ಹೊಸದಿಲ್ಲಿ: “ಜರ್ಮನ್ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ಪಿ.ವಿ.ಸಿಂಧು, ಕೆ. ಶ್ರೀಕಾಂತ್ ,ಲಕ್ಷ್ಯಸೇನ್ ಮತ್ತು ಸೈನಾ ಗೆಲುವಿನ ಆರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕೆ. ಶ್ರೀಕಾಂತ್ ಅವರು ಫ್ರಾನ್ಸ್‌ನ
ಬ್ರೈಸ್ ಲೆವರ್ಡೆಜ್ ವಿರುದ್ಧ 21-10, 13-21, 21-7 ಗೇಮ್‌ಗಳಿಂದ ಮೇಲುಗೈ ಸಾಧಿಸಿದರು. ಇದರೊಂದಿಗೆ ಲೆವರ್ಡೆಜ್ ಎದುರು ಆಡಿದ ನಾಲ್ಕೂ ಪಂದ್ಯಗಳಲ್ಲೂ ಶ್ರೀಕಾಂತ್ ಜಯ ಸಾಧಿಸಿದಂತಾಗಿದೆ. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್ ಚೀನದ ಲು ಗುವಾಂಗ್ ಜು ಅವರನ್ನು ಎದುರಿಸಲಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು 21-8, 21-7ರಿಂದ ಥಾಯ್ಲೆಂಡ್ ಆಟಗಾರ್ತಿ ಬುಸಾನನ್ ಒಂಗ್ಬಾಮ್ರುಂಗಫಾನ್ ಅವರನ್ನು ಮಣಿಸಿದರು. ಇದು ಬುಸಾನನ್ ವಿರುದ್ಧ ಸಿಂಧು ಸಾಧಿಸಿದ 15ನೇ ಗೆಲುವು.
ಆದರೆ ಮಿಶ್ರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್ ಕೆ.-ಎನ್. ಸಿಕ್ಕಿರೆಡ್ಡಿ ಅವರು ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.