Advertisement

Bagalakote;ಸಂಕಷ್ಟ ಎದುರಿಸಿದಷ್ಟು ಸ್ಟ್ರಾಂಗ್ ಆಗುತ್ತೇನೆ: ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್

02:50 PM Mar 30, 2024 | Team Udayavani |

ಬಾಗಲಕೋಟೆ: ನಾವು ಎಷ್ಟು ಸಂಕಷ್ಟ ಎದುರಿಸಿ, ಬೆಳೆಯುತ್ತೇವೆಯೋ, ಅಷ್ಟೇ ಸ್ಟ್ರಾಂಗ್ ಆಗುತ್ತೇವೆ. ವೀಣಾ ಮತ್ತು ವಿಜಯಾನಂದ ಕಾಶಪ್ಪನವರ ಎಲ್ಲಾ ಅಸಮಾಧಾನ ಬಿಟ್ಟು ನಮ್ಮೊಂದಿಗೆ ಚುನಾವಣೆಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಣಾ ಅವರು ಖಂಡಿತವಾಗಿ ನಮ್ಮೊಂದಿಗೆ ಚುನಾವಣೆಗೆ ಬರುತ್ತಾರೆ. ಕಾರಣ ಕಳೆದ 50 ವರ್ಷಗಳಿಂದ ಅವರ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿದೆ. ಕಾಂಗ್ರೆಸ್ ಅಂದರೆ ಒಂದು ದೊಡ್ಡ ಕುಟುಂಬ. ದೊಡ್ಡ ಕುಟುಂಬದಲ್ಲಿ ಅಸಮಾಧಾನ, ಕೆಲ ಭಿನ್ನಾಭಿಪ್ರಾಯ ಸಹಜ. ಅವೆಲ್ಲ ಬಗೆಹರಿಯುತ್ತವೆ. ನಾವು ಎಲ್ಲರೂ ಕಾಂಗ್ರೆಸ್ ಕುಟುಂಬದವರು. ನಮ್ಮ ಉದ್ದೇಶ ಬಿಜೆಪಿ ವಿರುದ್ದ ಗೆಲುವು ಸಾಧಿಸುವುದು ಒಂದೇ ಎಂದು ಹೇಳಿದರು.

ವೀಣಾ ಅವರಾಗಲಿ, ವಿಜಯಾನಂದ ಅವರಾಗಲಿ ಮೌನವಾಗಿ ಉಳಿಯಲ್ಲ. ವಿಜಯಾನಂದ ಅವರು ನಮ್ಮ ಪಕ್ಷದ ಶಾಸಕರಾಗಿದ್ದಾರೆ. ಎಲ್ಲರೂ ಕೂಡಿ, ಒಗ್ಗಟ್ಟಿನಿಂದ ಕೆಲಸ ಮಾಡುವ ನಂಬಿಕೆ ಇದೆ. ನನಗೆ ನಮ್ಮ ಸಮುದಾಯ, ಪಕ್ಷದ ಕಾರ್ಯಕರ್ತರು ಕೂಡಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಎರಡು ದಿನಗಳಲ್ಲಿ ವೀಣಾ ಅವರು ಬಾಗಲಕೋಟೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಚರ್ಚೆ ಮಾಡಿ ನಿರ್ಧಾರ ತಗೆದುಕೊಳ್ಳುತ್ತೇವೆ. ನಾನು ಖುದ್ದಾಗಿ ವೀಣಾ ಅವರೊಂದಿಗೆ ಮಾತಾಡಿಲ್ಲ. ನಮ್ಮ ಹಿರಿಯರು ಮಾತನಾಡುತ್ತಿದ್ದಾರೆ. ಸಂಕಷ್ಟ ಎದುರಿಸಿದಷ್ಟು, ದಿಟ್ಟ ರಾಜಕಾರಣಿಯಾಗಿಯಾಗುತ್ತೇನೆಂಬ ಭರವಸೆ ಇದೆ ಎಂದರು.

ನನಗೊಂದು ಅವಕಾಶ ಕೊಟ್ಟರೆ ಬಾಗಲಕೋಟೆಯ ಎಲ್ಲ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತಾಡುವ ಸಾಮರ್ಥ್ಯ ನನ್ನಲ್ಲಿದೆ. ಒಬ್ಬ ವಿದ್ಯಾವಂತ ಮಹಿಳೆಗೆ ಅವಕಾಶ ಮಾಡಿಕೊಡಿ. ನಿಮ್ಮ ಜೀತದಾಳಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Advertisement

ಹಳೆಯ ಹುಲಿ ರಿಟೈರ್ಡ ಆಗಬೇಕು

ನಾಲ್ಕು ಬಾರಿ ಗೆದ್ದಿರುವ, ಹಳೆಯ ಹುಲಿಯ ವಿರುದ್ಧ ಗೆಲ್ಲುವ ವಿಶ್ವಾಸವಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಳೆಯ ಹುಲಿ ರಿಟೈರ್ಡ್ ಆಗಬೇಕು. ಹೊಸ ಹುಲಿಗಳು ಬರಬೇಕು. ಆಗ ಮಾತ್ರ ಸಮಾಜ ಎಲ್ಲ ರಂಗದಲ್ಲೂ ಮುಂದುವರೆಯುತ್ತದೆ ಎಂದರು.

ರಾಮ ಮಂದಿರ, ಮೋದಿ ಅಲೆ ಈ ಬಾರಿ ನಡೆಯಲ್ಲ. ಚಾಲೆಂಜ್ ಎದುರಿಸಿದಷ್ಟು ಗಟ್ಟಿಯಾಗಿ ಚುನಾವಣೆ ಮಾಡುತ್ತೇವೆ. ರಾಮ ಮಂದಿರ ಎನ್ನುವುದಕ್ಕಿಂತ, ರಾಮರಾಜ್ಯ ಆಗುವುದನ್ನು ನೋಡಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next