Advertisement

ಬಾಗಲಕೋಟೆ: ಬೇಂದ್ರೆ ಸಾಹಿತ್ಯ-ಕೃತಿ ಜನಪ್ರಿಯ- ನರಗುಂದ

04:09 PM Feb 01, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಕನ್ನಡ ಸಾಹಿತ್ಯ ಮತ್ತು ಕಾವ್ಯ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿರುವ ಡಾ| ದ.ರಾ. ಬೇಂದ್ರೆ ಸಾಹಿತ್ಯ
ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು ಇಂದಿಗೂ ಜನಪ್ರಿಯವಾಗಿವೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ
ಹೇಳಿದರು.

Advertisement

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್‌.ಆರ್‌. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ
ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ವರಕವಿ ಡಾ| ದ.ರಾ. ಬೇಂದ್ರೆ ಜನ್ಮದಿನ ನಿಮಿತ್ತ ಬುಧವಾರ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಕವಿ-ಕಾವ್ಯ-ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಲೋಕಕ್ಕೆ ಬೇಂದ್ರೆ ನೀಡಿದ ಕೊಡುಗೆ ಸ್ಮರಿಸಬೇಕು. ವಿದ್ಯಾರ್ಥಿಗಳು ಅವರ ಬದುಕು-ಬರಹದಿಂದ ಪ್ರೇರಣೆ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಬೇಂದ್ರೆಯಂತಹ ಸಾಹಿತಿಗಳ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಿ ಅವುಗಳಲ್ಲಿನ ಮೌಲ್ಯ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಕೃತಿಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಕನ್ನಡ ವಿಭಾಗದ ಕೃಷ್ಣ ಲಮಾಣಿ ಸ್ವಾಗತಿಸಿ, ಬೇಂದ್ರೆ ಅವರ ಬದುಕು-ಬರಹ ಕುರಿತು ಮಾತನಾಡಿದರು. ಬೇಂದ್ರೆ ಕುರಿತ
ವಿಡಿಯೋ ಕ್ಲಿಪಿಂಗ್‌ ಎಲ್‌ಸಿಡಿ ಮೂಲಕ ವಿದ್ಯಾರ್ಥಿಗಳಿಗೆ ತೋರಿಸಲಾಯಿತು.

ಈ ವೇಳೆ ಡಾ| ಎಚ್‌.ಎಸ್‌. ಗಿಡಗಂಟಿ, ಉಪನ್ಯಾಸಕಿ ಭುವನೇಶ್ವರಿ ಟೊಂಗಳೆ, ಎನ್‌. ಎಚ್‌. ಹವಾಲ್ದಾರ ಸೇರಿದಂತೆ ಇತರರಿದ್ದರು.
ಸ್ವಪ್ನಾ ಗೌಡರ ಪ್ರಾರ್ಥಿಸಿದರು. ದಿವ್ಯಶ್ರೀ ಬಿಲ್ಲಾರ ನಿರೂಪಿಸಿದರು. ಶ್ರವಣಾ ಸಿದ್ನಾಳ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next