ಬಾಗಲಕೋಟೆ: ಮುಧೋಳ ತಾಲೂಕು ವಜ್ಜರಮಟ್ಟಿಯ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 110 ಕೆವಿ ಬೀಳಗಿ (ಕಾತರಕಿ) ಗೋಪುರ ಕೊಪ್ಪ ಗ್ರಾಮದ ಹತ್ತಿರ ರವಿವಾರ ಸಂಜೆ ವೇಳೆ ಆಕಸ್ಮಿಕವಾಗಿ ಹಾನಿಗೊಳಗಾಗಿದೆ. 110 ಕೆವಿ ಮಾರ್ಗದ ಮೇಲೆ ಬರುವ ಬೀಳಗಿ, ಕಾತರಕಿ, ಗಿರಿಸಾಗರ, ಬಿಸನಾಳ, ತೋಳಮಟ್ಟಿ, ಶಿರಗುಪ್ಪಿ ಹಾಗೂ 33 ಕೆವಿ ತೆಗ್ಗಿ ಮತ್ತು ಅನಗವಾಡಿ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಬೀಳಗಿ ತಾಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸದರಿ ಗೋಪುರ ಮರು ಜೋಡಣೆಯ ಕಾರ್ಯ ಕೈಗೊಳ್ಳಲಾಗಿದ್ದು, ಜೋಡಣೆಯ ಕಾರ್ಯ ಮಂಗಳವಾರ ಸಂಜೆ ಮುಕ್ತಾಯಗೊಂಡು ವಿದ್ಯುತ್ ಸರಬರಾಜು ಆಗುವ ಸಾಧ್ಯತೆಗಳಿವೆ.
159 ಜನರಿಗೆ ಕೊರೊನಾ ಸೋಂಕು
ಬಾಗಲಕೋಟೆ: ಜಿಲ್ಲೆಯಲ್ಲಿ ಸೋಮವಾರ 148 ಜನ ಕೋವಿಡ್‌ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 159 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಮನೆಯೊಳಗೆ ಒಳಚರಂಡಿ ನೀರು ನಿವಾಸಿಗಳ ಪರದಾಟ : ಪುರಸಭೆ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 10985 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 9925 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 29, ಬಾದಾಮಿ 24, ಹುನಗುಂದ 31, ಬೀಳಗಿ 8, ಮುಧೋಳ 36, ಜಮಖಂಡಿ 31 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 950 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.