ಅಧಿಕೃತ ನಿವಾಸ ಕಾವೇರಿಯಲ್ಲಿ ಕೃತಿ ಬಿಡುಗಡೆಗೊಳಿಸಿ ವಿಶ್ವದ ಗಮನ ಸೆಳೆದಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ “ಉದಯವಾಣಿ’ ಪತ್ರಿಕೆಯು ವಿಶೇಷ ಕೃತಿ ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಶ್ರವಣಬೆಳಗೊಳ ಹಾಗೂ ಬಾಹುಬಲಿ ಇತಿಹಾಸದ ಸಮಗ್ರ ಚಿತ್ರಣ ನೀಡುವುದರ ಜತೆಗೆ ಬಾಹುಬಲಿ ಮೂರ್ತಿ, ಮಹಾಮಸ್ತಕಾಭಿಷೇಕ, ಆ ಪರಿಸರದ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳ ಅಂದವಾದ ಚಿತ್ರ ಒಳಗೊಂಡಿರುವುದು ಕೃತಿಯ ಮೆರುಗು ಹೆಚ್ಚಿಸಿದೆ ಎಂದು ತಿಳಿಸಿದರು.
Advertisement
ಶ್ಲಾಘನೆಇದೇ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ಕೃತಿ ಬಿಡುಗಡೆಗೊಳಿಸಿದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಇದೊಂದು ಕಲಾತ್ಮಕ ಕೃತಿ ಎಂದು ಬಣ್ಣಿಸಿದರು.
ಉದಯವಾಣಿಯ ಈ ಪ್ರಯತ್ನ ಶ್ರೀ ಕ್ಷೇತ್ರದ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಅಸಂಖ್ಯಾತ ಭಕ್ತ ಸಮೂಹಕ್ಕೆ ಇದು ಮೆಚ್ಚುಗೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಪೈ ಅವರಿಗೆ ಸಂದೇಶ ರವಾನಿಸಿದರು.