Advertisement

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

03:00 PM Sep 05, 2019 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರ ಸಿಬಿಐ ಮತ್ತು ಇಡಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಬಂಧಿಸಿದ್ದು ರಾಜಕೀಯ ಪ್ರೇರಿತವಾಗಿದೆ ಎಂದು ಮಾಜಿ ಸಚಿವ ಎಚ್.ವೈ. ಮೇಟಿ ಆರೋಪಿಸಿದರು.

Advertisement

ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ ಯಾವುದೇ ತಪ್ಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಮಾತನಾಡಿ, ನಾವು ಕಾಂಗ್ರೆಸ್‌ನವರು ಸೂರ್ಯ ಮುಳುಗದ ರಾಷ್ಟ್ರಕ್ಕೆ ಅಂಜಿಲ್ಲ. ಇನ್ನು ಕೇವಲ ನರೇಂದ್ರ ಮೋದಿ ಅವರಿಗೆ ಅಂಜುವ ಪ್ರಶ್ನೆಯೇ ಇಲ್ಲ. ಡಿ.ಕೆ. ಶಿವಕುಮಾರ ಅವರನ್ನು ಬಿಜೆಪಿಯ ಕೆಲವು ನಾಯಕರು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಸಿಬಿಐ ಮತ್ತು ಇಡಿಯಂತಹ ಸ್ವತಂತ್ರ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರಪಯೋಗಪಡಿಸಿಕೊಂಡು ಕಾಂಗ್ರಸ್‌ ನಾಯಕರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ಹಣಕಾಸು ಇಲಾಖೆಯ ಮಾಜಿ ಸಚಿವ ಪಿ.ಚಿದಂಬರ ಅವರನ್ನು ಬಂಧನದಲ್ಲೂ ಬಿಜೆಪಿ ಕೈವಾಡವಿದೆ ಎಂದು ದೂರಿದರು.

Advertisement

ಬಿಜೆಪಿ ಪಕ್ಷದವರು ಕಾಂಗ್ರೆಸ್‌ ನಾಯಕರನ್ನು ಅಂಜಿಸಲು ಯಾವುದೇ ಕೆಲಸ ಮಾಡಿದರೂ ನಾವು ಅಂಜುವುದಿಲ್ಲ. ಮತ್ತೇ ನಾವು ಗೆದ್ದು ಬರುತ್ತೇವೆ. ಬಿಜೆಪಿ ಕೈವಾಡ ಈಗ ನ್ಯಾಯಾಲಯದವರೆಗೂ ವ್ಯಾಪಿಸಿದೆ ಎಂದು ಆರೋಪಿಸಿದರು.

ಈಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಡಿಕೆಶಿ ಅವರ ಕುರಿತು ಉಪ್ಪ್ಪು ತಿಂದವರು ನೀರು ಕುಡಿಯಲೇಬೇಕು ಮತ್ತು ಗುಜರಾತ ಶಾಸಕರನ್ನು ಅವರೇಕೆ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಗೋವಿಂದ ಕಾರಜೋಳ ಒಬ್ಬ ಅನುಭವಿ ರಾಜಕಾರಣಿ. ಅವರು ಏಕೆ ಹಾಗೇ ಹೇಳಿದರು ನನಗೆ ಗೊತ್ತಿಲ್ಲ. ನಾವು ನಮ್ಮ ಶಾಸಕರನ್ನು ನಮ್ಮ ಪಕ್ಷದ ಆದೇಶದಂತೆ ರಕ್ಷಣೆ ಮಾಡಿದ್ದೇವೆ. ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿಲ್ಲ. ಈಚೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರು. ನಾವು ಅವರ ಹಾಗೆ ಮಾಡಿಲ್ಲ ಎಂದರು.

ಡಿ.ಕೆ. ಶಿವಕುಮಾರ ಬಂಧನವನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರಮುಖರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಕಾಂಗ್ರಸ್‌ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಬಸವಪ್ರಭು ಸರನಾಡಗೌಡ, ರವೀಂದ್ರ ಕಲಬುರಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ನಾಗರಾಜ ಹದ್ಲಿ, ಎನ್‌.ಬಿ. ಗಸ್ತಿ, ಮಂಜುನಾಥ ವಾಸನದ, ಎಸ್‌.ಎನ್‌. ರಾಂಪುರ, ಹಾಜಿಸಾಬ ದಂಡಿನ, ಸುಜಾತಾ ತತ್ರಾಣಿ, ಎಚ್.ಎಲ್. ರೇಷ್ಮಿ, ಎಂ.ಎಲ್. ಶಾಂತಗೇರಿ, ಗೋವಿಂದ ಬಳ್ಳಾರಿ, ಶ್ರೀನಿವಾಸ ಬಳ್ಳಾರಿ, ಚಂದ್ರಶೇಖರ ರಾಠೊಡ, ಮುತ್ತು ಜೋಳದ, ಬಲರಾಮ ನಾಯಕ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next