Advertisement

Badminton Association: ಏಷ್ಯನ್‌ ಬ್ಯಾಡ್ಮಿಂಟನ್‌ ಸಾಧಕರಿಗೆ ನಗದು ಪುರಸ್ಕಾರ ಘೋಷಣೆ

11:00 PM Mar 07, 2024 | Team Udayavani |

ಹೊಸದಿಲ್ಲಿ: ಏಷ್ಯನ್‌ ಗೇಮ್ಸ್‌ ಮತ್ತು ಏಷ್ಯನ್‌ ಬ್ಯಾಡ್ಮಿಂಟನ್‌ ಟೀಮ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ಪ್ರಶಸ್ತಿ ಗೆದ್ದ ಸಾಧಕರಿಗೆ ಮತ್ತು ಸಹಾಯಕ ಸಿಬಂದಿಗೆ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಗುರುವಾರ ಒಟ್ಟಾರೆ 1.12 ಕೋಟಿ ರೂ. ನಗದು ಪುರಸ್ಕಾರ ಘೋಷಿಸಿದೆ.

Advertisement

ಕಳೆದ ತಿಂಗಳು ಬ್ಯಾಡ್ಮಿಂಟನ್‌ ಏಷ್ಯ ಟೀಮ್‌ ಚಾಂಪಿಯನ್‌ಶಿಪ್‌ನಲ್ಲಿ ಐತಿ ಹಾಸಿಕ ಪ್ರಶಸ್ತಿ ಗೆದ್ದಿದ್ದ ಮಹಿಳಾ ತಂಡಕ್ಕೆ 35 ಲಕ್ಷ ರೂ. ದೊರೆಯಲಿದೆ. 2022ರ ಏಷ್ಯನ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರಿಗೆ 12 ಲಕ್ಷ ರೂ. ನಗದು ಪುರಸ್ಕಾರ ಸಿಗಲಿದೆ.

2022ರ ಏಷ್ಯನ್‌ ಗೇಮ್ಸ್‌ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಎಚ್‌.ಎಸ್‌. ಪ್ರಣಯ್‌ಗೆ 5 ಲಕ್ಷ ರೂ. ಲಭಿಸಲಿದೆ. ಇನ್ನು ಏಷ್ಯನ್‌ ಗೇಮ್ಸ್‌ ನಲ್ಲಿ ಚೊಚ್ಚಲ ಬಾರಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದ ಪುರುಷರ ತಂಡಕ್ಕೆ ಒಟ್ಟಾರೆ 40 ಲ.ರೂ. ನಗದು ಪುರಸ್ಕಾರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next