Advertisement
ನಾಡಿನ ಶರಣರು, ಬಸವಭಕ್ತರು ಜ.13 ಮತ್ತು 14ರಂದು ಕೂಡಲಸಂಗಮದ ಕ್ರಾಸ್ ಬಳಿ 10 ಎಕರೆ ವಿಶಾಲ ಜಾಗೆಯಲ್ಲಿ ನಡೆಯಲಿರುವ ಸ್ವಾಭಿಮಾನಿ ಶರಣ ಮೇಳದಲ್ಲಿ ಭಾಗವಹಿಸಬೇಕು ಎಂದು ಪರ್ಯಾಯ ಶರಣ ಮೇಳದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಜಗದ್ಗುರು ಶ್ರೀ ಡಾ|ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
Related Articles
Advertisement
ಐಕ್ಯ ಮಂಟಪದಿಂದ ತಂದ ಬಸವಜ್ಯೋತಿಯಿಂದಲೇ ಶರಣ ಮೇಳ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 7ಕ್ಕೆ ಲಿಂಗಾಯತ ಧರ್ಮದ ಪೀಠಾರೋಹಣ ನಡೆಯಲಿದೆ. ಈ ಪೀಠದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುರುಗಳು ಕೂಡುವುದಿಲ್ಲ. ಬದಲಾಗಿ ವಚನ ಸಾಹಿತ್ಯದ ಧರ್ಮಗ್ರಂಥವನ್ನು ಪೀಠದ ಮೇಲಿಟ್ಟು, ಪೀಠಾರೋಹಣ ಮಾಡಲಾಗುವುದು. ಇದು ಲಿಂ. ಡಾ.ಮಾತೆ ಮಹಾದೇವಿ ಅವರ ಆಶಯ ಕೂಡ ಆಗಿತ್ತು. ಜ.14ರಂದು ಸಮುದಾಯ ಪ್ರಾರ್ಥನೆ ಮುಗಿದ ಬಳಿಕ ಸಾಮೂಹಿಕ ವಚನ ಗಾಯಕ, ವಚನ ನೃತ್ಯ ಮತ್ತು ಶರಣ-ಶರಣೆಯರಿಂದ ಸ್ಫೂರ್ತಿ ಭಕ್ತಿ ಕುಣಿ ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಬಸವ ಭಕ್ತರು ಭಾಗವಹಿಸಬೇಕು ಎಂದು ಕೋರಿದರು.
ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ, ಅಶೋಕ ಬೆಂಡಿಗೇರಿ, ಕೆ.ಬಸವರಾಜಪ್ಪ, ಸಂಗಮೇಶ ಲಿಂಗಾಯತ, ಚಂದ್ರಕಾಂತ ಲುಕ್ ಮುಂತಾದವರು ಉಪಸ್ಥಿತರಿದ್ದರು.
ಬಸವ ಧರ್ಮ ಪೀಠಕ್ಕೆ ದೇಶದ ವಿವಿಧೆಡೆ ಸುಮಾರು 1 ಸಾವಿರಕ್ಕೂ ಹೆಚ್ಚು ಕೋಟಿ ಮೌಲ್ಯದ ಆಸ್ತಿ ಇದೆ. ಪ್ರಸ್ತುತ ಪೀಠಾಧ್ಯಕ್ಷರಾದ ಮಾತೆ ಗಾಂಗಾದೇವಿ ಅವರ ಸರ್ವಾಧಿಕಾರ ಧೊರಣೆ, ಯಾವುದೇ ಕಾರಣವಿಲ್ಲದೆ ಟ್ರಸ್ಟಿಗಳನ್ನು ಹೊರ ಹಾಕಿದ್ದಕ್ಕೆ ಅಸಂಖ್ಯಾತ ಭಕ್ತರಿಗೆ ನೋವಾಗಿದೆ. ಅಲ್ಲದೇ ಕೆಲವರು ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ನಾವು ಪ್ರತ್ಯೇಕ ಪೀಠ, ಸ್ವಾಭಿಮಾನಿ ಶರಣ ಮೇಳ ನಡೆಸುತ್ತಿದ್ದೇವೆ.ಡಾ|ಚನ್ನಬಸವಾನಂದ ಸ್ವಾಮೀಜಿ, ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷರು