ಥಾಪನೆಯಾದ ಬೈಕಂಪಾಡಿ ಕೈಗಾರಿಕೆ ವ್ಯಾಪ್ತಿ ಕೆಐಎಡಿಬಿ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಐಎಡಿಬಿ ಈ ಪ್ರದೇಶವನ್ನು ಅಭಿವೃದ್ಧಿ ಮಾಡುತ್ತಿಲ್ಲ. ಕೆಐಎಡಿಬಿಗೆ ಸರಕಾರದಿಂದ ಸೂಕ್ತ ಅನುದಾನ ಬಿಡುಗಡೆ ಆಗದ ಕಾರಣ ನಿರ್ವಹಣೆ ಧ್ಯವಾಗುತ್ತಿಲ್ಲ . ಇದೇ ವೇಳೆ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹ ಮಾಡುತ್ತಿವೆಯೇ
ವಿನಃ ಅಭಿವೃದ್ಧಿ ಮಾಡಲು ಆಸಕ್ತಿ
ತೋರುತ್ತಿರಲಿಲ್ಲ.

ಪ್ರಾಧಿಕಾರ ಯಾಕಾಗಿ?
ಇಂಡಸ್ಟ್ರಿಯಲ್‌ ಟೌನ್‌ ಶಿಪ್‌ ಪ್ರಾಧಿಕಾರ ಸ್ಥಾಪನೆ ಆದಲ್ಲಿ ಕೈಗಾರಿಕೆ ವಲಯದ ಸಮಗ್ರ ಅಭಿವೃದ್ಧಿ ಇದರ ವ್ಯಾಪ್ತಿಗೆ ಬರಲಿದೆ. ರಸ್ತೆ, ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ಸೇರಿ ಎಲ್ಲ ಅಭಿವೃದ್ಧಿಗಳನ್ನು ಈ ಪ್ರಾಧಿಕಾರವೇ ನಿರ್ವಹಿಸಬೇಕು. ಈ ಕಾರಣದಿಂದ ಕೈಗಾರಿಕೆ ವಲಯದ ವ್ಯಾಪ್ತಿಯ ಎಲ್ಲ ಸಂಸ್ಥೆಗಳ ತೆರಿಗೆಗಳು ಇದರ ವ್ಯಾಪ್ತಿಗೆ ಬರಲಿದೆ. ಇದರಲ್ಲಿ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಶೇ.30ರಷ್ಟು ತೆರಿಗೆಯನ್ನು ಮಾತ್ರ ಪ್ರಾಧಿಕಾರ
ನೀಡಬೇಕಾಗುತ್ತದೆ.

Advertisement

500 ಎಕ್ರೆ ಪರಿಗಣಿಸಲು ಆಗ್ರಹ
1,000 ಎಕ್ರೆ ವ್ಯಾಪ್ತಿಯ ನಿಯಮ ಕೈಬಿಟ್ಟು 500 ಎಕ್ರೆ ವ್ಯಾಪ್ತಿಯ ಕೈಗಾರಿಕೆ ಪ್ರದೇಶವನ್ನು ಸರಕಾರ ಟೌನ್‌ಶಿಪ್‌ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ. ಪ್ರಾಧಿಕಾರ ರಚನೆಯಾದರೆ ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ವಿವಿಧ ರೀತಿಯ ಮೂಲ ವ್ಯವಸ್ಥೆಗಳು ಸುಧಾರಣೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. – ಅರುಣ್‌ ಪಡಿಯಾರ್‌, ಅಧ್ಯಕ್ಷರು ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕೆಗಳ ಸಂಘ

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next