Advertisement

ನಡೆ, ನುಡಿ ಮಧ್ಯೆ ಜಾತಿ ಬಲ ಯಾರಿಗೆ?

06:00 AM May 10, 2018 | |

ಬಾಗಲಕೋಟೆ: ಮುಳುಗಡೆಯಿಂದ ನಲುಗಿದ ಬಾಗಲಕೋಟೆ ಕ್ಷೇತ್ರ ಮತ್ತೂಂದು ಚುನಾವಣೆಗೆ ಸಜ್ಜಾಗಿದೆ. ಇಲ್ಲಿ ಹಳೆಯ ಮುಖಗಳೇ ಮತ್ತೆ ಮುಖಾಮುಖೀಯಾಗಿದ್ದಾರೆ. ಇಬ್ಬರದ್ದೂ ಐದು ವರ್ಷ ಆಡಳಿತ ನೋಡಿ, ಮತ ನೀಡಿ ಎಂಬ ಮನವಿ ಕೇಳಿ ಬರುತ್ತಿದೆ.

Advertisement

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎಚ್‌.ವೈ. ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ, ಬಿಜೆಪಿ-ಜೆಡಿಎಸ್‌ ಒಪ್ಪಂದದ ಅಭ್ಯರ್ಥಿಯಾಗಿ ಮೋಹನ ಜಿಗಳೂರ ಕಣದಲ್ಲಿದ್ದಾರೆ. ಇಲ್ಲಿ ಜಾತಿ ಬಲ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಜತೆಗೆ ದಲಿತ ಯುವ ನಾಯಕ ಪರಶುರಾಮ ನೀಲನಾಯಕ, ಭಾರತೀಯ ರಿಪಬ್ಲಿಕನ್‌ ಪಕ್ಷದಿಂದ ಜಪಾನ್‌ನಲ್ಲಿ ಐಟಿ ಉದ್ಯೋಗಿಯಾಗಿ 1.40 ಲಕ್ಷ ವೇತನ ಪಡೆಯುತ್ತಿದ್ದ ಯುವಕ ನಾಗರಾಜ ಕಲಕುಟಕರ ಸೇರಿ ಒಟ್ಟು 12 ಜನ ಕಣದಲ್ಲಿದ್ದಾರೆ. ಆದರೆ, ಮೂವರು ಪಕ್ಷೇತರರು, ಕಾಂಗ್ರೆಸ್‌ನ ಮೇಟಿಗೆ, ಓರ್ವ ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಚರಂತಿಮಠರಿಗೆ ಬೆಂಬಲ ನೀಡಿ ಕಣದಿಂದ ಹಿಂದೆ ಸರಿದಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಸ್ಪರ್ಧೆ ಏರ್ಪಟ್ಟಿದೆ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ, ಈಗ ಮೂರನೇ ಬಾರಿಗೆ ಮೇಟಿ ಮತ್ತು ಚರಂತಿಮಠ ಪರಸ್ಪರ ಮುಖಾಮುಖೀಯಾಗುತ್ತಿದ್ದಾರೆ. ತಲಾ ಒಂದೊಂದು ಬಾರಿ ಇಬ್ಬರೂ ಗೆದ್ದಿದ್ದಾರೆ.

ಒಟ್ಟು ಮತದಾರರು : 2,30,825
ಪುರುಷರು : 1,15,355
ಮಹಿಳೆಯರು : 1,15,453
ಇತರೆ : 17
ಜಾತಿವಾರು ಲೆಕ್ಕಾಚಾರ
ಕುರುಬರು :
35 ಸಾವಿರ
ಎಸ್‌ಸಿ : 32 ಸಾವಿರ
ಮುಸ್ಲಿಂ : 35 ಸಾವಿರ
ಲಿಂಗಾಯತರು : 41 ಸಾವಿರ
(ಪಂಚಮಸಾಲಿ, ರಡ್ಡಿ, ಗಾಣಿಗ, ಬಣಜಿಗರು ಸೇರಿ)
ಮರಾಠಾ, ಕ್ಷತ್ರಿಯರು : 12 ಸಾವಿರ
ಇತರೆ : 66 ಸಾವಿರ

ಐದು ವರ್ಷ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನಗರ- ಗ್ರಾಮೀಣ ಭಾಗದ ಜನರು ನಮ್ಮ ಪರವಾಗಿದ್ದಾರೆ. ಮತ್ತೂಮ್ಮೆ ಆಯ್ಕೆಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ.
– ಎಚ್‌.ವೈ. ಮೇಟಿ, ಕಾಂಗ್ರೆಸ್‌ ಅಭ್ಯರ್ಥಿ

Advertisement

ನನ್ನ  9 ವರ್ಷಗಳ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸ ಬಿಟ್ಟರೆ, ಐದು ವರ್ಷಗಳಲ್ಲಿ ಯಾವ ಕೆಲಸವೂ ಆಗಿಲ್ಲ. ಈ ಬಾರಿ, ಕ್ಷೇತ್ರದ ಜನರು, ದಬ್ಟಾಳಿಕೆ ಮಾಡುವವರಿಗೆ ಪಾಠ ಕಲಿಸಿ, ನನ್ನನ್ನು ಆಯ್ಕೆ ಮಾಡಲಿದ್ದಾರೆ.
– ವೀರಣ್ಣ ಚರಂತಿಮಠ, ಬಿಜೆಪಿ ಅಭ್ಯರ್ಥಿ

– ಶ್ರೀಶೈಲ ಕೆ. ಬಿರಾದಾರ
 

Advertisement

Udayavani is now on Telegram. Click here to join our channel and stay updated with the latest news.

Next