Advertisement
ಒಂದು ವಾರ ರಂಗಾಸಕ್ತರಿಗೆ ರಂಗ ಪ್ರಯೋಗಗಳುಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಣಬಡಿಸಲು ರಂಗಾಯಣದ ಆವರಣ ಮದುವಣಗಿತ್ತಿಯಂತೆಸಿಂಗಾರಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಶಿಲ್ಪಗಳ ಕೆತ್ತನೆ…ಹೀಗೆ ಸಕಲ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ.
Related Articles
Advertisement
ಈ ಬಾರಿ ವಿಶೇಷವಾಗಿ ಕಲಾವಿದರೇ ರಚಿಸಿರುವ ಅನೇಕ ಚಿತ್ರಗಳನ್ನು ರಂಗಾಯಣದ ಆವರಣದಲ್ಲಿಪ್ರದರ್ಶನ ಮಾಡಲಾಗುತ್ತಿದೆ. ಪ್ರತಿದಿನ ಉತ್ಸವಕ್ಕೆಆಗಮಿಸುವ 200ರಿಂದ 250 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್‌ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದ್ದಾರೆ.
ವರ್ಣಚಿತ್ರ ಕಾರ್ಯಾಗಾರ: ಬಹುರೂಪಿ ಅಂಗವಾಗಿರಂಗಾಯಣದ ಅಂಗಳದಲ್ಲಿ “ಭಾವಗಳ ಬಣ್ಣದ ಬಹುರೂಪಿ ತಾಯಿ’ ಎಂಬ ಹೆಸರಿನಲ್ಲಿ ವರ್ಣಚಿತ್ರ ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರದಲ್ಲಿ ಕಾವಾ ಕಾಲೇಜಿನ 5 ಮಹಿಳಾ ವಿದ್ಯಾರ್ಥಿಗಳ ಭಾಗ ವಹಿಸಿದ್ದು, ತಾಯಿಸಂಬಂಧಿಸಿದಂತೆ 5 ವಿಭಿನ್ನ ಚಿತ್ರ ಗಳನ್ನು ಬಿಡಿಸುತ್ತಿದ್ದಾರೆ.ಆ ಚಿತ್ರಗಳನ್ನು ಬಹುರೂಪಿ ಯಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿ ವನರಂಗ ರಂಗವೇದಿಕೆಯನ್ನು ತನ್ನ ಹೆಸರಿನಂತೆಯೇ ರೂಪಿಸಲಾಗಿದೆ. ರಂಗವೇದಿಕೆಯಲ್ಲಿಗಿಡ, ಮರಗಳನ್ನು ಬೆಳೆಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಕಾರಂತ ಶಿಲ್ಪರಂಗವನ ಲೋಕಾರ್ಪಣೆ :
ಬಹುರೂಪಿ ಅಂಗವಾಗಿ ರಂಗಾಯಣದ ಅಂಗಳದಲ್ಲಿ ಕಳೆದ 8 ದಿನಗಳಿಂದ ಶಿಲ್ಪಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿರುವ ಕಲಾವಿದರಾದ ಸುಭಾಷ್,ನವೀನ್, ಕೆ.ಕುಮಾರ್, ಯಶವಂತ, ಪುನೀತ್,ಸುಮನ್, ಆನಂದ, ಭವಾನಿ ಶಂಕರ್, ಲೀಲಾವತಿ ಹಾಗೂ ಜ್ಯೋತಿ ಭಾರತಿ ತಲಾ ಒಂದೊಂದುಕಲ್ಲಿನ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದು, ಇನ್ನುಎರಡು ದಿನಗಳಲ್ಲಿ ಪೂರ್ಣಗೊಳ್ಳಿದೆ. ಸದರಿಕಲಾಕೃತಿಗಳನ್ನು ಬಿ.ವಿ.ಕಾರಂತ ರಂಗಚಾವಡಿಮುಂಭಾಗದ ಜಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಜತೆಗೆ ಆ ಸ್ಥಳಕ್ಕೆ ಕಾರಂತ ಶಿಲ್ಪರಂಗವನ ಎಂದುಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಮಾ.11 ರಿಂದ 20 ರವರೆಗೆ ನಡೆಯುವ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ಕ್ಕೆರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಕುಶಲ, ಆಹಾರ, ತಿನಿಸು,ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 80ಮಳಿಗೆಗಳು ತಲೆ ಎತ್ತುತ್ತಿವೆ. “ತಾಯಿ’ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ಸಿದ್ಧಗೊಳಿಸಲಾಗಿದೆ. – ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ.