Advertisement

Bollywood: ಮೃಣಾಲ್‌ ಕೈ ಹಿಡಿದುಕೊಂಡು ಬಂದ ಬಾದ್‌ ಷಾ; ಡೇಟಿಂಗ್‌ ಬಗ್ಗೆ ಮೌನ ಮುರಿದ ಗಾಯಕ

12:46 PM Nov 14, 2023 | Team Udayavani |

ಮುಂಬಯಿ: ಸಿನಿರಂಗದಲ್ಲಿ ಗಾಸಿಪ್‌ಗಳು ಹಬ್ಬುವುದು ಹೊಸತಲ್ಲ. ಡೇಟಿಂಗ್‌ ವದಂತಿಗಳು ಆಗಾಗ ಬಿಟೌನ್‌ ವಲಯದಲ್ಲಿ ಹರಿದಾಡುತ್ತವೆ.

Advertisement

ಇತ್ತೀಚೆಗೆ ನಟಿ ಮೃಣಾಲ್‌ ಠಾಕೂರ್‌ ಹಾಗೂ ಗಾಯಕ ಬಾದ್‌ ಷಾ ಅವರಿಬ್ಬರು ಡೇಟ್‌ ಮಾಡುತ್ತಿದ್ದಾರೆ ಎನ್ನುವ ಮಾತೊಂದು ಬಿಟೌನ್‌ ಅಭಿಮಾನಿಗಳ ವಲಯದಲ್ಲಿ ಹರಿದಾಡಿದೆ.

ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಅವರು ದಿವಾಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ಅನೇಕ ಬಿಟೌನ್‌ ಮಂದಿ ಬಂದಿದ್ದರು. ಬಾದ್‌ ಷಾ ಹಾಗೂ ಮೃಣಾಲ್‌ ಠಾಕೂರ್‌ ಕೂಡ ಪಾರ್ಟಿಗೆ ಬಂದಿದ್ದರು.

ಪಾರ್ಟಿಯಿಂದ ವಾಪಸಾಗುವ ವೇಳೆ ಮೃಣಾಲ್‌ ಕೈಹಿಡಿದುಕೊಂಡು ಬಾದ್‌ ಷಾ ಬಂದಿದ್ದಾರೆ. ಇದನ್ನು ನೋಡಿದ  ಪಾಪರಾಜಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಕೆಲ ಫ್ಯಾನ್ಸ್‌ ಗಳು ಮೃಣಾಲ್‌ – ಬಾದ್‌ ಷಾ ಡೇಟಿಂಗ್‌ ನಲ್ಲಿದ್ದಾರೆ ಎಂದಿದ್ದಾರೆ.

ಈ ವಿಡಿಯೋ ವೈರಲ್‌ ಆಗಿದ್ದು, ಇದೀಗ ಈ ಬಗ್ಗೆ ಸ್ವತಃ ಬಾದ್‌ ಷಾ ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement

“ಡಿಯರ್‌ ಇಂಟರ್‌ ನೆಟ್‌ ನೀವು ಏನು ಯೋಚ್ನೆ ಮಾಡುತ್ತಿದ್ದಿರೋ ಹಾಗೇನಿಲ್ಲ” ಎಂದು ನಗುವ ಇಮೋಜಿ ಹಾಕಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಮೃಣಾಲ್‌ ಠಾಕೂರು ತೆಲುಗು ಹುಡಗನನ್ನು ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next