Advertisement
ಆದರೆ ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್-ಸಾಯಿ ಪ್ರತೀಕ್, ಮಿಶ್ರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ರನ್ನರ್ ಅಪ್‌ಗೆ ಸಮಾಧಾನಪಡಬೇಕಾಯಿತು. ಭಾರತದ ಮೊದಲ ಪ್ರಶಸ್ತಿ ವನಿತಾ ಡಬಲ್ಸ್ ನಲ್ಲಿ ಬಂತು. ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಚೀನದ ಬಾವೊ ಲಿ ಜಿಂಗ್-ಲಿ ಕ್ವಿಯಾನ್ ಅವರನ್ನು 21-18, 21-11 ಅಂತರದಿಂದ ಮಣಿಸಿ ತಮ್ಮ ಮೊದಲ “ಸೂಪರ್ 300′ ಪ್ರಶಸ್ತಿಯನ್ನೆತ್ತಿದರು. 2022ರಲ್ಲಿ ಇವರು ರನ್ನರ್ ಅಪ್ ಆಗಿದ್ದರು.
ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ವಿಶ್ವದ 119ನೇ ರ್‍ಯಾಂಕ್‌ನ ಚೀನೀ ಶಟ್ಲರ್ ವು ಲುವೊ ಯು ಅವರನ್ನು 21-14, 21-16 ಅಂತರದಿಂದ ಮಣಿಸಿದರು. ಇದು ಸಿಂಧು ಗೆದ್ದ 3ನೇ “ಸಯ್ಯದ್ ಮೋದಿ ಇಂಟರ್‌ನ್ಯಾಶನಲ್’ ಪ್ರಶಸ್ತಿ. ಇದಕ್ಕೂ ಮೊದಲು ಅವರು 2017 ಮತ್ತು 2022ರಲ್ಲಿ ಚಾಂಪಿಯನ್ ಆಗಿದ್ದರು.
ಈ ಸಾಧನೆಯೊಂದಿಗೆ ಸಿಂಧು 2 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಸಿಂಧು ಕೊನೆಯ ಸಲ ಪೋಡಿಯಂ ಏರಿದ್ದು 2022ರಲ್ಲಿ. ಅಂದು ಸಿಂಗಾಪುರ್ ಓಪನ್ ಪ್ರಶಸ್ತಿ ಜಯಿಸಿದ್ದರು. ಈ ವರ್ಷ “ಮಲೇಷ್ಯಾ ಮಾಸ್ಟರ್ ಸೂಪರ್ 500′ ಟೂರ್ನಿಯಲ್ಲಿ ಚಾಂಪಿಯನ್ ಆಗುವ ನಿರೀಕ್ಷೆ ಇತ್ತು. ಆದರೆ ಫೈನಲ್‌ನಲ್ಲಿ ಎಡವಿದರು. ಸೇನ್‌ಗೆ ಸುಲಭ ಜಯ
ಪುರುಷರ ಸಿಂಗಲ್ಸ್ ವಿಭಾಗದ ಫೇವರಿಟ್ ಆಟಗಾರನಾಗಿದ್ದ ಲಕ್ಷ್ಯ ಸೇನ್ ಸಿಂಗಾಪುರದ ಜಿಯ ಹೆಂಗ್ ಜೇಸನ್ ಅವರನ್ನು ಬಹಳ ಸುಲಭದಲ್ಲಿ 21-6, 21-7 ಅಂತರದಿಂದ ಮಣಿಸಿದರು.
Related Articles
Advertisement
ರನ್ನರ್ ಅಪ್ಪುರುಷರ ಡಬಲ್ಸ್ ಫೈನಲ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್-ಸಾಯಿ ಪ್ರತೀಕ್ ಅವರನ್ನು ಚೀನದ ಹುವಾಂಗ್ ಡಿ-ಲಿಯು ಯಾಂಗ್ 21-14, 19-21, 21-17 ಅಂತರದಿಂದ ಹಿಮ್ಮೆಟ್ಟಿಸಿದರು. ಮಿಶ್ರ ಡಬಲ್ಸ್ ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ಥಾಯ್ಲೆಂಡ್‌ನ ಡೆಚಾಪೋಲ್ ಪುವಾರಾನುಕ್ರೋಹ್-ಸುಪಿಸ್ಸರ ಪೆವ್ಸಂಪ್ರಾನ್ ವಿರುದ್ಧ ಗೆಲುವಿನ ಆರಂಭ ಪಡೆದರೂ ಇದೇ ಲಯದಲ್ಲಿ ಸಾಗಲು ವಿಫಲರಾದರು. ಥಾಯ್ಲೆಂಡ್ ಜೋಡಿ 18-21, 21-14, 21-8ರಿಂದ ಗೆದ್ದು ಬಂದಿತು.