ಬಾಗಲಕೋಟೆ: ಒಂದಷ್ಟು ಹಾಡು, ಮತ್ತೂಂದಿಷ್ಟು ನೃತ್ಯ, ಇನ್ನೊಂದಿಷ್ಟು ಹಾಸ್ಯ. ಜತೆಗೆ ಆರೋಗ್ಯಕ್ಕಾಗಿ ಓಟದ ಸ್ಪರ್ಧೆ. ಬರೋಬ್ಬರಿ 1500 ಮಹಿಳೆಯರು ಇಳಕಲ್ಲ ಸೀರೆಯುಟ್ಟು ಓಟದಲ್ಲಿ ಭಾಗಿ… ಹೌದು, ಈ ದೃಶ್ಯಗಳು ರವಿವಾರ ಬೆಳ್ಳಂಬೆಳಗ್ಗೆ ಕಂಡು ಬಂದಿದ್ದು ನವನಗರದ ಭೋವಿ ಪೀಠದ ಆವರಣದಲ್ಲಿ.
Advertisement
ಬಾಗಲಕೋಟೆಯ ರಿಯಲ್ ಸ್ಫೋರ್ಟ್ಸ್ ಸಂಸ್ಥೆ, ಆಲ್ ಇಂಡಿಯಾ ಸೆಲ್ಫ್ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 10ಕೆ ಮಾನ್ಸೂನ್ ಮ್ಯಾರಥಾನ್ ಸ್ಪರ್ಧೆ, ವಿಶೇಷ ಗಮನ ಸೆಳೆಯಿತು. ವಿಶ್ವ ದಾಖಲೆಗಾಗಿ ಬಾಗಲಕೋಟೆ ನಗರದಲ್ಲಿ ಮ್ಯಾರಥಾನ್ ಓಟದಲ್ಲಿ ಬೆಳ್ಳಂಬೆಳಿಗ್ಗೆ ಸಾವಿರಾರು ಜನರು ಪಾಲ್ಗೊಂಡಿದ್ದರು.
Related Articles
ಮ್ಯಾರಥಾನ್‌ನಲ್ಲಿ ಸುಮಾರು 1500ಕ್ಕೂ ಹೆಚ್ಚು ಮಹಿಳೆಯರು ಇಳಕಲ್ ಸೀರೆಯುಟ್ಟು ಮ್ಯಾರಥಾನ್ ನಲ್ಲಿ ಓಡಿದರು. ಇಳಕಲ್‌ಯ ಅಭಿವೃದ್ಧಿ ಹಾಗೂ ಪ್ರಚಾರದ ಭಾಗವಾಗಿಯೂ ಮ್ಯಾರಥಾನ್ ಗಮನ ಸೆಳೆಯಿತು. ಮ್ಯಾರಥಾನ್‌ಗೂ ಮುನ್ನ ಎರೊಬಿಕ್ಸ್ ನೃತ್ಯ ನಡೆಯಿತು. ಈ ವೇಳೆ ಮಹಿಳೆಯರು ಕುಣಿದು ಕುಪ್ಪಳಿಸಿದರು.
Advertisement
3ಕೆ, 5ಕೆ ಹಾಗೂ 10ಕೆ ಮ್ಯಾರಥಾನ್‌ಗಳಲ್ಲೂ ಜನ ವಯಸ್ಸಿನ ಹಂಗು ತೊರೆದು ಭಾಗವಹಿಸಿ ತಮ್ಮ ಫಿಟ್ನೆಸ್ ಪ್ರದರ್ಶಿಸಿದರು. ಈ ಬಾರಿ ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಶೀರ್ಷಿಕೆಯಡಿಲ್ಲಿ ಮ್ಯಾರಥಾನ್ ಜರುಗಿತು. ಅಲ್ಟ್ರಾ ಮ್ಯಾರಥಾನ್ ಓಟಗಾರ ಅರುಣ ಭಾರದ್ವಾಜ್, ರಷ್ಯಾ ದೇಶದ ಮಾಸ್ಕೋದ ಮ್ಯಾರಥಾನ್ ಚಾಂಪಿಯನ್ ಅಲೆಕ್ಸಾಂಡ್ರಾ ಅಫಾನಾಸೊವಾ ಮ್ಯಾರಥಾನ್‌ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
ವಿಜಯಪುರ ಅಕ್ಕಮಹಾದೇವಿ ವಿವಿ ವಿಶ್ರಾಂತ ಕುಲಪತಿ ಡಾ| ಮೀನಾ ಚಂದಾವರಕರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ, ಜಗದೀಶ ಹಿರೇಮನಿ, ಪ್ರವೀಣ ಸೋಲಂಕಿ, ಶಿವಕುಮಾರ ಸುರಪುರಮಠ, ವಿಂದ್ಯಾ ಸರದೇಸಾಯಿ, ಗೀತಾ ಗಿರಿಜಾ, ಶಶಿಕಲಾ ಸುರೇಶ ಮಜ್ಜಗಿ ಮುಂತಾದವರು ಪಾಲ್ಗೊಂಡಿದ್ದರು.