Advertisement
ಬೆಳ್ತಂಗಡಿ: ಒಂದು ಸಣ್ಣ ಮೂರ್ತಿಯನ್ನು ಕೆತ್ತುವುದಕ್ಕೂ, ಸುಮಾರು 40 ಅಡಿಯ ಭವ್ಯ ವಿಗ್ರಹವನ್ನು ಕೆತ್ತಿ ಜೀವಭಾವ ತುಂಬುವುದಕ್ಕೂ ಅಜ ಗಜಾಂತರ.
Related Articles
Advertisement
ಗೋಪಾಲ ಶೆಣೈಯವರು ಬೃಹತ್ ಬಾಹುಬಲಿಯ ಕೆತ್ತನೆಗೆ ಮೊದಲು ಸಣ್ಣದಾದ ಎರಡು ಅಡಿ ಎತ್ತರದ ಮೂರ್ತಿಯೊಂದನ್ನು ರಚಿಸಿಕೊಂಡಿದ್ದರು. ಅದು ನೆಲ್ಲಿಕಾರು ಕಲ್ಲಿನದೋ ಅಥವಾ ಮಣ್ಣಿನದೋ ಎಂಬುದು ಸರಿಯಾಗಿ ನೆನಪಿಲ್ಲ. ಅದರ ಆಧಾರದಲ್ಲೇ ನಮಗೆ ದಿಗªರ್ಶನ ಮಾಡುತ್ತಿದ್ದರು ಎಂಬುದು ಕಣ್ಣನ್ ಅವರ ಮಾತು.ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿಬಂದು ದೇವರಿಗೆ ಕೈಮುಗಿದು ಕೆಲಸ ಆರಂಭಿಸು ತ್ತಿದ್ದೆವು. ಅಚಲ ಶ್ರದ್ಧೆ, ಸೂಜಿಮೊನೆಯಷ್ಟು ನಿಖರ ವಾದ ಏಕಾಗ್ರತೆ ಅಗತ್ಯವಿತ್ತು. ಅದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇವೆ. ಭಗವಾನ್ ಬಾಹುಬಲಿಯ ಆಶೀರ್ವಾದವೇ ನಮ್ಮಿಂದ ಅಂತಹ ದೊಡ್ಡ ಕಾರ್ಯವನ್ನು ಮಾಡಿಸಿದೆ ಎಂಬುದು ಅವರ ಅಭಿಪ್ರಾಯ. ಜನ ಅಚ್ಚರಿ ಪಡುತ್ತಿದ್ದರು
ಈ ಅದ್ಭುತ ಕಾರ್ಯವನ್ನು ನೋಡಲು ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದರು. ನಮ್ಮ ಕಾರ್ಯವನ್ನು ಕಂಡೂ ಅಚ್ಚರಿಪಡುತ್ತಿದ್ದರು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೇಳುತ್ತಿದ್ದ ಪ್ರಶ್ನೆ ಒಂದೇ -ಇಂಥ ಬೃಹನ್ಮೂರ್ತಿಯನ್ನು ಹೇಗೆ ಸಾಗಿಸು ತ್ತಾರೆ? ಸಾಗಿಸುವ ಸಂದರ್ಭದಲ್ಲೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಾಹುಬಲಿ ಮೂರ್ತಿ ಸಾಕಾರಗೊಳ್ಳುವ ಕಾರ್ಯ ಪ್ರಗತಿ ಹೊಂದು ತ್ತಿದ್ದಂತೆ ಅದರ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳ ಯಾವುದು ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಪರಮಪೂಜ್ಯರ ಪ್ರವೇಶ
ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 4ನೇ ಮಹಾಮಸ್ತಕಾಭಿಷೇಕಕ್ಕೆ ಮಾರ್ಗದರ್ಶನ ನೀಡಲಿರುವ ಪರಮಪೂಜ್ಯ ಶ್ರೀ 108 ಆಚಾರ್ಯ ಶ್ರೀ ವರ್ಧಮಾನ ಸಾಗರ್ ಜೀ ಮಹಾರಾಜ್ ಅವರು ಪ್ರಸ್ತುತ ನಾರಾವಿ ಬಸದಿ ತಲುಪಿದ್ದು, ಫೆ. 1ರಂದು ಕ್ಷೇತ್ರವನ್ನು ತಲುಪುವರು. ಶ್ರವಣಬೆಳಗೊಳದ ಮಸ್ತಕಾಭಿಷೇಕ ಮುಗಿಸಿ ಹೊರಟಿರುವ ಅವರು ಹಾಗೂ 47 ಮುನಿಗಳ ತಂಡ ಹುಂಬುಜದಿಂದ ವರಂಗ-ಕಾರ್ಕಳ ಮೂಲಕ ಪಾದಯಾತ್ರೆ ನಡೆಸಿದ್ದಾರೆ. ಚಿಗುರೊಡೆದ ಕನಸು
ಧರ್ಮಸ್ಥಳದಲ್ಲಿ ಆಧ್ಯಾತ್ಮಿಕ ವಾತಾವರಣ ವನ್ನು ಹೆಚ್ಚಿಸಲು ಬಾಹುಬಲಿ ಪ್ರತಿಮೆಯನ್ನು ಸ್ಥಾಪಿಸುವ ಕಲ್ಪನೆಯು ದಿ| ಶ್ರೀ ರತ್ನವರ್ಮ ಹೆಗ್ಗಡೆ ಅವರ ಮನಸ್ಸಿನಲ್ಲಿ ಹುಟ್ಟಿತು. ಶ್ರವಣಬೆಳಗೊಳ, ಕಾರ್ಕಳ ಮತ್ತು ವೇಣೂರುಗಳಲ್ಲಿ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕದ ವಿಧಿ ವಿಧಾನಗಳನ್ನು ನಿರ್ವಹಿಸುವಾಗಲೆಲ್ಲ ಹೆಗ್ಗಡೆಯವರ ಮನೆತನದವರ ಪಾತ್ರ ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ ಶ್ರೀ ರತ್ನವರ್ಮ ಹೆಗ್ಗಡೆ ಅವರು ಬಾಹುಬಲಿ ಮೂರ್ತಿಶಿಲ್ಪ ಪ್ರತಿಷ್ಠಾಪಿಸುವ ಯೋಚನೆಯನ್ನು ಹೊಳೆಸಿಕೊಂಡರು. ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮತ್ತು ಶ್ರೀ ಜಿನರಾಜ್ ಹೆಗ್ಡೆ (ಮಂಗಳೂರಿನ ಪ್ರಸಿದ್ಧ ವಕೀಲರು ಹಾಗೂ ಹೆಗ್ಗಡೆ ಕುಟುಂಬದ ಸ್ನೇಹಿತರು) ಅವರ ಮುಂದೆ ಈ ಯೋಚನೆ ಪ್ರಸ್ತಾವಿಸಲ್ಪಟ್ಟಿತು. ಅನಂತರ ಶ್ರೀ ರತ್ನವರ್ಮ ಹೆಗ್ಗಡೆ ಅವರ ಕನಸು ಸಾಕಾರಗೊಂಡ ಕ್ಷಣಗಳಿಗೆ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸಾಕ್ಷಿಯಾಗಿದ್ದರು.