Advertisement

ನಿಲ್ಲದ ವರುಣಾರ್ಭಟ; ಸುಸ್ತಾದ ಜನ!  ಮಳೆಗೆ ಕುಸಿದು ಬಿತ್ತು 723 ಮನೆಗಳು

02:44 PM Oct 15, 2020 | sudhir |

ಬಾಗಲಕೋಟೆ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಚಿತ್ತಾ ಮಳೆ ಎಡಬಿಡದೇ ಸುರಿಯುತ್ತಿದ್ದು ರೈತರು, ಸಾಕಪ್ಪಾ ಸಾಕು, ನಿಲ್ಲೋ ಮಳೆರಾಯ ಎಂದು ಕೇಳುವಂತಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 10.6 ಎಂ.ಎಂ ಮಳೆ ಸುರಿದೆ. ಆದರೆ, ನಿರಂತರ ಜಿಟಿಜಿಟಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹೊಲದಿಂದ ದಡಕ್ಕೆ ತರಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮನೆಗೆ ನುಗ್ಗಿದ ನೀರು: ನಿರಂತರ ಮಳೆಯಿಂದ ಜಿಲ್ಲೆಯ ಹುನಗುಂದ ಪಟ್ಟಣದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಜಮಖಂಡಿ ತಾಲೂಕಿನ ಕುಲಹಳ್ಳಿಯಲ್ಲಿ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ 723 ಮನೆಗಳು ಕಳೆದೊಂದು ವಾರದಿಂದ ಬಿದ್ದಿವೆ.

ಜಿಟಿ ಜಿಟಿ ಮಳೆಯಿಂದ ನೆಲಕ್ಕುರುಳಿದ ಮನೆಗಳು
ಸಾವಳಗಿ: ಸಾವಳಗಿ ಹೋಬಳಿಯಾದ್ಯಂತ ಮಂಗಳವಾರ ಸಾಯಂಕಾಲದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಸಾಕಷ್ಟು
ಮನೆಗಳು ನೆಲಕ್ಕುರುಳಿವೆ. ಸಾವಳಗಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಕೃಷಿ ಚಟುವಟಿಕೆಗೆ ತೊಂದರೆಯನ್ನುಂಟು ಮಾಡಿದೆ. ಕೂಲಿ ಕಾರ್ಮಿಕರು ನಿರಂತರ ಮಳೆಯಿಂದ ಹೊರ ಬರದಂತಾಗಿದೆ. ಬಸ್‌ ನಿಲ್ದಾಣದ ಆವರಣ ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ವ್ಯಾಪಾರ-ವಹಿವಾಟುಗಳು ಕೂಡ ಅಷ್ಟಕಷ್ಟೇ ಆಗಿವೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿವೇಕ್ ಒಬೆರಾಯ್ ಮನೆಗೆ ಸಿಸಿಬಿ ದಾಳಿ

ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಸೇರಿದಂತೆ ಸಾವಳಗಿ ಹೋಬಳಿಯಾದ್ಯಂತ 24 ಮನೆಗಳು ಕುಸಿದಿವೆ. ಈ ಪೈಕಿ 2 ಮನೆಗಳು ಪೂರ್ಣ ಕುಸಿದಿದ್ದರೆ 22 ಭಾಗಶಃ ಕುಸಿದಿವೆ. ಸಾವಳಗಿ ಗ್ರಾಮದ ಸಿದ್ದು ರಾಮಪ್ಪ ಗವಳಿ ಎಂಬವರ ಆಕಳು ಮೇಲೆ ಚಪ್ಪರ ಬಿದ್ದು ಆಕಳು ಮೃತಪಟ್ಟಿದೆ. ಕಾಜಿಬೀಳಗಿ ಗ್ರಾಮದ ಗಂಗವ್ವ ಹೊನವಾಡ ಎಂಬವರ ಮೇಲೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ತಹಶೀಲ್ದಾರ್‌ ವೈ.ಎಚ್‌. ದ್ರಾಕ್ಷಿ
ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next