Advertisement
ಹೊಸ ಸರ್ಕಾರ ಒಂದೊಂದಾಗಿ ಗ್ಯಾರಂಟಿ ಯೋಜನೆ ಈಡೇರಿಸುತ್ತಿದೆ. ಆದರೆ ಎಲ್ಲ ಗ್ಯಾರಂಟಿ ಭಾಗ್ಯಗಳಿಗೆ ಆಧಾರ ಅಪ್‌ಡೇಟ್ ಇರಬೇಕು. ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಆಗಿರಬೇಕು. ಆಧಾರ ಕಾರ್ಡ್‌ನಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ಇರಬೇಕು. ಹೀಗೆ ಹತ್ತು ಹಲವು ಆಧಾರ ಸಂಬಂಧಿತ ತಾಂತ್ರಿಕ ಸಮಸ್ಯೆಗಳಿಂದಾಗಿ ಗ್ರಾಮೀಣ ಭಾಗದ ಜನ ಆಧಾರ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ.
Related Articles
ಸರ್ಕಾರದ ವಿವಿಧ ಯೋಜನೆಗಳಿಗೆ, ಶಾಲಾ ದಾಖಲಾತಿ, ಬಡ ಮಕ್ಕಳ ವಿದ್ಯಾರ್ಥಿವೇತನ, ಮೊಬೈಲ್ ನಂಬರ ಜೋಡಣೆ, ತಂದೆಯ ಹೆಸರು ತಿದ್ದುಪಡಿ, ನಿಯತಕಾಲಿಕ ಆಧಾರ ಅಪ್‌ಡೇಟ್, ಬಾಲಆಧಾರ, ಹೆಸರು ತಿದ್ದುಪಡಿ, ಅಂಚೆ ವಿಳಾಸ ಬದಲಾವಣೆ ಹೀಗೆ ಎಲ್ಲದಕ್ಕೂ ಆಧಾರ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಸಲೇಬೇಕು.
Advertisement
ಕಲಘಟಗಿ ತಾಲೂಕು ಸುಮಾರು 87 ಕಂದಾಯ ಗ್ರಾಮಗಳು, 27 ಗ್ರಾಪಂಳು, 3 ಹೋಬಳಿ ಕೇಂದ್ರ, 684 ಚಕಿಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಬೃಹತ್ ತಾಲೂಕು ಆಗಿದೆ. ಆದರೂ ಆಧಾರ ಸೇವಾ ಕೇಂದ್ರ ಕಲಘಟಗಿಯ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಇದೆ. ದುಮ್ಮವಾಡ ಮತ್ತು ತಬಕದಹೊನ್ನಳ್ಳಿಯ ನಾಡಕಚೇರಿಯಲ್ಲಿ ಆಧಾರ ಕೇಂದ್ರಗಳು ಇಲ್ಲ. ಮಂಗಳವಾರ (ಆ.29) ಬಂದಿದ್ದ ಜನರಿಗೆ ಅನುಗುಣವಾಗಿ ಮುಂದಿನ ತಿಂಗಳ 26ರ ವರೆಗೆ ಟೋಕನ್ ನೀಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈಗಿರುವ ಜನಸಂದಣಿ ನೋಡಿಕೊಂಡು ಹೋಬಳಿ ಮಟ್ಟದಲ್ಲಾದರೂ ಸ್ಥಳೀಯ ಆಡಳಿತವು ಒಂದು ಆಧಾರ ಕೇಂದ್ರಗಳನ್ನು ಒದಗಿಸಿಕೊಡಬೇಕೆಂಬುದು ತಾಲೂಕಿನ ಜನರ ಬೇಡಿಕೆಯಾಗಿದೆ.
ಇತ್ತೀಚೆಗೆ ಆಧಾರ ನೋಂದಣಿ ಮತ್ತು ತಿದ್ದುಪಡಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಒಂದೇ ಆಧಾರ ಕೇಂದ್ರ ಇರುವುದರಿಂದ ಜನಸಂದಣಿಯಾಗುತ್ತಿದ್ದು, ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ.*ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್ ಮೊಮ್ಮಕ್ಕಳ ಪರವಾಗಿ ನಾನು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಶಾಲಾ ದಾಖಲಾತಿಗಾಗಿ ಆಧಾರ ಕಾರ್ಡ್ ತಿದ್ದುಪಡಿಯಾಗಬೇಕಿದೆ. ಜನರ ಒತ್ತಡ ಹೆಚ್ಚಿರುವುದರಿಂದ ಕಾಯುವಿಕೆ ತಪ್ಪುತ್ತಿಲ್ಲ. ಈಗ ಸರ್ಕಾರದ ಪ್ರತಿಯೊಂದು ಯೋಜನೆಗೂ ಆಧಾರ ಕಾರ್ಡ್ ಬೇಕು. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಇನ್ನೊಂದು ಕೇಂದ್ರ ಆರಂಭಿಸಬೇಕು.
*ಹಜರೇಸಾಬ ಕಲಘಟಗಿ *ಗಿರೀಶ ಮುಕ್ಕಲ್ಲ