Advertisement

ಬ್ಯಾಡ್ಮಿಂಟನ್‌ ವಿಶ್ವ ಕೂಟ: ಲೀ ಚಾಂಗ್‌ ವೀ ಅಲಭ್ಯ

02:14 AM May 09, 2019 | Sriram |

ಕೌಲಾಲಂಪುರ: ಮಾರಕ ಕ್ಯಾನ್ಸರ್‌ಗೆ ತುತ್ತಾಗಿ ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ವಿಶ್ವಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರ ಮಲೇಷ್ಯಾದ ಲೀ ಚಾಂಗ್‌ ವೀ ಮುಂಬರುವ ವಿಶ್ವ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

ಇದೇ ಮೊದಲ ಸಲ ವಿಶ್ವಕೂಟದಿಂದ ಚಾಂಗ್‌ ವೀ ಹಿಂದಕ್ಕೆ ಸರಿದಿದ್ದಾರೆ ಎನ್ನುವುದು ವಿಶೇಷ. ಸದ್ಯ ಲೀ ವಿಶ್ವ 113ನೇ ಶ್ರೇಯಾಂಕದಲ್ಲಿದ್ದಾರೆ. ಹೀಗಾಗಿ ಅಗ್ರ ಶ್ರೇಯಾಂಕದಲ್ಲಿರುವ ಇಬ್ಬರು ಆಟಗಾರರನ್ನು ಮಾತ್ರ ಕಳುಹಿಸಿ ಕೊಡಲು ಮಲೇಷ್ಯಾಕ್ಕೆ ಅವಕಾಶ ಇರುವುದರಿಂದ ಲೀ ಚಾಂಗ್‌ ವೀಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ವಿಶ್ವ ಕೂಟ ಆ.19-25ರ ತನಕ ಸ್ವಿಜರ್ಲೆಂಡ್‌ನ‌ಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next