Advertisement
ಅಂದಹಾಗೆ, ನಿರ್ದೇಶಕ ಮಲ್ಲೇಶ್ ಅವರಿಗೆ ಇದು ಚೊಚ್ಚಲ ಚಿತ್ರ. ಈ ಹಿಂದೆ ಹಲವು ಸಿನಿಮಾಗಳ ವಿತರಣೆ ಸೇರಿದಂತೆ ಸಿನಿಮಾದ ನಾನಾ ವಿಭಾಗಗಳಲ್ಲಿ ಅನುಭವ ಪಡೆದ ಮಲ್ಲೇಶ್ ಈಗ ಆ ಎಲ್ಲಾ ಅನುಭದೊಂದಿಗೆ ‘ಭಾಗ್ಯಶ್ರೀ’ ಎಂಬ ಚಿತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಆಶಾ ಬಿಳಗಿ, ‘ಬಾಲ್ಯವಿವಾಹ ಎಂಬುದು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಸರ್ಕಾರ ಅದರ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಇವತ್ತಿಗೂ ಅಲ್ಲಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುತ್ತವೆ. ಈ ವಿಚಾರವನ್ನಿಟ್ಟುಕೊಂಡೇ ‘ಭಾಗ್ಯಶ್ರೀ’ ಚಿತ್ರ ಮಾಡಲಾಗಿದೆ’ ಎಂದರು. ಬೇಬಿ ಹೀರಾ ಕೂಡಾ ಚಿತ್ರೀಕರಣದ ಅನುಭವ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡರು ಆಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ಎರಡು ಹಾಡುಗಳನ್ನು ಬರೆಯುವ ಜೊತೆಗೆ ಚಿತ್ರತಂಡಕ್ಕೆ ಒಂದಷ್ಟು ಸಲಹೆಗಳನ್ನು ಕೂಡಾ ನೀಡಿದ್ದಾರಂತೆ. ಅದರಂತೆ ನಿರ್ದೇಶಕರು ಸಮಾಜಕ್ಕೊಂದು ಸಂದೇಶವಿರುವ ಸಿನಿಮಾ ಮಾಡಿದ್ದಾರೆ ಎಂದರು. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ಸಂಜೀವ್ ರೆಡ್ಡಿ ಸಂಕಲನವಿದೆ. ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. Advertisement
ಬಾಲ್ಯವಿವಾಹದ ಸುತ್ತ ಭಾಗ್ಯಶ್ರೀ
12:39 AM Aug 16, 2019 | mahesh |
Advertisement
Udayavani is now on Telegram. Click here to join our channel and stay updated with the latest news.