ವಂಡ್ಸೆ: ಕೊಲ್ಲೂರಿಗೆ ಸಾಗುವ ಹಾದಿಯ ಮಾರ್ಗ ಮಧ್ಯದಲ್ಲಿ ಎದುರಾಗುವ ತಿರುವಿನಲ್ಲಿರುವ ಬಗ್ವಾಡಿ ಕ್ರಾಸ್‌ನಿಂದ ಆತ್ರಾಡಿ ಮಾರ್ಗ ವಾಗಿ ವಂಡ್ಸೆಗೆ ಸಾಗುವ ದಾರಿ ಯಿದ್ದರೂ ಆ ಮಾರ್ಗವಾಗಿ ಬಸ್ ಸಂಚರಿಸದಿರುವುದು ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಬಹುಕಾಲದ ನಿರೀಕ್ಷೆ ಗಗನ ಕುಸುಮವಾಗಿ ಉಳಿದಿದೆ.
ಹಳ್ಳಿ-ಹಳ್ಳಿಗಳಿಗೆ ಬಸ್ ಸಂಚಾರ ವ್ಯವಸ್ಥೆ ಆರಂಭಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಇಲಾಖೆ ಕ್ರಮಕೈಗೊಂಡಿದ್ದರೂ ಬಗ್ವಾಡಿ ಕ್ರಾಸ್ ಮೂಲಕ ಸಾಗುವ ಬಗ್ವಾಡಿ-ಆತ್ರಾಡಿ-ವಂಡ್ಸೆ ಸಂಪರ್ಕ ಗ್ರಾಮಗಳ ನಡುವೆ 5 ಕೀ.ಮೀ ದೂರ ವ್ಯಾಪ್ತಿಯ ಇಲ್ಲಿ ಗುಣಮಟ್ಟದ ರಸ್ತೆ ಇದ್ದು, ಹೊಸ ಬಸ್‌ಗಳಿಗೆ ಪರವಾನಿಗೆಗೆ ಅವಕಾಶ ಇದ್ದರೂ ಕಂಪೆನಿಗಳು ಹಿಂದೇಟು ಹಾಕುತ್ತಿವೆ. ಹಾಗೆಯೇ ಸರಕಾರಿ ಬಸ್‌ಗಳು ಆ ಮಾರ್ಗವಾಗಿ ಸಾಗುವ ಬಗ್ಗೆ ಹಿಂಜರಿಯುತ್ತಿರುವುದು ಗ್ರಾಮೀಣ ಪ್ರದೇಶದ ಬಸ್ ಸಂಚಾರ ಸೌಕರ್ಯದಿಂದ ವಂಚಿತರಾಗುವಂತೆ ಮಾಡಿದೆ.
ವಿವಿಧೆಡೆ ಬಸ್‌ಗಳಿವೆ ಇಲ್ಲಿಗೆ ಮಾತ್ರ ಯಾಕಿಲ್ಲ?
ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇಗುಲ ಸಹಿತ ಶಾಲಾ ಮಕ್ಕಳು, ಕಾರ್ಮಿಕರು, ಉದ್ಯೋಗಿಗಳಿಗೆ ಅತೀ ಅಗತ್ಯವಿರುವ ಬಸ್ ಸಂಚಾರ ವ್ಯವಸ್ಥೆ ಆರಂಭವಾಗದಿರುವುದು ಒಂದು ರೀತಿಯಲ್ಲಿ ಗ್ರಾಮೀಣ ಪ್ರದೇಶ ವನ್ನು ನಿರ್ಲಕ್ಷ್ಯಗೊಳಿಸಿದಂತಾಗಿದೆ. ಕುಂದಾಪುರದಿಂದ ಹೆಮ್ಮಾಡಿ- ವಂಡ್ಸೆ ಮಾರ್ಗವಾಗಿ ಜಡ್ಕಲ್, ಮುದೂರು, ಕೊಲ್ಲೂರು, ಕೆರಾಡಿಗೆ ಸಾಗುವ ಹಲವು ಬಸ್‌ಗಳಿವೆ. ಆದರೆ ಬಗ್ವಾಡಿ -ಆತ್ರಾಡಿ ಮಾರ್ಗವಾಗಿ ವಂಡ್ಸೆ ಮೂಲಕ ಬಸ್ ಸಂಚಾರವಿಲ್ಲದಿರುವುದು ದುರದೃಷ್ಟಕರ. ಆತ್ರಾಡಿ, ಕಲ್ಮಾಡಿ, ವಾಲಿಕೆರೆ, ಅಡಿಕೆ ಕೊಡ್ಲು, ಬಗ್ವಾಡಿ- ನೂಜಾಡಿ, ಹೊಟ್ಲಬೆ„ಲು ಈ ಭಾಗದಿಂದ ಅನೇಕ ವಿದ್ಯಾರ್ಥಿಗಳು ನೆಂಪು ಪದವಿ ಕಾಲೇಜು ಸಹಿತ ಹೆಮ್ಮಾಡಿ ಕುಂದಾಪುರ ಮುಂತಾದೆಡೆ ಶಾಲಾ ಕಾಲೇಜು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಬಹಳಷ್ಟು ದೂರ ವ್ಯಾಪ್ತಿ ನಡಿಗೆಯಲ್ಲಿ ಸಾಗಿ ಬಸ್ ಅನ್ನು ಅವಲಂಬಿಸಬೇಕಾಗಿದೆ.
ಬಸ್ ಸಂಚಾರ ಅಗತ್ಯ
ಗ್ರಾಮೀಣ ಪ್ರದೇಶಗಳಿಗೆ ಅದರಲ್ಲೂ ಮುಖ್ಯವಾಗಿ ವಿವಿಧ ಗ್ರಾಮಗಳ ಕೊಂಡಿಯಾಗಿದ್ದು, ಸಂಪರ್ಕ ರಸ್ತೆ ಹೊಂದಿರುವ ಪ್ರದೇಶಕ್ಕೆ ಬಸ್ ಸಂಚಾರ ಅಗತ್ಯ. 3,4 ಕೀ.ಮೀ ದೂರ ನಡೆದು ಸಾಗಿ ಬಸ್‌ಗಾಗಿ ಕಾಯುವ ಈ ಭಾಗದ ಜನರ ಆಶೋತ್ತರ ಈಡೇರಿಸುವಲ್ಲಿ ಜನಪ್ರತಿನಿಧಿಗಳು ಶ್ರಮಿಸುವುದು ಸೂಕ್ತ.
-ಉದಯಕುಮಾರ್ ಹಟ್ಟಿಯಂಗಡಿ, ಶಾಖಾಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ
ಡಾ| ಸುಧಾಕರ ನಂಬಿಯಾರ್