Advertisement

ನವಲಿ ಗ್ರಾಮದ ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಣೆ

04:17 PM Jul 06, 2019 | Suhan S |

ಕನಕಗಿರಿ: ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಗ್ಲೋಬಲ್ ಎಡ್ಜ್ ಸಂಸ್ಥೆಯು ಕಲಿಕೋಪಕರಣ ವಿತರಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ಭಾರತೀಯ ಪುರತತ್ವ ಇಲಾಖೆ ನಿವೃತ ಅಧಿಕಾರಿ ಹಾಗೂ ಸಂಸ್ಥೆಯ ಪ್ರತಿನಿಧಿ ಆನಂದ ತೀರ್ಥ ಹೇಳಿದರು.

Advertisement

ಸಮೀಪದ ನವಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ ಮಕ್ಕಳಲ್ಲಿ ಹೆಚ್ಚಿನ ಸೃಜನಶೀಲತೆ ಇರುತ್ತದೆ. ಅವರು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿ ಎಂದರು.

ನಂತರ ಉಪನ್ಯಾಸಕ ಪವನ ಕುಮಾರ ಗೂಂಡೂರು ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಭೌತಿಕ ವಿಕಾಸದಲ್ಲಿ ಸಂಘ ಸಂಸ್ಥೆಗಳು ತೊಡಗಬೇಕು. ಬೆಂಗಳೂರಿನಿಂದ ಗ್ಲೋಬಲ್ ಎಡ್ಜ್ ಸಂಸ್ಥೆಯು ನವಲಿಯಂತಹ ಹಿಂದುಳಿದ ಹಳ್ಳಿಗಳಿಗೆ ಬಂದು ಮಕ್ಕಳಿಗೆ ಬ್ಯಾಗ್‌, ಕಿಟ್ ನೀಡುತ್ತಿರುವುದು ಶ್ಲಾಘನೀಯ. ಹಳ್ಳಿಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಉನ್ನತ ಸಾಧನೆ ಮಾಡುತ್ತಾರೆ. ಹಳ್ಳಿ ಮಕ್ಕಳು ಬಹುಮುಖ ಪ್ರತಿಭೆ ಉಳ್ಳವರು ಎಂದರು. ಇದೇ ವೇಳೆ ಸಂಸ್ಥೆಯವರಿಗೆ ಶಾಲೆಯವತಿಯಿಂದ ಸನ್ಮಾನಿಸಲಾಯಿತು.

ವಿಷ್ಣು ತೀರ್ಥ ಆದಾಪುರ, ಮುಖ್ಯ ಶಿಕ್ಷಕ ಕನಕಪ್ಪ ದಾಸರ, ವಿಜಯಲಕ್ಷ್ಮೀ, ವೆಂಕಟೇಶ ನವಲಿ, ಶಿಕ್ಷಕ ಪ್ರಶಾಂತ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next