Advertisement

ಬಾಗಲಕೋಟೆ : ದಾಳಿ ವೇಳೆ ನಿಷೇಧಿತ ನೋಟು ನೋಡಿ ದಂಗಾದ ಎಸಿಬಿ ಅಧಿಕಾರಿಗಳು !

09:55 PM Oct 22, 2020 | mahesh |

ಬಾಗಲಕೋಟೆ : ಗ್ರಾಮೀಣ ಕುಡಿಯುವ ನೀರು ಮತ್ತು  ನೈರ್ಮಲ್ಯ ಇಲಾಖೆಯ ಬಾಗಲಕೋಟೆ ಉಪ ವಿಭಾಗದ  ಸಹಾಯಕ ಅಭಿಯಂತರ ಅಶೋಕ ತೋಪಲಕಟ್ಟಿ (ಎ.ಎಸ್. ತೋಪಲಕಟ್ಟಿ) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ 5.15 ಲಕ್ಷ ಮೊತ್ತದ ನಿಷೇಧಿತ ನೋಟು ಪತ್ತೆ ಯಾಗಿದ್ದು, ಅವುಗಳನ್ನು ನೋಡಿದ ಅಧಿಕಾರಿಗಳೂ ದಂಗಾದ ಪ್ರಸಂಗ ನಡೆದಿದೆ.

Advertisement

ಕಳೆದ 2016ರಲ್ಲಿಯೇ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳು ನಿಷೇಧ ಮಾಡಿದ್ದು, ಈಗ ಹಳೆಯ ನೋಟು ಹೊಂದಿದ್ದರೆ ದೊಡ್ಡ ಅಪರಾಧ ಎಂಬುದು ಗೊತ್ತಿದ್ದರೂ ಅಧಿಕಾರಿಯೊಬ್ಬರು ನಾಲ್ಕು ವರ್ಷಗಳಿಂದಲೂ 5.15 ಲಕ್ಷ ಮೊತ್ತದ ಹಳೆಯ ನೋಟು ಇನ್ನೂ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

64 ಲಕ್ಷ ಮೊತ್ತದ ಚಿನ್ನ : ದಾಳಿಯ ವೇಳೆ ಮನೆಯಲ್ಲಿ 64,53,413 ರೂ. ಮೊತ್ತದ 1251 ಗ್ರಾಂ ಚಿನ್ನದ ಆಭರಣ,  ,54,274 ಮೊತ್ತದ 8564 ಗ್ರಾಂ ಬೆಳ್ಳಿಯ ಸಾಮಗ್ರಿ ಪತ್ತೆಯಾಗಿವೆ. ಅಲ್ಲದೇ 5,18,775 ಮೊತ್ತದ ಹೊಸ ನೋಟುಗಳು, 5,15,500 ಮೊತ್ತದ ನಿಷೇಧಿತ ಹಳೆಯ ಕರೆನ್ಸಿ ನೋಟು ಪತ್ತೆಯಾಗಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್-2 ಅಶೋಕ ಶಂಕ್ರಪ್ಪ ತೋಪಲಕಟ್ಟಿ ಅವರ ಕಚೇರಿ,
ವಿದ್ಯಾಗಿರಿಯ 8ನೇ ಕ್ರಾಸ್‌ನ ನಿವಾಸ ಹಾಗೂ 17ನೇ ಕ್ರಾಸ್‌ನಲ್ಲಿ ಇರುವ ಮಹಾಲಕ್ಷ್ಮಿ ಪ್ಯೂರ್ ಗ್ಯಾಸ್ ಎಜನ್ಸಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ, ಬಾಗಲಕೋಟೆ ಡಿಎಸ್‌ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಎಸಿಬಿ ಠಾಣೆಯ ಇನ್ಸಪೆಕ್ಟರ್‌ಗಳಾದ ಸಮೀರ ಮುಲ್ಲಾ, ಸಿಬ್ಬಂದಿಗಳಾದ ಹೂಗಾರ, ಅಚನೂರ, ಪೂಜಾರಿ, ಚುರ್ಚಾಳ, ಕಾಖಂಡಕಿ, ರಾಠೋಡ, ಪಾಟೀಲ, ಮುಲ್ಲಾ, ಹಂಗರಗಿ, ಧಾರವಾಡ ಎಸಿಬಿ ಠಾಣೆಯ ಪಿಐ ಬಿ.ಎ. ಜಾಧವ, ಸಿಬ್ಬಂದಿ ಕಾರ್ತಿಕ, ರವಿ ಯರಗಟ್ಟಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ಮೂರು ತಂಡಗಳು ದಾಳಿಯಲ್ಲಿ ಭಾಗಿಯಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next