Advertisement
ಈ ಬಗ್ಗೆ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಮಾಜಿ ಹಿರಿಯ ಉಪಾಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ಅವರು ಮಾಜಿ ವಿಶ್ವಚಾಂಪಿಯನ್ ಆಟಗಾರ ಪ್ರಕಾಶ್ ಪಡುಕೋಣೆ ಹಾಗೂ ಬ್ಯಾಡ್ಮಿಂಟನ್ ಆಟಗಾರ ವಿಮಲ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಹಲವು ಸುತ್ತಿನ ಮಾತುಕತೆ ನಡೆದ ಬಳಿಕ ಅಕಾಡೆಮಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಅದರಂತೆ ಪಡುಕೋಣೆ ಅಕಾಡೆಮಿಯನ್ನು ಉಡುಪಿಯಲ್ಲಿ ಆರಂಭಿಸುವ ಶಾಸಕರ ಮನವಿಗೆ ಈಗ ಒಪ್ಪಿಗೆ ಲಭಿಸಿದೆ.
ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಅತ್ಯಾಧುನಿಕ ತರಬೇತಿ ನೀಡುವ ಉದ್ದೇಶವನ್ನು ಅಕಾಡೆಮಿ ಹೊಂದಿದೆ. ತಂಗಲು ಕೊಠಡಿ ವ್ಯವಸ್ಥೆ, ಊಟೋಪಚಾರ, ತಿಂಡಿ-ತಿನಿಸು, ಶಿಕ್ಷಣ ಸಹಿತ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತದೆ. ಬ್ಯಾಡ್ಮಿಂಟನ್ ಅಸೋಸಿಯೇಶನ್, ಕ್ರೀಡಾಇಲಾಖೆ, ಇನ್ಫೋಸಿಸ್, ಮಾಹೆ ಮೂಲಕ ಸಹಕಾರ ಒದಗಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಅತ್ಯಂತ ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುತ್ತದೆ. ಉಡುಪಿಗೆ ಸನಿಹವಾಗುವ ಜಿಲ್ಲೆಗಳು ಇಲ್ಲಿಯೇ ಬಂದು ತರಬೇತಿ ಪಡೆಯಬಹುದಾಗಿದೆ. ಮಾ.25ಕ್ಕೆ ಸಭೆ
ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನಲ್ಲಿ ಜಿಲ್ಲೆಯ ಪ್ರತಿನಿಧಿಗಳಿರಬೇಕು. ಆದರೆ ಆಜೀವ ಸದಸ್ಯರಿಗೆ ವೋಟಿಂಗ್ ರೈಟ್ ನೀಡುವ ಮೂಲಕ ನಿಯಮಾವಳಿಯನ್ನು ಉಲ್ಲಂ ಸಲಾಗಿದೆ. ಬೈಲಾವನ್ನು ಸರಿಪಡಿಸಿ ಕೇಂದ್ರ ಸರಕಾರದ ಕ್ರೀಡಾ ಮಾರ್ಗ ಸೂಚಿ ಗಳ ಪ್ರಕಾರ ಇದನ್ನು ಸರಿದೂಗಿಸು ವಂತೆ ಅಸೋಸಿಯೇಶನ್‌ಗೆ 4 ತಿಂಗಳ ಅವಧಿ ನೀಡಲಾಗಿದೆ ಎಂದು ಲಿಖೀತ ಆದೇಶ ಮಾಡ ಲಾಗಿದೆ. ಬ್ಯಾಡ್ಮಿಂಟನ್ ಅಸೋಸಿ ಯೇಶನ್‌ನ ಬೈಲಾ ತಿದ್ದುಪಡಿ ಸಹಿತ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲು ಎಲ್ಲ ಜಿಲ್ಲೆಯ ಅಸೋಸಿಯೇಶನ್‌ನವರು ರಘುಪತಿ ಭಟ್ ನೇತೃತ್ವದಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಬ್ಯಾಡ್ಮಿಂಟನ್ ಅಸೋಸಿ ಯೇಶನ್ ಆಫ್ ಇಂಡಿಯಾದ ಅಧ್ಯಕ್ಷರೊಂದಿಗೆ ಮಾ.25ಕ್ಕೆ ಸಭೆ ನಡೆಸಲಿದ್ದಾರೆ.
Related Articles
Advertisement
ಹೇಗಿರಲಿದೆ ಅಕಾಡೆಮಿ?ಪ್ರಸ್ತುತ ಅಜ್ಜರಕಾಡು ಕ್ರೀಡಾಂಗಣ ದಲ್ಲಿ ಅಕಾಡೆಮಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ವಿಶಾಲ ಸ್ಥಳಾವಕಾಶವಿದೆ. ಒಳಾಂಗಣ ಕ್ರೀಡಾಂಗಣ, ಕೊಠಡಿಗಳು ಸಹಿತ ಇರುವ ಮೂಲ ಸೌಕರ್ಯಗಳನ್ನು ಉಪ ಯೋಗಿಸಿಕೊಂಡು ಮತ್ತಷ್ಟು ಸೌಕರ್ಯಗಳನ್ನು ಒದಗಿಸಿ ಅಕಾಡೆಮಿ ಕಾರ್ಯಾಚರಿಸಲಿದೆ. ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರು ಇಲ್ಲಿ ತರಬೇತಿ ನೀಡಲಿದ್ದಾರೆ. ಖ್ಯಾತ ಆಟಗಾರರಾದ ಪ್ರಕಾಶ್ ಪಡುಕೋಣೆ ಮುಖ್ಯಸ್ಥರಾಗಿರಲಿದ್ದು, ವಿಮಲ್ ಕುಮಾರ್ ಅವರು ಮುಖ್ಯ ಕೋಚ್ ಆಗಿರಲಿದ್ದಾರೆ. ಇಲ್ಲಿ ತರಬೇತಿ ನೀಡಿದ ಅನಂತರ ವಿದ್ಯಾರ್ಥಿಗಳನ್ನು ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ನ್ಪೋರ್ಟ್ಸ್ ಎಕ್ಸಲೆನ್ಸ್‌ಗೆ ಹೆಚ್ಚಿನ ತರಬೇತಿಗಾಗಿ ಕಳುಹಿಸಲಾಗುತ್ತದೆ. – ಪುನೀತ್ ಸಾಲ್ಯಾನ್