Advertisement
ಹೌದು, ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ 14 ನಗರ ಪ್ರದೇಶ, ಸುಮಾರು 510ಕ್ಕೂ ಹೆಚ್ಚು ಹಳ್ಳಿಗಳು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನೇ ನಂಬಿಕೊಂಡಿವೆ.
Related Articles
Advertisement
ಸದ್ಯ ಜಲಾಶಯದಲ್ಲಿ 28.20 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 17.36 ಡೆಡ್ ಸ್ಟೋರೇಜ್ ಇದ್ದು, ಉಳಿದ 10.36 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಇದರಲ್ಲಿ ಮೇ ಮೊದಲ ಅಥವಾ 2ನೇ ವಾರದಲ್ಲಿ ರಾಯಚೂರಿನ ಶಾಖೋತ್ಪನ್ ಕೇಂದ್ರಕ್ಕೆ 2 ಟಿಎಂಸಿ ಅಡಿ ನೀರು ಕೊಡಬೇಕೆಂಬ ಒಪ್ಪಂದವಿದ್ದು, ಈಗಾಗಲೇ ನಿತ್ಯ 2662 ಕ್ಯುಸೆಕ್ ನೀರನ್ನು ರಾಯಚೂರು ವಿದ್ಯುತ್ ಉತ್ಪಾದನೆ ಕೇಂದ್ರಕ್ಕೆ ಬಿಡಲಾಗುತ್ತಿದೆ. ಉಳಿದ 9.36 ಟಿಎಂಸಿ ನೀರನ್ನು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳಿಗಾಗಿ ಬಳಸಿಕೊಳ್ಳಲು ಮೀಸಲಿಡಲಾಗಿದೆ.
ಬಿಜೆಪಿ-ಕಾಂಗ್ರೆಸ್ ಪ್ರತ್ಯೇಕ ನಿಯೋಗಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಅಷ್ಟೊಂದಿಲ್ಲ. ಆದರೆ, ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಹಿಪ್ಪರಗಿ, ಗಲಗಲಿ, ಹಿರೇಪಡಸಲಗಿ ಬ್ಯಾರೇಜ್ ವ್ಯಾಪ್ತಿಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗೆ ಸಂಬಂಧಿಸಿದ 22ಕ್ಕೂ ಹೆಚ್ಚು ಕುಡಿಯುವ ನೀರಿನ ಯೋಜನೆಗಳಿದ್ದು, ಅವುಗಳಿಗೆ ಸಧ್ಯ ನೀರಿನ ಅಭಾವ ಸೃಷ್ಟಿಯಾಗಿದೆ. ಹಿಪ್ಪರಗಿ, ಗಲಗಲಿ, ಹಿರೇಪಡಸಲಗಿ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿವೆ. ಆದ್ದರಿಂದ ಕೊಯ್ನಾದಿಂದ ಕೃಷ್ಣಾ ನದಿಗೆ 4 ಟಿಎಂಸಿ ಅಡಿ ನೀರು ಬಿಡುವಂತೆ ರಾಜ್ಯಸಭೆ ಸದಸ್ಯ ಡಾ|ಪ್ರಭಾಕರ ಕೋರೆ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ನೇತೃತ್ವದ ಬಿಜೆಪಿ ನಿಯೋಗ, ಮಹಾರಾಷ್ಟ್ರ ಸಿಎಂಗೆ ಭೇಟಿ ಮಾಡಿದ್ದರೆ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ರಾಯಬಾಗ ಶಾಸಕ ಶ್ರೀಮಂತ ಪಾಟೀಲ ನೇತೃತ್ವದ ಕಾಂಗ್ರೆಸ್ ನಿಯೋಗ, ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿ ಪ್ರತ್ಯೇಕ ಮನವಿ ಮಾಡಿವೆ.
ಆಲಮಟ್ಟಿ, ನಾರಾಯಣಪುರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗೆ ಯಾವುದೇ ತೊಂದರೆಯಾಗದಂತೆ ನೀರು ಕಾಯ್ದಿರಿಸಲಾಗಿದೆ. ಈ ಬಾರಿ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆಲಮಟ್ಟಿಯ ಹಿನ್ನೀರನ್ನೇ ನಂಬಿಕೊಂಡಿರುವ ಅಥಣಿ, ಜಮಖಂಡಿ, ಬೀಳಗಿ ಭಾಗದಲ್ಲಿ ಸ್ವಲ್ಪ ನೀರಿನ ಬೇಡಿಕೆ ಇದೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಕೊಯ್ನಾ ನೀರು ಬಿಡಿಸುವ ಪ್ರಯತ್ನ ನಡೆದಿದೆ.
•ಶಿವಾನಂದ ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವ ಶ್ರೀಶೈಲ ಕೆ. ಬಿರಾದಾರ