Advertisement
ಮೊದಲು ಹೀಗಿರಲಿಲ್ಲಬಹುತೇಕ ಹಳ್ಳಿಗಳಲ್ಲಿ ಇಂದು ರಾಜಕೀಯ ವೈಷಮ್ಯವೇ ಹೆಚ್ಚು. ನಾಯಕರಾದವರು ವೇದಿಕೆ ಹಂಚಿಕೊಳ್ಳಬಹುದು. ಆದರೆ ಗ್ರಾಮೀಣ ಭಾಗದ ಜನರು, ಪ್ರತಿಷ್ಠೆಯಿಂದ ಪರಸ್ಪರ ಸೆಡ್ಡು ಹೊಡೆಯುತ್ತಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪರಸ್ಪರ ಬಾಂಧವ್ಯ-ಸೌಹಾರ್ದತೆಗೆ ಪೆಟ್ಟು ಬಿದ್ದಿದೆ. ಹಾಗೆಯೇ ಲಿಂಗಾಪುರ ಎಸ್.ಕೆ. ಗ್ರಾಮದಲ್ಲೂ ಒಗ್ಗಟ್ಟು ಇರಲಿಲ್ಲ. ಏನೇ ಕೆಲಸ ಮಾಡಬೇಕೆಂದರೂ ಒಂದಿಲ್ಲೊಂದು ಅಡೆತಡೆ ಬರುತ್ತಲೇ ಇದ್ದವು. “ಏನ್ ಮಾಡೋದು ಬಿಡ್ರಿ’ ಎಂಬ ನಿಷ್ಕಾಳಜಿಯ ಮಾತೇ ಕೇಳಿ ಬರುತ್ತಿದ್ದವು. ಆದರೆ ಮಾಜಿ ಸೈನಿಕರ ಗಟ್ಟಿ ನಿರ್ಧಾರ-ಒಂದು ದೇಶಭಕ್ತಿಯ ಕಾರ್ಯಕ್ರಮ, ಇಡೀ ಊರನ್ನೇ ಒಂದು ಮಾಡಿದೆ ಎಂದರೆ ನಂಬಲೇಬೇಕು.
ಸುಮಾರು 1250ಕ್ಕೂ ಹೆಚ್ಚು ಜನ ವಾಸಿಸುವ ಪುಟ್ಟ ಗ್ರಾಮವಿದು. ಇಲ್ಲಿನ ವಿಶೇಷವೆಂದರೆ ಯಾರೂ ನಿರುದ್ಯೋಗಿಗಳು ಇಲ್ಲ. ಈ ಪುಟ್ಟ ಹಳ್ಳಿಯಲ್ಲಿ 43 ಮಂದಿ (8ರಿಂದ 10 ಜನ ಸೇವೆಯಲ್ಲಿದ್ದು, ಬಹುತೇಕರು ನಿವೃತ್ತರಾಗಿದ್ದಾರೆ) ಸೈನಿಕರಿದ್ದಾರೆ. ಇಬ್ಬರು ಪಿಎಸ್‌ಐ ಸಹಿತ ಪಿಎಚ್‌ಡಿ ಮಾಡಿದವರು, ರೈಲ್ವೆ, ಶಿಕ್ಷಣ, ಪೊಲೀಸ್, ಅರಣ್ಯ ಇಲಾಖೆ ಹೀಗೆ ವಿವಿಧ ಇಲಾಖೆಯಲ್ಲಿ ನೌಕರಿ ಮಾಡುವ ಶೇ.70ರಷ್ಟು ಜನರಿದ್ದಾರೆ. ಇನ್ನು ಸುಮಾರು ಶೇ.25ರಷ್ಟು ಜನ ವಿವಿಧ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ.5ರಷ್ಟು ಜನ ಮಾತ್ರ ಇಲ್ಲಿ ರೈತರು-ಹಿರಿಯರು.
Related Articles
Advertisement
ಕಳೆದ 2018ರಲ್ಲಿ ಸೈನಿಕರೊಬ್ಬರು ಸೇವಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದಿದ್ದರು. ಆಗ ಇತರ ಮಾಜಿ ಸೈನಿಕರು, ಸಮಾಜಮುಖಿ ಚಿಂತನೆಯ ಇತರ ನೌಕರರು, ಹಿರಿಯರು ಕೂಡಿಕೊಂಡು ಗ್ರಾಮದಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲು ಮುಂದಾದರು. ಒಬ್ಬರಿಗೇ ಸನ್ಮಾನ ಮಾಡುವ ಬದಲು, ಈವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದವರೆಲ್ಲರಿಗೂ ಗೌರವಿಸಲು ಸಲಹೆ ಬಂತು. ಆಗ “ಸೈನಿಕರಿಗೆ ಸಲಾಂ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಇಡೀ ಊರಿನ ಜನರೆಲ್ಲ ಬಂದು, ಒಂದಾಗಿ ಪಾಲ್ಗೊಂಡಿದ್ದರು. ಆಗ ಹುಟ್ಟಿಕೊಂಡಿದ್ದೇ “ಏಮ್ ಆಫ್ ಲಿಂಗಾಪುರ (ಎಸ್.ಕೆ)’ ಎಂಬ ಮುಂದಾಲೋಚನೆಯ ಗ್ರೂಪ್.
