ವಂಡ್ಸೆ: ಅನ್ನದಾಸೋಹ ನಡೆಸುವುದರಿಂದ ದೇಗುಲಗಳಿಗೆ ಭಕ್ತರ ಸಂಖ್ಯೆ ವೃದ್ಧಿಯಾಗುತ್ತದೆ. ಮೊಗವೀರ ಸಮಾಜದ ಎಲ್ಲ ದೇವಸ್ಥಾನಗಳಲ್ಲಿ ಯೂ ಅನ್ನದಾಸೋಹ ಚಿಂತನೆಗಳು ಇವೆ. ಈಗಾಗಲೇ ಉಚ್ಚಿಲದಲ್ಲಿ ನಿತ್ಯ ಅನ್ನದಾಸೋಹ, ಬೆಣ್ಣೆಕುದ್ರುವಿನಲ್ಲಿ ವಾರಕ್ಕೆ 3 ದಿನ ಅನ್ನಸಂತರ್ಪಣೆ ನಡೆಯುತ್ತಿದೆ. ಬಗ್ವಾಡಿಯಲ್ಲಿ ವಾರದಲ್ಲಿ 2 ದಿನ ಅನ್ನದಾಸೋಹ ನಡೆಯುವಂತಾಗಲಿ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಹೇಳಿದರು.
ಬಗ್ವಾಡಿ ಶ್ರೀ ಮಹಿಷಾ ಸುರಮರ್ದಿನಿ ದೇವಸ್ಥಾನದಲ್ಲಿ ಡಾ| ಜಿ. ಶಂಕರ್ ಅವರ 68ನೇ ಜನ್ಮದಿನಾಚರಣೆಯ ಕಾರ್ಯಕ್ರಮ ದಲ್ಲಿ ಅವರು ಅನ್ನದಾಸೋಹ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಸುರೇಶ್ ಆರ್. ಕಾಂಚನ್, ಶಾಸಕ ಯಶ್‌ಪಾಲ್ ಸುವರ್ಣ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಸಮಾಜದ ಗಣ್ಯರಾದ ಡಾ| ಉಮೇಶ್ ಪುತ್ರನ್, ರಮೇಶ ಬಂಗೇರ, ಕೆ.ಕೆ. ಕಾಂಚನ್, ಎಂ. ಎಂ. ಸುವರ್ಣ, ಜಯ ಸಿ. ಕೋಟ್ಯಾನ್, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ರಾಜೇಂದ್ರ ಸುವರ್ಣ, ನಾರಾಯಣ ಬಿ., ನಿತ್ಯಾನಂದ ಜೆ. ಕುಂದಾಪುರ, ಸುಧಾಕರ ಕುಂದರ್, ರತ್ನಾ ಆರ್. ಕುಂದರ್, ರಾಜೇಂದ್ರ ಚಂದನ್, ರಾಜು ತಗ್ಗರ್ಸೆ, ಶ್ಯಾಮಲಾ ಜಿ. ಚಂದನ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಅವರು ಬಗ್ವಾಡಿಯಲ್ಲಿ ಮಧ್ಯಾಹ್ನ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಯೋಜನೆ ರೂಪಿಸಲು ಶ್ರೀ ಮಹಿಷಾಸುರಮರ್ದಿನಿ ಅನ್ನದಾಸೋಹ ನಿಧಿ ಸ್ಥಾಪಿಸಿ ಭಕ್ತರಿಂದ ಹಣ ಸಂಗ್ರಹಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಡಾ| ಜಿ. ಶಂಕರ್ ಹಾಗೂ ಶ್ಯಾಮಿಲಿ ಜಿ. ಶಂಕರ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅವರ ಶ್ರೇಯಸ್ಸಿಗಾಗಿ ಚಂಡಿಕಾ ಹೋಮ ನಡೆಯಿತು. ಆ ಬಳಿಕ 68 ಮಹಿಳೆಯರಿಂದ ಶ್ರೀದೇವಿಗೆ ಏಕಕಾಲದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. 68 ಮಂದಿ ಪುರುಷರು ತುಪ್ಪದ ದೀಪ ಬೆಳಗಿದರು.
ನಿಧಿ ಸಮರ್ಪಣೆ
ಈಗಾಗಲೇ ಸ್ಥಾಪಿಸಲಾದ ಅನ್ನ ದಾಸೋಹದ ನಿಧಿಗೆ ಹೆಸರು ನೋಂ ದಾಯಿಸಿಕೊಂಡ ಸೇವಾರ್ಥಿಗಳು ಸಂಕಲ್ಪ ಮಾಡಿ, ಹುಂಡಿಗೆ ನಿಧಿ ಸಮರ್ಪಿಸಿದರು. ಈ ಸಂದರ್ಭ ಹಿರಿಯ ದಂಪತಿಗಳನ್ನು ಗೌರವಿಸ ಲಾಯಿತು.
ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿ ಗಳನ್ನು ಅಭಿನಂದಿ ಸಲಾಯಿತು. ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಸತೀಶ ಎಂ. ನಾಯ್ಕ ಸ್ವಾಗತಿಸಿದರು. ಪ್ರಭಾಕರ ಸೇನಾಪುರ ವಂದಿಸಿದರು. ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.