ಬಗ್ಧಾದ್ : ಬಗ್ಧಾದ್ ನೆರೆಯ ನಗರದಲ್ಲಿಂದು ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದು ಕನಿಷ್ಠ 32 ಮಂದಿ ಮೃತಪಟ್ಟರಲ್ಲದೆ ಡಜನ್‌ಗಟ್ಟಲೆ ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು. ಸದ್ರ್ ನಗರದ ಹೊರವಲಯದಲ್ಲಿ ಇವರು ದಿನದ ಕೂಲಿಗಾಗಿ ಕಾಯುತ್ತಿದ್ದರು. ಬಗ್ಧಾದ್‌ನ ಈಶಾನ್ಯದಲ್ಲಿರುವ ಈ ನಗರವು ಶಿಯಾ ಬಾಹುಳ್ಯ ಹೊಂದಿದ್ದು ನಿರಂತರ ದಾಳಿಗೆ ಗುರಿಯಾಗಿದೆ.
ಪೊಲೀಸ್ ಕರ್ನಲ್ ಒಬ್ಬರ ಪ್ರಕಾರ ಈ ಆತ್ಮಾಹುತಿ ದಾಳಿಯಲ್ಲಿ 32 ಜನರು ಬಲಿಯಾಗಿದ್ದಾರೆ; 61 ಮಂದಿ ಗಾಯಗೊಂಡಿದ್ದಾರೆ. ಕಳೆದ ಶನಿವಾರವಷ್ಟೇ ಇಲ್ಲಿನ ಜನದಟ್ಟನೆಯ ಮಾರ್ಕೆಟ್‌ನಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ 27 ಮಂದಿ ಅಸುನೀಗಿದ್ದರು.