Advertisement

ಬಿಟಿಡಿಎ ವಿರುದ್ಧ ರೈತನ ಆಕ್ರೋಶ

01:09 PM Jun 22, 2019 | Naveen |

ಬಾಗಲಕೋಟೆ: ನವನಗರ-ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಭೂಮಿ ನೀಡಿದ ರೈತನಿಗೆ ಸೂಕ್ತ ಪರಿಹಾರ ಕೊಡದೇ ಬೇಜವಾಬ್ದಾರಿ ತೋರಿದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ರೈತನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದು, ಶುಕ್ರವಾರ ಬಿಟಿಡಿಎ ಮುಖ್ಯ ಕಚೇರಿಯ ಗೇಟ್ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ನಗರದ ಬಸಪ್ಪ ದೊಡ್ಡಮನಿ ಎಂಬ ರೈತ, ನವನಗರದ ಬಿಟಿಡಿಎ ಕಚೇರಿಯ ಮುಖ್ಯ ಗೇಟ್‌ಗೆ ಬೀಗ ಹಾಕಿ ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ. ಈ ವೇಳೆ ಕಚೇರಿಯೊಳಗೆ ಇದ್ದ ಅಧಿಕಾರಿಗಳು ಹೊರ ಬರದೇ ಪರದಾಡಿದರೆ, ಬಿಟಿಡಿಎ ಕೆಲಸಕ್ಕಾಗಿ ಬಂದಿದ್ದ ಜನರು, ಒಳ ಹೋಗಲು ಆಗದೇ ಪರದಾಡಿದರು.

ಬಿಟಿಡಿಎ ಕೆಲ ಅಧಿಕಾರಿಗಳು, ರೈತ ಬಸಪ್ಪನ ಮನವೋಲಿಸಲು ಪ್ರಯತ್ನಿಸಿದರಾದರೂ, ಕಳೆದ ಹಲವು ವರ್ಷಗಳಿಂದ ಹೀಗೆ ಹೇಳಿ, ನನಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ಕೊಡುವವರೆಗೂ ಗೇಟ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಬಿಟಿಡಿಎ ಅಧಿಕಾರಿಗಳಿಗೆ ಪರಿಹಾರ ಕೊಡಲು ತಿಳಿಸಿದರು. ಸುಮಾರು ಹೊತ್ತಿನ ಬಳಿಕ, ಬೀಗ ಹಾಕಿದ ಗೇಟ್ ತೆರವುಗೊಳಿಸಲಾಯಿತು.

ಏನಿದು ಪರಿಹಾರ: ಬಸಪ್ಪ ದೊಡ್ಡಮನಿ ಅವರು ನಗರದ ದಡ್ಡೇನವರ ಕ್ರಾಸ್‌ ಬಳಿ ಭೂಮಿ ಹೊಂದಿದ್ದು, ಕಳೆದ 20 ವರ್ಷಗಳ ಹಿಂದೆ ಬಾಗಲಕೋಟೆ ನಗರ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾದಾಗ, ನವನಗರಕ್ಕೆ ಸ್ಥಳಾಂತರಿಸಲಾಗಿತ್ತು. ಹಳೆಯ ನಗರ ಮತ್ತು ನವನಗರಕ್ಕೆ ಸಂಪರ್ಕ ಕಲ್ಪಿಸಲು ದಡ್ಡೇನವರ ಕ್ರಾಸ್‌ ಬಳಿ, ರೈತ ಬಸಪ್ಪ ಅವರ 1.20 ಎಕರೆ ಜಾಗೆಯನ್ನು ಬಿಟಿಡಿಎ ಸ್ವಾಧೀನಪಡಿಸಿಕೊಂಡಿದೆ. ಆದರೆ, ಈ ಭೂಮಿಗೆ ಈ ವರೆಗೆ ಪರಿಹಾರ ಕೊಟ್ಟಿಲ್ಲ ಎಂಬುದು ರೈತನ ಆಕ್ರೋಶ.

ಬಿಟಿಡಿಎ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಇದೇ ರೈತ, ಕಳೆದ ವರ್ಷ, ನವನಗರ-ಬಾಗಲಕೋಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯನ್ನು ಜೆಸಿಬಿ ಮೂಲಕ ಅಗೆದು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದ. ಇದಕ್ಕೂ ಮುಂಚೆ ತನ್ನ ಭೂಮಿಯಲ್ಲಿ ಹಾಯ್ದು ಹೋಗಿರುವ ಬಿಎಸ್‌ಎನ್‌ಎಲ್ ಕೇಬಲ್ ತಂತಿಗಳನ್ನು ಕಟ್ ಮಾಡಿದ್ದ. ಇದರಿಂದ ಇಡೀ ಜಿಲ್ಲಾಡಳಿತ ಭವನ, ದೂರವಾಣಿ ಸಂಪರ್ಕ ಹಾಗೂ ಇಂಟರ್‌ನೆಟ್ ಸಂಪರ್ಕದಿಂದ ಇಡೀ ದಿನ ವಂಚಿತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next