Advertisement

ಕಂದಾಯ ಗ್ರಾಮಗಳಾಗಿ ಲಂಬಾಣಿ ತಾಂಡಾ

05:21 PM Feb 16, 2020 | Naveen |

ಬಾಗಲಕೋಟೆ: ರಾಜ್ಯದ ಎಲ್ಲ ಲಂಬಾಣಿ ತಾಂಡಾಗಳನ್ನು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

Advertisement

ನವನಗರದ ಕಲಾ ಭವನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ನಡೆದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರ ಸಮುದಾಯವರು ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಬಂಜಾರ ಸಮುದಾಯ ಕಾಯಕ ಜೀವಿಗಳಾಗಿದ್ದು, ಶಿವನ ಆಶೀರ್ವಾದಿಂದ ಹುಟ್ಟಿಬಂದ ಸೇವಾಲಾಲ್‌ ತಪಸ್ಸಿನಿಂದ ಶಕ್ತಿಯನ್ನು ಪಡೆದು ಪವಾಡ ಪುರುಷರಾದವರು. ಸಮಾಜ ಸುಧಾರಣೆಗೆ ಹತ್ತು ಹಲವಾರು ಪವಾಡ ಮಾಡಿದ್ದಾರೆ.

ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು. ಸರಕಾರ, ರಾಜಕೀಯ ಹಾಗೂ ಇತರೆ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದ ಬಂಜಾರ ಸಮಾಜ, ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದು ತಿಳಿಸಿದರು.

ಬೀಳಗಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಬೀಳಗಿ ಮತಕ್ಷೇತ್ರದಲ್ಲಿ ಒಟ್ಟು 22 ತಾಂಡಾಗಳು ಬರುತ್ತಿದ್ದು, ಪ್ರತಿ ತಾಂಡಾದಲ್ಲಿ ಸಮುದಾಯ ಭವನ ನಿರ್ಮಿಸಲು ತಲಾ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು. ಅಲ್ಲದೇ ಪ್ರತಿಯೊಂದು ತಾಂಡಾಗಳಿಗೆ ವಿಶೇಷ ಅನುದಾನಡಿ ತಾಂಡಾ ಕಾಲೋನಿಗಳಲ್ಲಿ ಸಿಸಿ ರಸ್ತೆ, ಬೋರವೆಲ್‌ಗ‌ಳನ್ನು ಹಾಕಿಸಲಾಗಿದೆ. ಒಟ್ಟು 20 ತಾಂಡಾಗಳಲ್ಲಿ ಎರಡು ತಾಂಡಾಗಳಿಗೆ ಒಂದರಂತೆ ಒಟ್ಟು 20 ಕಾರುಗಳನ್ನು ಒದಗಿಸಲಾಗುತ್ತಿದೆ ಎಂದರು. ನಿರಾಣಿ ಪೌಂಡೇಶನ್‌ ವತಿಯಿಂದ 1 ಲಕ್ಷ ಜನರಿಗೆ ವಿಮೆ ಸೌಲಭ್ಯ ಒದಗಿಸಲು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ವೈದ್ಯಕೀಯ ವೆಚ್ಚದಲ್ಲಿ 20ರಿಂದ 50 ಲಕ್ಷ ರೂ.ಗಳವರೆಗೆ ಹಣ ಪಾವತಿಸಲಾಗುವುದು ಎಂದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಹಾಗೂ ಸ್ವತಂತ್ರ ಸಿಂಧೆ ಮಾತನಾಡಿದರು. ಜಿಪಂ
ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನಗೌಡ ಪರನಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ಜಿಪಂ ಸದಸ್ಯರಾದ ಹೂವಪ್ಪ ರಾಠೊಡ, ರಂಗನಗೌಡ ಗೌಡರ, ಸಮಾಜದ ಪ್ರಮುಖರಾದ ಡಾ|ಬಾಬುರಾಜೇಂದ್ರ ನಾಯಕ, ಬಲರಾಮ ನಾಯಕ, ಗಣಪತಿ ಪೂಜಾರಿ, ವಿಷ್ಣು ಪೂಜಾರಿ, ನಾಗೇಶ ಪೂಜಾರಿ, ಗೋಪಾಲ ನಾಯಕ, ಸತೀಶ ನಾಯಕ, ರಾಜು ಲಮಾಣಿ, ಸುಭಾಸ ಲಮಾಣಿ ನಿಂಗಪ್ಪ ಚವ್ಹಾಣ, ಮಾಧವಿ ರಾಠೊಡ ಮುಂತಾದವರು ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಸಂಸದರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಜೊತೆ ಅಲಂಕೃತಗೊಂಡ ಕುದುರೆ, ಲಂಬಾಣಿ ಕುಣಿತ ತಂಡಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next