ವಾಟ್ಸಾಪ್‌ನಲ್ಲೇ ಚರ್ಚೆಇಂದು ಸಾಮಾಜಿಕ ಜಾಲತಾಣಗಳ ಸದ್ಭಳಕೆಗಿಂತ ದುರ್ಬಳಕೆಯೇ ಹೆಚ್ಚು. ತಮ್ಮೂರಿನ ಉದ್ಧಾರಕ್ಕಾಗಿ ನೌಕರರು-ಮಾಜಿ ಸೈನಿಕರು ಕೂಡಿಕೊಂಡು ರಚಿಸಿದ್ದು “ಏಮ್ (ಗುರಿ) ಆಫ್ ಲಿಂಗಾಪುರ ವಾಟ್ಸಾಪ್ ಗ್ರೂಪ್’. ಈಗ ಇಂದು ಇಡೀ ಊರು ಒಂದಾಗಲು, ಸಮಾಜಮುಖೀ ಕಾರ್ಯ ಕೈಗೊಳ್ಳಲು ನೆರವಾಗಿದೆ ಎಂಬುದು ವಿಶೇಷ.
ಲಿಂಗಾಪುರ ಎಸ್.ಕೆ. ಎಂಬ ಪುಟ್ಟ ಊರಿನಲ್ಲಿ ಶೇ.95ರಷ್ಟು ಶಿಕ್ಷಣವಂತರು ಹಾಗೂ ವಿವಿಧ ಇಲಾಖೆ-ಖಾಸಗಿ ನೌಕರರು ಇದ್ದೇವೆ. ನಮ್ಮೂರಿನ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ-ರೈತರಿಗೆ ವಿವಿಧ ರೀತಿಯ ತರಬೇತಿ, ಹಳೆಯ ಸಂಸ್ಕೃತಿ ಉಳಿಸಲು ಸ್ಪರ್ಧೆಗಳು, ಸೇನೆಗೆ ಯುವಕರನ್ನು ತಯಾರಿಸಲು, ಸೇನಾ ನೇಮಕಾತಿ ಮಾದರಿಯಯಲ್ಲೇ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ “ಏಮ್ ಆಫ್ ಲಿಂಗಾಪುರ ಎಸ್.ಕೆ’ ಎಂಬ ವಾಟ್ಸಾಪ್ ಗ್ರೂಪ್ ಮಾಡಿದ್ದು, ಅದ ರ ಲ್ಲೇ ಚರ್ಚಿಸಿ, ಗ್ರಾಮದಲ್ಲಿ ಅನುಷ್ಠಾನ ಮಾಡುತ್ತೇವೆ. ಇದಕ್ಕೆ ಎಲ್ಲ ಹಿರಿಯರು-ಕಿರಿಯರು ಒಟ್ಟಾಗಿ ಸಹಕಾರ ಕೊಡುತ್ತಿದ್ದಾರೆ. ನಮ್ಮ ಸಂಘಟನೆ ನೋಂದಣಿ ಮಾಡಿಸಿಲ್ಲ. ಹಾಗೆ ಮಾಡಿದರೆ ಅಧ್ಯಕ್ಷರು-ಪದಾಧಿಕಾರಿಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರೂ ಒಂದೇ-ಎಲ್ಲರೂ ಸದಸ್ಯರೇ. ನಾವೆಲ್ಲ ನಮ್ಮೂರಿಗಾಗಿ ಈ ಕಾರ್ಯ ಮಾಡುತ್ತಿದ್ದೇವೆ.
-ರಾಮಣ್ಣ ಅಲಕನೂರ, ಮಾಜಿ ಸೈನಿಕರು ಮಾದರಿ ಗ್ರಾಮ
ಲಿಂಗಾಪುರ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಅಲ್ಲಿನ ಒಗ್ಗಟ್ಟು, ಸಂಘಟನೆ, ಗ್ರಾಮದ ಬಗ್ಗೆ ಕಾಳಜಿ, ದೇಶಭಕ್ತಿ ಎಲ್ಲವೂ ವಿಶೇಷವಾಗಿದೆ. ಈಚೆಗೆ ಭೇಟಿ ಕೊಟ್ಟಿದ್ದೆ. ಅವರ ಕಾರ್ಯ ಬಹಳ ಇಷ್ಟವಾಯಿತು. ಎಲ್ಲ ಗ್ರಾಮಗಳಲ್ಲೂ ಇಂತಹ ನಿಸ್ವಾರ್ಥರು ಇದ್ದರೆ, ಗ್ರಾಮಗಳು ಮಾದರಿಯಾಗುತ್ತವೆ.
-ಜಯಮಾಲಾ ದೊಡ್ಡಮನಿ, ಅಧೀಕ್ಷಕಿ, ಬಾಲಕಿಯರ ಬಾಲ ಭವನ, ಬಾಗಲಕೋಟೆ ವರದಿ: ಶ್ರೀಶೈಲ ಕೆ. ಬಿರಾದಾರ