ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ವಿಸ್ತರಣೆಗೆ ಹೊಸ ಕಟ್ಟಡಗಳ ಅಗತ್ಯವಿದ್ದು, ಅದಕ್ಕಾಗಿ ಬಿಟಿಡಿಎದಿಂದ 2 ಎಕರೆ 13 ಗುಂಟೆ ಜಾಗೆ ಪಡೆಯಲಾಗಿದೆ. ಇದಕ್ಕೆ ಸರ್ಕಾರದಿಂದ ಅನುದಾನ ಪಡೆಯುವುದು ಮಾತ್ರ ಬಾಕಿ ಇದೆ.
ನನ್ನ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಭೂಮಿ ಪಡೆದಿರುವುದು ಖುಷಿ ತಂದಿದೆ. ಅಲ್ಲದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ 2 ವರ್ಷಗಳ ಸೇವಾ ಅವಧಿ ತೃಪ್ತಿ ತಂದಿದೆ ಎಂದು ಸೇವಾ ನಿವೃತ್ತಿ ಹೊಂದಿದ ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಹೇಳಿದರು.
ನವನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ, ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ 2 ವರ್ಷ 2 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನಮ್ಮ ತಂದೆ ಪ್ರಾಥಮಿಕ ಶಾಲಾ ಶಿಕ್ಷಣರಾಗಿದ್ದರು. ಮೂಲತಃ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ್ದು, ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದರು.
Related Articles
ಬೆಂಗಳೂರಿನಲ್ಲಿ ಎಲ್ಎಲ್ಬಿ ವಿದ್ಯಾರ್ಥಿ ಆಗಿರುವಾಗಲೇ ಕೋರ್ಟನಲ್ಲಿ ವಕೀಲರು ವಾದ ಮಂಡನೆ ಮಾಡುವುದನ್ನು ಕೇಳುತ್ತಿದ್ದೆ. ನಂತರ ಜ್ಯೂನಿಯರ್ ವಕೀಲರಾಗಿ ಕೆಲಸ ಮಾಡಿರುವುದಾಗಿ ತಿಳಿಸಿದರು.
ಕೋರ್ಟ್ನಲ್ಲಿ ಕೇಸ್ಗಳಿಗೆ ಒಳ್ಳೆಯ ತೀರ್ಪು ನೀಡಬೇಕಾದರೆ ವಕೀಲರ ಪಾತ್ರ ಮುಖ್ಯವಾಗಿರುತ್ತದೆ. ಬಾಗಲಕೋಟೆ ಜಿಲ್ಲೆಗೆ
ಆಗಮಿಸಿದಾಗ ಎಲ್ಐಸಿ ಕೇಸ್ಗಳು ಬಹಳಷ್ಟು ಇದ್ದು, ಅತಿಹೆಚ್ಚು ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.
ನಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ 2.13 ಎಕರೆ ಜಾಗವನ್ನು ಬಿಟಿಡಿಎದಿಂದ ಪಡೆಯಲಾಗಿದೆ. ಕೋರ್ಟ್
ಆವರಣದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದ್ದು, ಅನುದಾನ ಬರುವುದಷ್ಟೇ ಬಾಕಿ ಇರುತ್ತದೆ. ಉತ್ತಮವಾಗಿ ಸೇವೆ ಮಾಡಲು ಎಲ್ಲ ವಕೀಲರು ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸಿದರು.
ನೂತನವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ ನೇರಳೆ ಮಾತನಾಡಿ, ಈಗಾಗಲೇ ಮೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಬಾಗಲಕೋಟೆಗೆ ಬಂದಿದ್ದು, ಹಿಂದೆ ನೀಡಿದ ಸಹಕಾರವನ್ನು ತಮಗೂ ನೀಡಲು
ತಿಳಿಸಿದರು.
ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಜಿ.ಎ. ಮೂಲಿಮನಿ, 1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾದೀಶೆ ಹೇಮಾ ಪಸ್ತಾಪುರ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ದಿವಾಣಿ ನ್ಯಾಯಾಧೀಶ ಮುರುಗೇಂದ್ರ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಪಿ.ಪೂಜಾರ, ಸೇರಿದಂತೆ ಜಿಲ್ಲಾ ನ್ಯಾಯಾಲಯದ
ನ್ಯಾಯಾದೀಶರು, ವಕೀಲರು ಉಪಸ್ಥಿತರಿದ್ದರು. ಕುಂಬಾರ ವಕೀಲರು ಪರಿಚಯಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಹಾವರಗಿ ಸ್ವಾಗತಿಸಿದರು.